“ಜುಲೈ 1. ರಂದು ವ್ಯಾಸ ಪೂರ್ಣಿಮಾ ಮತ್ತು ಗುರು ಪೂರ್ಣಿಮಾ ಆಚರಣೆ”…..

ವೇದ ವ್ಯಾಸರ ಜನ್ಮ ದಿನವನ್ನೇ ನಾವು ಗುರು ಪೂರ್ಣಿಮಾ ವೆಂದು ಆಚರಿಸುತ್ತೇವೆ. ಆಷಾಡ ಮಾಸದ ಹುಣ್ಣಿಮೆಯ ದಿನ ಗುರು ಪೂರ್ಣಿಮಾ ಆಚರಿಸಲಾಗುತ್ತದೆ. ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರ ಗುರುಸಾಕ್ಷಾತ್ ಪರಬ್ರಹ್ಮ ತಸ್ಮೖೆ ಶ್ರೀ ಗುರುವೇ ನಮಃ ಈ ಸಾಲುಗಳೇ ಗುರುವಿನ ಮಹತ್ವವನ್ನು ಸಂಪೂರ್ಣವಾಗಿ ತಿಳಿಸಿ ಬಿಡುತ್ತವೆ. ಎಲ್ಲಾ ಮಕ್ಕಳಿಗೂ ತಾಯಿ ತಂದೆಯೇ ಮೊದಲ ಗುರು. ಮನೆಯ ಮೊದಲ ಪಾಠ ಶಾಲೆ ತನ್ನ ಮಕ್ಕಳಿಗೆ ಮೊದಲನೆಯ ಶಿಕ್ಷಕಿ ತಾಯಿ. ಇಲ್ಲಿ ಗುರುವೇ ಎಲ್ಲವೂ ಮತ್ತು ಅವರಿಂದಲೇ ಎಲ್ಲವೂ ಅನ್ನುವುದು ಸ್ಪಷ್ಟವಾಗುತ್ತದೆ. ಗುರುವಿನ ಸ್ಥಾನ ತುಂಬಾ ಪವಿತ್ರವಾದದ್ದು, ಜವಾಬ್ದಾರಿವಾದದ್ದು. ಈ ಸಮಾಜಕ್ಕೆ ಉತ್ತಮ ನಾಗರಿಕರನ್ನು ಕೊಡುವ ಸೃಷ್ಟಿಕರ್ತರು ಗುರು. ಮನುಷ್ಯನಾದ ಮೇಲೆ ತನ್ನ ಜೀವನದಲ್ಲಿ ಏನನ್ನಾದರೂ ಸಾಧಿಸ ಬೇಕೆಂದು ಕೊಂಡಿರುತ್ತಾರೆ. ಗುರಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದವರು ಗುರು. ‘ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು’ ಅನ್ನೋ ಗಾದೆ ಮಾತು ತುಂಬಾ ಅರ್ಥ ಪೂರ್ಣವಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು. ತಲುಪ ಬೇಕೆಂದರೆ ಗುರುವಿನ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ಇರಲೇ ಬೇಕು. ಗುರುಗಳ ಸಹಾಯದಿಂದ ಮಾತ್ರ ನಾವು ಅಂದುಕೊಂಡ ಗುರಿ ತಲುಪ ಬಹುದು. ಗುರು ವೇಂದರೆ ಕೇವಲ ಶಿಕ್ಷಕರಲ್ಲ ಜೀವನದಲ್ಲಿ ಸರಿಯಾದ ದಾರಿ ತೋರುವ ಪ್ರತಿಯೊಬ್ಬರೂ ಗುರುಗಳೇ ಇಂತಹ ಎಲ್ಲಾ ಗುರು ವೃಂದಕ್ಕೂ ಗುರು ಪೂರ್ಣಿಮೆಯ ಶುಭಾಶಯಗಳು.

– ವಿ.ಎಂ.ಎಸ್.ಗೋಪಿ ✍
ಲೇಖಕರು, ಸಾಹಿತಿಗಳು
ಬೆಂಗಳೂರು.