ದಿನಾಂಕ 14. ರಂದು “ಗಡಿನಾಡು ಉತ್ಸವ” ಕ್ಕೆ ರಾಜ್ಯಾಧ್ಯಕ್ಷ ಡಾ, ಬಿ.ಎನ್ ಜಗದೀಶ್ – ಅಥಣಿಗೆ ಆಗಮನ. 

ಅಥಣಿ ಡಿ.13

ತಾಲೂಕಿನ ಗಡಿನಾಡು ಬಳ್ಳಿಗೇರಿ ಗ್ರಾಮದಲ್ಲಿ ದಿನಾಂಕ 14 ರಂದು ಸಂಜೆ 6 ಗಂಟೆಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ “ಗಡಿನಾಡು ಉತ್ಸವ” ಎಂಬ ಐತಿಹಾಸಿಕ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದ ಉದ್ಘಾಟನೆಗೆ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ, ಬಿ.ಎನ್ ಜಗದೀಶ್ ಅಥಣಿಗೆ ಆಗಮಿಸುತ್ತಿದ್ದಾರೆ. ಅಥಣಿ ತಾಲೂಕಿನ ಹಾಗೂ ಸುತ್ತಮುತ್ತಲಿನ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬೇಕೆಂದು ಜಯ ಕರ್ನಾಟಕ ಸಂಘಟನೆಯ ಅಥಣಿ ತಾಲೂಕು ಘಟಕದ ಅಧ್ಯಕ್ಷ ಆಕಾಶ ನಂದಗಾoವ ಹೇಳಿದರು. ಅವರು ಅಥಣಿಯಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಸದ್ಗುರು ಅಭಿನವ ಗುರುಲಿಂಗ ಜಂಗಮ ಮಹಾರಾಜರು ಕಕಮರಿ ಮಠ ಇವರು ದಿವ್ಯ ಸಾನಿಧ್ಯ ವಹಿಸಲಿದ್ದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ, ಬಿ.ಎನ್  ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿಗಳು  ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಉದ್ಘಾಟನೆಯನ್ನು  ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಮಾಜಿ ಶಾಸಕರುಗಳಾದ ಶ್ರೀಮಂತ ಪಾಟೀಲ, ಮಹೇಶ್ ಕುಮಟಳ್ಳಿ, ಶಹಜಹಾನ್ ಡೊಂಗರಗಾವ, ಹಾಗೂ ಮುಖಂಡರಾದ ಚಂದ್ರಕಾಂತ ಇಮ್ಮಡಿ, ನಿಂಗಪ್ಪ ಕೊಕಲೆ,ಸದಾಶಿವ ಬುಟಾಳಿ ಗಜಾನನ ಮಂಗಸೂಳಿ, ಧರೆಪ್ಪ ಟಕ್ಕಣ್ಣವರ, ಶಿವು ಗುಡ್ಡಾಪುರ ಸೇರಿದಂತೆ ಅನೇಕ ಮುಖಂಡರು ಗಣ್ಯ ಮಾನ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ವೇಳೆ ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೊಡಕರ ಮಾತನಾಡಿ . ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ “ಜಯ ಕರ್ನಾಟಕ ರತ್ನ” ಪ್ರಶಸ್ತಿಯನ್ನು  ನೀಡಲಿದ್ದು ಅನೇಕ ಜಾನಪದ ಕಲಾವಿದರು ಕಲಾ ತಂಡಗಳು ಆಗಮಿಸಲಿವೆ ಎಂದರು. ಮುಖಂಡ ರವಿ ಬಡಕಂಬಿ ಅವರು ಮಾತನಾಡಿ  ಕಾರ್ಯಕ್ರಮದಲ್ಲಿ ಜಯ ಕರ್ನಾಟಕ ಸಂಘಟನೆಯ ರಾಜ್ಯ ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ವಿವಿಧ ಜಿಲ್ಲೆಯ ಪದಾಧಿಕಾರಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು, ಸಾಹಿತಿಗಳು, ವಿಶೇಷ ಆವ್ಹಾನಿತರು, ಕನ್ನಡಪರ ಹೋರಾಟಗಾರರು, ಅಥಣಿ, ಬಳ್ಳಿಗೇರಿ, ಗುಂಡೆವಾಡಿ, ಕೀರಣಗಿ  ಸೇರಿದಂತೆ ಸುತ್ತಲೂ ಹತ್ತಾರು ಗ್ರಾಮಗಳಿಂದ ಅಷ್ಟೇ ಅಲ್ಲದೆ ತಾಲೂಕಿನ ಹಲವಾರು ಗ್ರಾಮಗಳಿಂದ ಕನ್ನಡ ಜನತೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು  ತಾಲೂಕಿನ ಸಮಸ್ತ ಜನತೆ ಕನ್ನಡ ಮನಸ್ಸುಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗ ಬೇಕೆಂದು ಗಡಿ ನಾಡಿನಲ್ಲಿ ಕನ್ನಡ ಜಾಗೃತಿಗಾಗಿ ಸರ್ವರೂ ಸಹಕರಿಸ ಬೇಕೆಂದು ಅಥಣಿ ತಾಲೂಕ ಕರವೇ ಅಧ್ಯಕ್ಷ ದೀಪಕ್ ಬುರ್ಲಿ ಮನವಿ ಮಾಡಿದರು. ಈ ವೇಳೆ ಅಥಣಿ ತಾಲೂಕು ಅಧ್ಯಕ್ಷ ಆಕಾಶ ನಂದಗಾವ, ಜಯ ಕರ್ನಾಟಕ ಸಂಘಟನೆ ಹೋರಾಟ ಸಮಿತಿ ಅಧ್ಯಕ್ಷ ವಿಜಯಕುಮಾರ ಪವಾರ, ಪ್ರಶಾಂತ ತೊಡಕರ, ಮುಖಂಡ ರವಿ ಬಡಕಂಬಿ, ಕರವೇ ಅಧ್ಯಕ್ಷ ದೀಪಕ ಬುರ್ಲಿ, ಸಚಿನ ಕಾಂಬಳೆ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ ಶರ್ಮಾ ಬೆಳಗಾವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button