ಯು.ಬಿ.ಎಮ್.ಪಿ.ಎಸ್ ಶಾಲೆಯಲ್ಲಿ – ಸಂಸತ್ ಚುನಾವಣೆ.
ಇಂಡಿ ಜು.11

ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025-2026 ಸಾಲಿನಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. ವಿದ್ಯಾರ್ಥಿಗಳಿಗೆ ಚುನಾವಣಾ ಮಹತ್ವ ಮತ್ತು ಮತದಾನ ಹಕ್ಕು ಇದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಶಾಲಾ ಸಂಸತ್ತು ಚುನಾವಣೆ ನಡೆಯಿತು. 7 ಸ್ಥಾನಕ್ಕಾಗಿ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ಚುನಾವಣೆ ನೀತಿ ಸಂಹಿತೆ ಪ್ರಕಾರ ನಡೆಯಿತು. ವಿದ್ಯಾರ್ಥಿಗಳು ಗುಪ್ತವಾಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು. ಉರ್ದು ಕ್ಲಸ್ಟರ್ ಸಿ.ಆರ್.ಪಿ ಪರ್ವೇಜ್ ಪಟೇಲ್ ಅವರು ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಣೆ ಮಾಡಿದರು.

ಶಿಕ್ಷಕರು ಚುನಾವಣೆ ಅಧಿಕಾರಿಗಳಾಗಿ ಕರ್ತವ್ಯ ನಿಭಾಯಿಸಿದರು. ಶಿಕ್ಷಕರಾದ ಶಕೀರಾ, ನಾಗೂರ ಬೆಂದ್ರೆಕರ, ದೇವರ, ಇಂಡಿಕರ, ಅತಿಥಿ ಶಿಕ್ಷಕಿ ಜಾಸ್ಮಿನ್ ಅರಬ, ಮುಬೀನಾ ಮಕಂದರ್ ಅಫ್ತಾಬ್ ತುರ್ಕಿ ಮಿಸ್ಬಾ ಇಂಡಿ ಮಿಸ್ಬಾ ನಾಗಠಾಣ ಕರ್ತವ್ಯ ನಿಭಾಯಿಸಿದರು. ಚುನಾವಣೆ ನಂತರ ಮತ ಎಣಿಕೆ ಕಾರ್ಯವನ್ನು ನೆರವೇರಿಸಿ ಫಲಿತಾಂಶವನ್ನು ಘೋಷಿಸಲಾಯಿತು. ಮುಖ್ಯ ಶಿಕ್ಷಕ ಯಾಸಿನ್ ತುರ್ಕಿ ಮಾರ್ಗದರ್ಶನ ಮಾಡಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ