ವಿಜಯಪುರ ಜಿಲ್ಲೆಯನ್ನು 371 (ಜೆ) ಕಲಂ ಗೆ ಸೇರ್ಪಡೆಗೆ – ಡಿ.ಎಸ್.ಎಸ್ ಜಿಲ್ಲಾ ಸಮಿತಿ (ಡಾ, ಡಿ.ಜಿ ಸಾಗರ ಬಣ) ಆಗ್ರಹ.
ವಿಜಯಪುರ ಜು.10

ಡಾ, ವಿಶಾಲ್.ಆರ್ ಅಧ್ಯಕ್ಷರು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವರಣಾ ಸಮಿತಿ ಬೆಂಗಳೂರವರಲ್ಲಿಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಲಕರಾದ ಸಿದ್ದು.ರಾಯಣ್ಣವರ ಮಾತನಾಡಿ ವಿಜಯಪುರ ಜಿಲ್ಲೆಯು ಎಲ್ಲಾ ರಂಗದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿಯು, ಶೈಕ್ಷಿಣಿವಾಗಿಯು ಹಿಂದುಳಿದಿದ್ದು, ಅಲ್ಲದೆ ಭೌಗೋಳಿಕವಾಗಿಯು ಕೋಡಾ ಸಂಪೂರ್ಣ ಹಿಂದುಳಿದ ಜಿಲ್ಲೆಯಾಗಿದೆ ನಮ್ಮ ಜಿಲ್ಲೆಯನ್ನು ಪಂಚ ನದಿಗಳ ಬೀಡು ಎಂದು ಕರೆಯಲಾಗುತಿತ್ತು. ಆದರೆ ಅವು ಎಲ್ಲಾವುಗಳು ಅವನತಿ ಸ್ಥಿತಿಯಲ್ಲಿವೆ ನಮ್ಮ ಜಿಲ್ಲೆಯ ಜನರ ಬದುಕು ಕೃಷಿಗೆ ಅವಲಂಬಿತವಾಗಿದೆ ಅಕಾಲಿಕ ಮಳೆಯಿಂದಾಗಿ ಕೃಷಿ ವಲಯವು ಅತಿ ಹಿಂದುಳಿದಿದ್ದು. ಮತ್ತು ನಮ್ಮ ಜಿಲ್ಲೆಯಲ್ಲಿ ಕೈಗಾರಿಕೆಗಳು ಇರುವುದಿಲ್ಲಾ ಮತ್ತು ಜಿಲ್ಲೆಯ ಎಲ್ಲಾ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಚಿಂತವಾಗಿವೆ ಎಂದರು.

ಡಿ.ಎಸ್.ಎಫ್ ಜಿಲ್ಲಾ ಸಚಾಲಕರಾದ ವೈ.ಸಿ ಮಯೂರ ಮಾತನಾಡಿ ವಿಜಯಪುರ ಜಿಲ್ಲೆ ಶೈಕ್ಷಣಿಕವಾಗಿ ರಾಜ್ಯದಲ್ಲಿಯೆ ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಹೀಗಾಗಿ ಎಲ್ಲಾ ರಂಗದಲ್ಲಿಯು ಮೇಲಸ್ಥರಕ್ಕೆ ತರಲು ಕಲಂ 371 (ಜೆ) ಅವಶ್ಯಕ ಎಂದು ಕಾಣುತ್ತಿದೆ ಆದ್ದರಿಂದ ನಮ್ಮ ಜಿಲ್ಲೆಯನ್ನು 371 (ಜೆ) ಅಡಿಗೆ ಸೇರಿಸಿ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸಹಕರಿಸಿದಂತೆ ನಮ್ಮ ಜಿಲ್ಲೆಯನ್ನು 371 (ಜೆ) ಅಡಿಯಲ್ಲಿ ಸೇರಿಸಲು ವಿನಂತಿಸಿ ಕೊಂಡರು ಈ ಸಂದರ್ಭದಲ್ಲಿ ರಮೇಶ ಕರಣಾಕರ ಜೈ ಭೀಮ್ ತಳಕೇರಿ ವಿಜಯ್ ಕಾಂಬಳೆ ರಾಜು ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
ವರದಿ:ಸಿದ್ದು.ರಾಯಣ್ಣವರ.ವಿಜಯಪುರ
ಮೊಬೈಲ್:ನಂಬರ್ – 9972062074