ಶ್ರೀಕೃಷ್ಣನ ಬಾಲ ಲೀಲೆಗಳು ಸ್ವಾರಸ್ಯಕರ – ಶ್ರೀಮತಿ ನಳಿನ ಹರಿಕೃಷ್ಣ.
ಚಳ್ಳಕೆರೆ ಜು. 18

ಭಗವಾನ್ ಶ್ರೀಕೃಷ್ಣನ ಬಾಲ ಲೀಲೆಗಳು ಅತ್ಯಂತ ಸ್ವಾರಸ್ಯಕರವಾಗಿದ್ದು ಅವುಗಳ ನಿತ್ಯ ಶ್ರವಣ ಆನಂದ ದಾಯಕವಾದದ್ದು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ನಳಿನ ಹರಿಕೃಷ್ಣ ತಿಳಿಸಿದರು. ನಗರದ ವಾಸವಿ ಕಾಲನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಿಸಿದ ಕಥೆಗಳ ಬಗ್ಗೆ ಮಾತನಾಡಿದರು.

ಶಿಬಿರದ ಆರಂಭದಲ್ಲಿ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ಮಕ್ಕಳಿಗೆ ಭಜನೆ, ಪ್ರಣಾಮ ಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರವನ್ನು ಹೇಳಿ ಕೊಟ್ಟರು. ಈ ಸಂದರ್ಭದಲ್ಲಿ ಮಕ್ಕಳಿಗೆ ವಿವಿಧ ಬಗೆಯ ಆಟಗಳನ್ನು ಆಡಿಸಲಾಯಿತು. ಕಾರ್ಯಕ್ರಮದಲ್ಲಿ ಸಾಯಿ ಸಮರ್ಥ್, ಡಾ, ಭೂಮಿಕ, ಚೇತನ್,ಋತಿಕ್, ರಶ್ಮಿ ವಸಂತ, ಸಂಗೀತ, ಯುಕ್ತ, ಹರ್ಷಿತಾ, ಮಹೇಶಬಾಬು, ಸೂರ್ಯಪ್ರಕಾಶ್, ಸಹಸ್ರ, ಯಶಸ್ವಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.