ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನ ದೊಡ್ಡದು – ಮಾತಾಜೀ ತ್ಯಾಗಮಯೀ ಅಭಿಮತ.
ಚಳ್ಳಕೆರೆ ಜು.10





ಭಾರತೀಯ ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನ ಬಹಳ ದೊಡ್ಡದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಪಾವಗಡ ರಸ್ತೆಯ ಶ್ರೀಸಾಯಿ ಬಾಬಾ ಮಂದಿರದಲ್ಲಿ ನಡೆಯುವತ್ತಿರುವ “ಶ್ರೀಗುರು ಪೂರ್ಣಿಮೆಯ ಜಾತ್ರಾ ಮಹೋತ್ಸವ” ದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಅವರು ಗುರು ಪೂರ್ಣಿಮೆಯ ಬಗ್ಗೆ ಪ್ರವಚನ ನೀಡಿದರು. ಮಹರ್ಷಿ ವೇದ ವ್ಯಾಸರ ಜನ್ಮ ದಿನವನ್ನು ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಭಾರತೀಯ ವೇದಾಂತ ಸಾಹಿತ್ಯಕ್ಕೆ ವೇದ ವ್ಯಾಸರ ಕೊಡುಗೆ ಅನುಪಮವಾದದ್ದು. ಇಂತಹ ಪುಣ್ಯ ದಿನದಂದು ಗುರುವಿನ ಸ್ಮರಣೆ ಮತ್ತು ಅವರ ಸೇವೆ ಮಾಡುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ನ ವತಿಯಿಂದ ಮಾತಾಜೀ ತ್ಯಾಗಮಯೀ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಸಿ ಸಂಜೀವಮೂರ್ತಿ, ಬಿ.ಸಿ ವೆಂಕಟೇಶಮೂರ್ತಿ, ಚಿದಾನಂದಮೂರ್ತಿ, ಸತೀಶಕುಮಾರ್, ರವಿಪ್ರಸಾದ್, ಪುಷ್ಪ , ಕೆ.ಎಂ ಜಗದೀಶ್, ನಾಗೇಶ್,ಶಾರದಾ, ರಶ್ಮಿ, ಅರುಣ, ಮಹಾದೇವಿ, ಸಿ.ಎಸ್ ಭಾರತಿ, ಯತೀಶ್.ಎಂ ಸಿದ್ದಾಪುರ, ರಶ್ಮಿ ಪಂಡಿತಾರಾಧ್ಯ ಸೇರಿದಂತೆ ಸಾಯಿ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.