“ಮನವು ಮಲ್ಲಿಗೆ ಕವನ ಸಂಪಿಗೆ”…..

ಮನವು ಮಲ್ಲಿಗೆ ಕವನ ಸಂಪಿಗೆ
ಕವಿಯ ಕಲ್ಪನೆ ಸುಗಂಧ ವಾಸನೆ
ಶ್ರೀಗಂಧ ಗುಡಿಗೆ ಅರಸರ ನಡಿಗೆ
ಮಲ್ಲಿಗೆ ರಾಜರ ದೇವರ ಮುಡಿಗೆ
ಕಾವ್ಯದ ಅಕ್ಷರ ಮುತ್ತು ರತ್ನಗಳೆ
ವಿಶ್ವದೆಲ್ಲಡೆ ಕನ್ನಡ ನಡಿಗೆ
ರನ್ನ ಜನ್ನ ಪೊನ್ನ ಪಂಪನ
ಕವನ ಕಾವ್ಯಗಳ ನಾಡ ಕಿರ್ತಿಗೆ
ಬಸವ ಶರಣರ ನಿಜ ನುಡಿ ನಡೆ
ಸರ್ವಜ್ಞ ದೇವಜ್ಞ ವಚನಗಳ ಸುಧೆ
ಸವಿ ನಾಡಿಗೆ ಕುವೇಂಪು ಬೇಂದ್ರೆ
ವರ ಕವಿಗಳು ದೇಶದ ಕಿರ್ತಿಗೆ
ಡಿವಿಜಿ ಮಾಸ್ತಿ ಮೆರಗು ಕನ್ನಡಕೆ
ಗಾನ ಗಂಧರ್ವರ ಒಲವು ಚಲುವಿಗೆ
ಭಾರತ ಮುಡಿಗೆ ಕರುನಾಡ ಮಡಿಲಿಗೆ
ಮಲ್ಲಿಗೆ ಸಂಪಿಗೆ ಸದಾ ಸುಮಧುರ
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ.