ಮಸಾಲ ಪದಾರ್ಥಕ್ಕೆ ಕೆಮಿಕಲ್ ಮಿಶ್ರಣ ದಂಧೆ – ಇಂತಹ ಪದಾರ್ಥ ತಿಂದರೆ ಹೃದಯಘಾತ ಗ್ಯಾರಂಟಿ.
ಮಾನ್ವಿ ಜು.11

ರಾಜ್ಯದಲ್ಲಿ ಹೃದಯಘಾತದಿಂದ ಜನರು ಸಾಯುತ್ತಿದ್ದಾರೆ ಎಂದು ಸರಕಾರ ಬೆಚ್ಚಿ ಬಿದ್ದಿದೆ. ಆದರೆ ಮಾನ್ವಿಯಲ್ಲಿ ಮಸಾಲ ಪದಾರ್ಥಕ್ಕೆ ನಿಷೇಧಿತ ಕೆಮಿಕಲ್ ಮಿಕ್ಸ್ ಮಾಡಿ ಜನರನ್ನು ಸಾಯಿಸುವ ದಂಧೆ ಬಯಲಾಗಿದೆ.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಇಸ್ಲಾಂ ನಗರದ ಪಾಳು ಬಿದ್ದ ಕಟ್ಟಡದಲ್ಲಿ ಮಸಾಲ ಪದಾರ್ಥಕ್ಕೆ ಕೆಮಿಕಲ್ ಮಿಕ್ಸ್ ಮಾಡುವ ವೇಳೆ ಸುತ್ತ ಮುತ್ತಲಿನ ನಿವಾಸಿಗಳು ಭೇಟಿ ನೀಡಿದಾಗ ಬಯಲಾಗಿದ್ದು, ಈ ದಂಧೆ ಕಳೆದ 20 ವರ್ಷದಿಂದ ನಡೆಯುತ್ತಿತ್ತು ಎಂದು ನಿವಾಸಿಗಳ ಆರೋಪವಾಗಿದೆ.
ಇಂತಹ ದಂಧೆ ನಡೆಯುತ್ತಿದೆ ಎಂದರೆ ಮಾನ್ವಿ ಜನತೆ ಮಸಾಲ ಪದಾರ್ಥ ತಿನ್ನ ಬೇಕಾದರೆ ಭಯ ಬೀಳುವ ಸ್ಥಿತಿ ಬಂದಿದ್ದು. ಈ ರೀತಿಯಲ್ಲಿ ಮಾನ್ವಿಯಲ್ಲಿ ದಂಧೆ ನಡೆಯುತ್ತಿದೆ ಎಂದರೆ ಸತ್ತರೆ ಇದಕ್ಕೆಲ್ಲಾ ಯಾರು ಹೊಣೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ