ಎಸ್.ಡಿ.ಎಮ್.ಸಿ ಅಧ್ಯಕ್ಷರಾಗಿ ಅಂದಪ್ಪ ಮಾದರ, ಹಾಗೂ ಉಪಾಧ್ಯಕ್ಷರಾಗಿ – ಕವಿತಾ ಆದಿ ಆಯ್ಕೆ.
ಜಕ್ಕಲಿ ಜು.15

ರೋಣ ತಾಲೂಕಿನ ಜಕ್ಕಲಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ನೂತನ ಎಸ್‌ಡಿಎಂಸಿ ಅಧ್ಯಕ್ಷರಾಗಿ ಅಂದಪ್ಪ ರಾಮಪ್ಪ ಮಾದರ, ಉಪಾಧ್ಯಕ್ಷರಾಗಿ ಕವಿತಾ ಆದಿ, ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಅಧ್ಯಕ್ಷರಾಗಿ ವೀರಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ ಬಸಮ್ಮ ಹೊಸಮನಿ ಅವರನ್ನು ನೇಮಕ ಮಾಡಲಾಯಿತು.ಸರ್ಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಒಟ್ಟು 18 ಜನ ಸದಸ್ಯರನ್ನು ಒಳಗೊಂಡಿದ್ದು, ನೂತನ ಅಧ್ಯಕ್ಷರಾಗಿ ಅಂದಪ್ಪ ಮಾದರ,ಉಪಾಧ್ಯಕ್ಷರಾಗಿ ಕವಿತಾ ಆದಿ, ಸದಸ್ಯರಾಗಿ ಮುತ್ತಪ್ಪ ಕಾಳಿ,ಕಳಕಪ್ಪ ರಂಗಣ್ಣವರ, ರಜಾಕ್ ಅಮ್ಮದ ಗಡಾದ, ಬಸಪ್ಪ ಚಿನ್ನೂರು, ಬಸಪ್ಪ ಬಂಡಿ, ಕುಬೇರಪ್ಪ ಕೊಡಗಾನೂರು, ಶರಣಪ್ಪ ಕೋರಿ, ಮುತ್ತಪ್ಪ ಮರಬಸಪ್ಪನವರ, ಶಾರದಾ ಜೋಗಿನ, ಅನ್ನಪೂರ್ಣ ಚಲವಾದಿ, ಗಂಗವ್ವ ರಂಗಣ್ಣವರ, ಚಾಂದಬಿ ಗಡಾದ, ಲಲಿತಾ ಪಾಟೀಲ, ಶರಣಮ್ಮ ಬಂಡಿ, ಕವಿತಾ ಪಾಟೀಲ, ಸಾವಿತ್ರಿ ಕಮ್ಮಾರ ಅವರನ್ನು ಆಯ್ಕೆ ಮಾಡಲಾಯಿತು.ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ 18 ಸದಸ್ಯರನ್ನು ಒಳಗೊಂಡಿದ್ದು, ಅದರಲ್ಲಿ ಅಧ್ಯಕ್ಷರಾಗಿ ವೀರಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ ಬಸಮ್ಮ ಹೊಸಮನಿ, ಸದಸ್ಯರಾಗಿ ಕವಿತಾ ಮಾದರ, ಕನಕಪ್ಪ ಮಾದರ, ವಿದ್ಯಾ ಕಲ್ಲಿಗನೂರ, ಸಂಗಪ್ಪ ಕೀಟಗೇರಿ, ರಮೇಶ ರಂಗಣ್ಣವರ, ಸೈನಾಜಬೇಗಂ ಬಾಲೆ ಸಾಬನವರ, ಶೋಬಾ ಬಾರಕೇರ, ಮಹಮ್ಮದಸಲೀಂ ಜಕ್ಕಲಿ, ಹನಂತಪ್ಪ ಭಜೇಂತ್ರಿ, ಮಹಾಂತೇಶ ಕೌಜಗೇರಿ, ಮಂಜುನಾಥ ಶಿವಸಂಪರ ರಮೇಶ ಹೊಸಮನಿ, ಮಂಜುಳಾ ತುಕ್ಕೋಜಿ, ಸುಧಾ ಜಂಗಣ್ಣವರ, ಹೇಮಾ ರೋಣದ, ಬಸವಣ್ಣೆವ್ವ ಜಗ್ಗಲ ಅವರನ್ನು ಆಯ್ಕೆ ಮಾಡಲಾಯಿತು.ಇದೇ ಸಂದರ್ಭದಲ್ಲಿ ಎರಡು ಶಾಲೆಯ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸೇರಿದಂತೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು ಎಂದು ವರದಿಯಾಗಿದೆ.