ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ – ಜೆಡಿಎಸ್ ಘಟಕ ದಿಂದ ಪ್ರತಿಭಟನೆ.

ಇಂಡಿ ಜು.08

ರಾಜ್ಯ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದು ಎರಡು ವರ್ಷಗಳ ಅವಧಿಯಲ್ಲಿ ಹಲವಾರು ಹಗರಣಗಳು ಕೋಟ್ಯಂತರ ರೂಪಾಯಿಗಳ ಅವ್ಯಹಾರ ಖಂಡಿಸಿ. ರಾಜ್ಯ ಜೆಡಿಎಸ್ ಘಟಕದ ಕರೆಯ ಮೇರೆಗೆ ದಿನಾಂಕ 8.07.2025 ರಂದು ಇಂಡಿ ಜೆಡಿಎಸ್ ಮುಖಂಡರಾದ ಬಿ.ಡಿ ಪಾಟೀಲರ ನೇತೃತ್ವದಲ್ಲಿ ಪಟ್ಟಣದ ಮಿನಿ ವಿಧಾನ ಸೌದ ವರೆಗೆ ಹೋಗಿ ನೂರಾರು ಕಾರ್ಯಕರ್ತರು ಗ್ರೇಡ್ 2 ತಹಶೀಲ್ದಾರ್ ಆರ್.ಬಿ ಮೂಗಿಯವರಿಗೆ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಬಿ.ಡಿ ಪಾಟೀಲರು ಮಾತನಾಡುತ್ತಾ. ಪರಿಶಿಷ್ಠ ಪಂಗಡದ ಜನಾಂಗದ ನ್ಯಾಯ ಬದ್ಧ ಹಣವನ್ನು ವಾಲ್ಮೀಕಿ ನಿಗಮದ ಕೋಟ್ಯಂತರ ರೂಪಾಯಿಗಳ ಅವ್ಯಹಾರ ಹಾಗೂ ಆಳಂದ ಶಾಸಕ ಬಿ.ಆರ್ ಪಾಟೀಲರು ಆರೋಪಿಸಿದ ವಸತಿ ಹಗರಣ ನಾಚಿಕೆ ಗೇಡಿನ ಸಂಗತಿ ಯಾಗಿದೆ. ಪಂಚ ಗ್ಯಾರಂಟಿಗಳನ್ನು ಅರ್ಧಮರ್ಧ ನೀಡಿ ಬೆಲೆ ಯೇರಿಕೆ ಮುಖಾಂತರ ಬಡ ಮದ್ಯಮ ವರ್ಗದ ಜನರಿಗೆ ಹೈರಾಣಿಸಿದ ರಾಜ್ಯ ಸರ್ಕಾರ ಬಡವರ ವಿರೋಧಿ ಎಂದು ಖಂಡಿಸಿದರು. ಅದೆ ರೀತಿಯಲ್ಲಿ ಕೃಷ್ಣಾ ಕಾಲೂವೆಗಳ ದುರಸ್ತಿ ಮಾಡಲು ಸರ್ಕಾರದ ಬಳಿ ಹಣವಿಲ್ಲ, ಹಿರೇಬೇವನೂರಿನ ಹಾಗೂ ನಾದ ಗೋಳಸಾರ, ಮಿರಗಿ ಮುಂತಾದ ಗ್ರಾಮಗಳಲ್ಲಿ ಕೃಷ್ಣಾ ಕಾಲೂವೆಗಳ ವಿತರಣಾ ಕಾಲುವೆಗಳು ಮುಚ್ಚಿ ಹೋಗಿವೆ ದುರಸ್ತಿ ಕಾಣದೆ ರೈತರು ಕಂಗಾಲಾಗಿದ್ದಾರೆ. ಗುತ್ತಿ ಬಸವಣ್ಣ ಏತ ನೀರಾವರಿಯ ಕೊನೆಯ ಹಳ್ಳಿಗಳಲ್ಲಿ ನೀರು ಕನಸಿನ ಮಾತು. ರೇವಣಸಿದ್ದೇಶ್ವರ ಏತ ನೀರಾವರಿ ಕಾಮಗಾರಿ ತ್ವರಿತವಾಗಿ ಕಾಮಗಾರಿ ಪ್ರಾರಂಭಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಜೆಡಿಎಸ್ ಮುಖಂಡರಾದ ಅಯೂಬ್ ನಾಟೀಕರ, ಶ್ರೀಶೈಲ ಗೌಡ ಪಾಟೀಲ್, ಎಸ್.ಐ.ಟಿ.ಯುನ ಭಾರತಿ ವಾಲಿ ಮಾತನಾಡಿದರು. ಪ್ರತಿಭಟನೆಯಲ್ಲಿ ಭೀಮ ಪೂಜಾರಿ, ಸಿದ್ದು ಡಂಗಾ ಶ್ರೀಮಂತ ಪೂಜಾರಿ, ಮಹಿಬೂಬ ಬೇವನೂರ, ಹಣಮಂತ ಹೂನ್ನಳಿ, ದುಂಡು ಬಿರಾದಾರ, ಮಲಗು. ಪೂಜಾರಿ, ಬಸವರಾಜ ಹಂಜಗಿ, ರಾಜು ಮುಲ್ಲಾ, ಮಾಳು ಮ್ಯಾಕೇರಿ, ನಾರಾಯಣ ವಾಲಿಕಾರ, ಇಸಾಕ್ ಸೌದಾಗರ, ಶಾಮ ಪೂಜಾರಿ. ಪಜಲು ಮುಲ್ಲಾ, ಶಿವಾಜಿ. ಬೀರಪ್ಪಗೋಳ. ವಿಠ್ಠಲ. ಮೇಸ್ತ್ರಿ. ಲಕ್ಕಿ. ಲಚ್ಯಾಣ. ಸುದರ್ಶನ ಉಪಾಧ್ಯಾಯ. ಯಶವಂತ. ಕಾಡೆಗೋಳ, ವಿಠ್ಠಲಕಾಕಾ ಮಿರಗಿ, ಸಾಗರ ಮಾನೆ, ಮುಂತಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button