ಮಾಜಿ ಸಚಿವರ ಸಭೆಗೆ ಅಡ್ಡಿ ಪಡಿಸಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು – ವಜಾ ಮಾಡಲು ಒತ್ತಾಯ.
ವಿಜಯನಗರ ಜು.09

ವಿಜಯನಗರ ಜಿಲ್ಲೆಯ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಅಲೆಮಾರಿ, ಬುಡ್ಗ ಜಂಗಮ . ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹೋರಾಟ ಹಮ್ಮಿಕೊಳ್ಳಲಾಯಿತು. ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು. ದಿನಾಂಕ:05.07.2025 ರಂದು ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಆಂಜನೇಯ ಸಾಹೇಬರ ನೇತೃತ್ವದಲ್ಲಿ ಅಲೆಮಾರಿಗಳ ರಾಜ್ಯ ಸಮ್ಮೇಳನಕ್ಕೆ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಗೆ 49 ಅಲೆಮಾರಿ ಸಮುದಾಯದ ಮುಖಂಡರು ಹಾಗೂ ರಾಜ್ಯಾಧ್ಯಕ್ಷರನ್ನು ಮಾತ್ರ ಆಹ್ವಾನಿಸಿತ್ತು. ಆಹ್ವಾನ ವಿಲ್ಲದಿದ್ದರು ಮಾನ್ಯ ನಿಗಮದ ಅಧ್ಯಕ್ಷರು ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಹೆಚ್.ಆಂಜನೇಯ ಸಾಹೇಬರ ಸಭೆ ನಡೆಸುವಂತೆ ಸಭಾ ಮಂಟಪಕ್ಕೆ ಬಂದು ವಿನಾಃಕಾರಣ ಗೊಂದಲವನ್ನು ಉಂಟು ಮಾಡಿ ನಮ್ಮ ಸನ್ಮಾನ್ಯ ಮಾಜಿ ಸಚಿವರಿಗೆ ಹಾಗೂ ಸಭೆಯನ್ನು ಆಯೋಜಿಸಿರುವಂತ ನಮ್ಮ ಅಲೆಮಾರಿ ಸಮುದಾಯದ ಮುಖಂಡರಿಗೂ ಬಾಯಿಗೆ ಬಂದಂತೆ ಮಾತನಾಡಿ ಅವರು ಏಕ ಪಕ್ಷೀಯವಾಗಿ ಕೆಲಸ ಮಾಡುವವರ ವಿರುದ್ಧ ಧ್ವನಿ ಎತ್ತಿದ 7-ಜನ ಸಮುದಾಯದ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಿರುತ್ತಾರೆ. ಮಾನ್ಯ ನಿಗಮದ ಅಧ್ಯಕ್ಷರು, ಅಲೆಮಾರಿ ಸಮುದಾಯದ ಒಬ್ಬ ಜವಾಬ್ದಾರಿ ಮುಖಂಡರಾದರೂ ಕೂಡ ಏಕ ಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹಿರವಾಗಿದೆ. ಅವರು ಏಕ ಪಕ್ಷೀಯವಾಗಿ ಕೆಲಸ ಮಾಡಿರುವ ದಾಖಲೆಗಳು ನಮ್ಮ ಬಳಿ ಇವೆ. ಹಾಗೂ ಆನಂದ್ ಕುಮಾರ್ ಏಕಲವ್ಯ, ಇವರು ನಿಗಮದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಇವರು ಸಹ ಅಲೆಮಾರಿ ಮುಖಂಡರನ್ನು ಸೂಳೇ ಮಕ್ಕಳು ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಆದ್ದರಿಂದ ಇವರನ್ನು ಸಹ ಕೂಡಲೇ ಅಮಾನತ್ತು ಗೊಳಿಸಬೇಕು.

ಆದ್ದರಿಂದ ಅತೀ ಶೀರ್ಘದಲ್ಲಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಿ, ಮಾನ್ಯ ನಿಗಮದ ಅಧ್ಯಕ್ಷರು, ನಡೆಸುವ ಸಭೆಯನ್ನು ಅಡ್ಡಿ ಮಾಡಿದ ಸಲುವಾಗಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆ.ಆಂಜನೇಯ ಸಾಹೇಬರಿಗೆ ಹಾಗೂ ನಮ್ಮ 49 ಸಮುದಾಯದ ಸಮುದಾಯಕ್ಕೂ ಬಹಿರಂಗವಾಗಿ ಕ್ಷಮೆಯಾಚಿಸ ಬೇಕು ಮತ್ತು 7 ಜನರಾದ, ಶ್ರೀ ಬಸವರಾಜ ನಾರಾಯಣಕರ್, ಶ್ರೀ ಲೋಹಿತಾಕ್ಷ, ಶ್ರೀ ಚಾವಡೆ ಲೋಕೇಶ, ಶ್ರೀ ವೀರೇಶ, ಶ್ರೀ ಶಿವು, ಶ್ರೀ ಸುಭಾಷ್ ಚವಣ್, ಶ್ರೀ ಶಾಂತಕುಮಾರ ರವರ ಮೇಲೆ ಮಾಡಿರುವ ಸುಳ್ಳು ಆರೋಪದ ದೂರನ್ನು ಅತ್ಯಂತ ತ್ವರಿತವಾಗಿ ಹಿಂಪಡೆದು, ನಿಗಮದ ಆವರಣದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಹೆಚ್.ಆಂಜನೇಯ ಸಾಹೇಬರಿಗೆ ಹಾಗೂ ದೂರು ದಾಖಲು ಮಾಡಿದ 7 ಜನರಿಗೆ ಕ್ಷಮೆಯಾಚಿಸ ಬೇಕು. ಒಂದು ವೇಳೆ ಕ್ಷಮೆ ಯಾಚಿಸಲು ಹಿಂದೆಟು ಹಾಕಿದರೆ ರಾಜ್ಯಾದ್ಯಂತ, ವಾಸಿಸುವ 49 ಅಲೆಮಾರಿ ಸಮುದಾಯದ ರಾಜ್ಯ ರಾಜಧಾನಿಯಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಧರಣಿ ಮಾಡಲಾಗುವುದು, ಧರಣಿ ಮಾಡಲು ಅವಕಾಶ ಕೊಟ್ಟರೆ, ನಾವು ಅಲೆಮಾರಿಗಳೂ ಒಂದೊತ್ತಿನ ಊಟಕ್ಕೂ ಪರದಾಡುವವರು, ಎಷ್ಟು ದಿನ ಧರಣಿ ಮಾಡುತ್ತೇವೋ, ಧರಣಿ ಮಾಡಲು ಬಂದಂತಹ ಪ್ರತಿಯೊಬ್ಬ ವ್ಯಕ್ತಿಯ ಕುಟುಂಬದ ವೆಚ್ಚದ ಜವಾಬ್ದಾರಿ ಸರಕಾರವೇ ಭರಿಸ ಬೇಕಾಗುತ್ತದೆ ಎಂದು ಎಚ್ಚರಿಸುತ್ತಾ ಮನವಿ ಮಾಡುತ್ತೇವೆ ಈ ಸಂದರ್ಭದಲ್ಲಿ ಅಲೆಮಾರಿ, ಬುಡಕಟ್ಟು, ಬುಡ್ಗ ಜಂಗಮ ಮುಖಂಡರುಗಳಾದ.ಸಣ್ಣ ಮಾರೆಪ್ಪ, ಬುಡ್ಗ ಜಂಗಮ್,ಮಂಜಪ್ಪ, ಸುಡುಗಾಡು ಸಿದ್ದರು,ಜೆ.ರಮೇಶ, ಹಂಡಿ ಜೋಗಿ,ಹಂಪಯ್ಯ, ಶಿಂದೋಳ್,ಕಿನ್ನೂರಿ ಶೇಖಪ್ಪ, ಸುಡುಗಾಡು ಸಿದ್ದರುಸಿದ್ದು ಬೆಲಗಲ್, ಶಿಳ್ಳೆಕ್ಯಾತ ಸಮಾಜಶೇಖರ್, ಚನ್ನದಾಸರ್ ಇನ್ನು ಹಲವಾರು ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ