ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಿ – ಬಿ.ಇ.ಓ ಸೈಯಿದಾ.ಅನಿಸ್ ಮುಜಾವರ.
ಇಂಡಿ ಜು.08

ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು. ಮಕ್ಕಳ ಶಿಕ್ಷಣವು ಸಮಾಜದ ಬೆಳವಣಿಗೆಗೆ ಬಹಳ ಮುಖ್ಯ. ಶಿಕ್ಷಣವು ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಸೈಯಿದಾ.ಅನಿಸ್ ಮುಜಾವರ ಹೇಳಿದರು.ಸೋಮವಾರ ಪಟ್ಟಣದ ಬಿ.ಇ.ಓ ಕಚೇರಿಯಲ್ಲಿ ತಾಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಟಿ) ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಮಕ್ಕಳು ದಿನಾಲೂ ಶಾಲೆಗೆ ಬರುವಂತೆ ಪ್ರೋತ್ಸಾಹಿಸಿ. ಅವರ ಕಲಿಕೆಗೆ ಮಾರ್ಗದರ್ಶನ ನೀಡಿ. ಅಂದಾಗ ಶಿಕ್ಷಣದ ಗುರಿ ತಲುಪಲು ಸಾಧ್ಯ ಎಂದರು.ನೂತನವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಸೈಯಿದಾ ಅನಿಸ್ ಮುಜಾವರ ಅವರನ್ನು ತಾಲೂಕ ಜಿಪಿಟಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್ ನಡುಗಡ್ಡಿ, ತಾಲೂಕ ಜಿಪಿಟಿ ಸಂಘದ ಅಧ್ಯಕ್ಷ ಶಂಕರ ಕೊಳೆಕರ, ಜಿಲ್ಲಾಧ್ಯಕ್ಷ ಚಂದ್ರಶೇಖರ ಹಕಾರಿ, ಕಾರ್ಯದರ್ಶಿ ಹನುಮಂತರಾಯ ಪೂಜಾರಿ, ಖಜಾಂಚಿ ಶಶಿಕುಮಾರ ವಡ್ಡರ, ಉಪಾಧ್ಯಕ್ಷ ಸೋಮಲಿಂಗ ಅಂಗಡಿ, ರೇಣುಕಾ ರೇಬಿನಾಳ ಹಾಗೂ ರೇಶ್ಮಾ ಪವಾರ, ಪೂಜಾ ಕಾಂಬಳೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.