ಶ್ರೀಮದ್ ಭಾಗವತ ಭಕ್ತಿಪ್ರಧಾನ ಗ್ರಂಥ – ಸ್ವಾಮಿ ಮಂಗಳನಾಥಾನಂದಜೀ ಅಭಿಪ್ರಾಯ.
ಚಳ್ಳಕೆರೆ ಜು.08

ಶ್ರೀಮದ್ ಭಾಗವತವು ಭಕ್ತಿ ಪ್ರಧಾನ ಗ್ರಂಥ ಎಂದು ತುರುವೇಕೆರೆಯ ಮಾದಿಹಳ್ಳಿಯ ಶ್ರೀರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಮಂಗಳನಾಥಾನಂದಜೀ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ನಡೆಯುತ್ತಿರುವ “ಶ್ರೀಮದ್ ಭಾಗವತ ಪ್ರವಚನ ಸಪ್ತಾಹ” ದ ನಾಲ್ಕನೇ ದಿನದ ಸತ್ಸಂಗ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಶ್ರೀಮದ್ ಭಾಗವತದ ವಿಶಿಷ್ಟತೆಗಳ ಕುರಿತು ಪ್ರವಚನ ನೀಡಿದರು. ಭಾಗವತವು ನಾಲ್ಕು ಪುರುಷಾರ್ಥಗಳ ಜೊತೆಗೆ ಭಕ್ತಿ ಯೆಂಬ ಪಂಚಮ ಪುರುಷಾರ್ಥವನ್ನು ತಿಳಿಸುತ್ತದೆ. ಭಾಗವತವನ್ನು “ದರ್ಶನಶಾಸ್ತ್ರ” ಎಂದು ಕರೆಯಬಹುದು.

ಆದ್ದರಿಂದ ಭಾಗವತದ ನಿತ್ಯ ಶ್ರವಣ ಮತ್ತು ಅಧ್ಯಯನ ದಿಂದ ಮೋಕ್ಷ ಪಡೆಯಬಹುದು ಎಂದರು. ಈ ಸತ್ಸಂಗದ ಆರಂಭದಲ್ಲಿ ಭಜನೆಯನ್ನು ಮೈಸೂರಿನ ಶ್ರೀಶಾರದಾ ವಿಶ್ವ ಭಾವೈಕ್ಯ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅಮೋಘಮಯೀ ಮತ್ತು ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಬಾಲಕೃಷ್ಣ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಸದ್ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ, ಯತೀಶ್ ಎಂ ಸಿದ್ದಾಪುರ, ಪ್ರಮೀಳಾ ,ವಿಜಯಲಕ್ಷ್ಮೀ ಸದಾನಂದ, ರಮೇಶ್, ಸಂತೋಷ್, ಆನಂದ, ಪ್ರೇಮಲೀಲಾ, ಪಂಕಜ ಚೆನ್ನಪ್ಪ, ಸುಮನ ಕೋಟೇಶ್ವರ, ಕಾವೇರಿ, ದೊಡ್ಡಜ್ಜಯ್ಯ, ಗೋವಿಂದಶೆಟ್ಟಿ, ರವೀಂದ್ರನಾಥ, ಸರಸ್ವತಿ ಗೋವಿಂದರಾಜು, ಗೀತಾ ಭಕ್ತವತ್ಸಲ, ಮಂಜುಳ ಉಮೇಶ್, ಭಾರತಿ, ವಿಜಯಲಕ್ಷ್ಮಿ, ಅಖಿಲ್, ಜಿ ಯಶೋಧಾ ಪ್ರಕಾಶ್, ಕವಿತಾ, ವಿಮಲಾ, ನಾಗರತ್ನಮ್ಮ, ಪ್ರವಲ್ಲಿಕ ಸೇರಿದಂತೆ ಅಪಾರ ಸಂಖ್ಯೆಯ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ,ಚಳ್ಳಕೆರೆ.