ಜೆ.ಜೆ.ಎಂ ಕಳಪೆ ಕಾಮಗಾರಿ ವಿರುದ್ಧ – ಸಾರ್ವಜನಿಕರ ಆಕ್ರೋಶ.
ಅಲಬೂರು ಜನೇವರಿ.1

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ವ್ಯಾಪ್ತಿಗೆ ಬರುವ ಅಲಬೂರುನಲ್ಲಿ ‘ಜಲ ಜೀವನ್ ಮಿಷಿನ್’ ‘ಕಳಪೆ’ ಕಾಮಗಾರಿಯಿಂದ ಕೂಡಿರುತ್ತದೆ ಎಂದು ಕೆಲವು ಸಾವ೯ಜನಿಕರು ನಮ್ಮ ಮಾಧ್ಯಮಕ್ಕೆ ಈ ಹೇಳಿಕೆಯನ್ನು ನೀಡಿರುವರು. ಸೂಕ್ತ ಸಮಯದಲ್ಲಿ ಕಾಮಗಾರಿ ಪೂಣ೯ ಗೊಳಿಸದಿದ್ದರೆ, ಸಾವ೯ಜನಿಕರು ಕೆಲವು ಸಮಸ್ಯೆಗಳನ್ನು ಅನಿವಾರ್ಯವಾಗಿ ಅನುಭಸಬೇಕು. ‘ಜಲಜೀವನ್ ಮಿಷಿನ್’ ಕಾಮಗಾರಿ ಗುತ್ತಿಗೆದಾರರು ಮತ್ತು ಕೆಲವು ಅಧಿಕಾರಿಗಳು, ನಿಲ೯ಕ್ಷ್ಯತನ ದಿಂದ ಗ್ರಾಮೀಣ ಭಾಗದ ರಸ್ತೆಗಳನ್ನು ಅಗೆದು, ಹಾಗೆ ಬಿಡುವುದರಿಂದ ಅಲ್ಲಿನ ದಾರಿ ಹೋಕರಿಗೆ ತೊಂದರೆ ಯಾಗುತ್ತದೆ ಮತ್ತು ಆ ತೆಗ್ಗುಗಳಲ್ಲಿ ಹರಿದು ಬಂದ ಚರಂಡಿ ನೀರು ಅಲ್ಲೇ ನಿಂತು ಕೊಳೆತು ನಾರುವಂತಾಗಿದೆ ಇದರಿಂದ ಸೊಳ್ಳೆ ಕ್ರಿಮಿಕೀಟದಿಂದ ರೋಗ ಬರುವ ಭೀತಿಯಲ್ಲಿ ಸಾರ್ವಜನಿಕರು ಭಯ ಪಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಅಲಬೂರಿನ ಕೆಲವು ಓಣಿಗಳಲ್ಲಿನ ರಸ್ತೆ ಮತ್ತು ಚರಂಡಿಯನ್ನು ಅಗೆದು ಹಾಗೆ ಬಿಟ್ಟಿರು ವರುವರಂತೆ, ಇದರಿಂದ ಅನೇಕ ಶಾಲಾ ಮಕ್ಕಳಿಗೆ, ವಯೋವೃದ್ಧರಿಗೆ, ಸ್ತ್ರೀಯರಿಗೆ, ದ್ವಿ-ಚಕ್ರ ವಾಹನ ಸವಾರರಿಗೆ, ಅಂಧರಿಗೆ, ಕುರಿ -ದನಕರುಗಳಿಗೆ ಸುಗಮ ಸಂಚಾರಕ್ಕೆ , ತಡೆ ಯೊಡ್ಡುತ್ತದೆ ಹಾಗೂ ಅನಾನುಕೂಲ ವಾಗುತ್ತದೆ ಎಂದು ಅಲ್ಲಿನ ಕೆಲವರು ತಮ್ಮ ನೋವನ್ನು ತೋಡಿ ಕೊಂಡರು. ಈ ನೋವನ್ನು ತಾಳಲಾರದೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ತಿಳಿಸಿದರೆ “ಕಣ್ಣು ಇದ್ದು , ಕುರುಡರಂತೆ” ಮತ್ತು “ಕಿವಿ ಇದ್ದು, ಕೀವುಡರಂತೆ” ವತಿ೯ಸುವರಂತೆ.

ಕೆಲವು ಕಡೆ ಮುಚ್ಚಿದರೂ, ಇನ್ನು ಕೆಲವು ಕಡೆ 3 ರಿಂದ 4 ತಿಂಗಳುಗಳಾದರು ಗುಂಡಿ ಮುಚ್ಚುತ್ತಿಲ್ಲ ಇದರಿಂದ ವಯೋವೃದ್ಧರು ಮತ್ತು ಮಕ್ಕಳು ಬಹಳ ನೋವನ್ನುಂಡಿರುವರು ಎಂದು ಸಾವ೯ಜನಿಕರು ಹೇಳುವರಂತೆ.ಕೆಲವು ಗುತ್ತಿಗೆದಾರರು ಮತ್ತು ಅಧಿಕಾರಿಗಳು ಸರಕಾರದ ನಿಯಮದ ಪ್ರಕಾರ, ಗ್ರಾಮ ಪಂಚಾಯತಿಗೆ ಬೇಕಾಗುವ ನೀರಿನ ಮೂಲವನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಿ, ನಂತರ ಗ್ರಾಮದ ಜನರನ್ನು ಒಳಗೊಂಡ ಗ್ರಾಮ ಸಭೆಯಲ್ಲಿ ಅನುಮೋಧನೆ ಗೊಳ್ಳಬೇಕು. ಆದರೆ ಈ ನಿಯಮವನ್ನು ಪಾಲನೆ ಮಾಡದೇ ಕೆಲವರು ಗಾಳಿಗೆ ತೂರುವರಂತೆ.ಮತ್ತು ಇಲ್ಲಿನ ಪಿಡಿಓ ಮಾಧವಿಯವರನ್ನು ಕೇಳಿದರೆ ಸಂಬಂಧವಿಲ್ಲ ಎಂದು ಹೇಳುತ್ತಾರಂತೆ ಹಾಗೂ ಇಲ್ಲಿನ ಜನನಾಯಕರು ಸಹ ಯಾವ ರೀತಿಯ ಕ್ರಮ ಕೈಗೊಂಡಿಲ್ಲ.ಸರಕಾರದ ನಿಯಮದ ಪ್ರಕಾರ ಆಳ ಮತ್ತು ಉದ್ದವನ್ನು ತೆಗೆಯದೆ, 1.ಅಥವಾ ಒಂದೂವರೆ ಅಡಿ ಆಳ ತೆಗೆದು, ಇನ್ನು ಕೆಲವು ಕಡೆ 2 ಮತ್ತು 3 ಅಡಿ ಆಳ ತೆಗೆದು ಅರೆಬರೆಯ ಕಾಮಗಾರಿಯನ್ನು ಮಾಡಿ, ಗುಂಡಿಯನ್ನು ಕೆಲವು ಕಡೆ ಮುಚ್ಚಿ, ಇನ್ನು ಕೆಲವು ಕಡೆ ಮುಚ್ಚದೆ ಹಾಗೆ ಬಿಟ್ಟು, ಕೆಲವು ಕಡೆ ಕಾಮಗಾರಿ ಮುಗಿದು 2 ಮತ್ತು 3 ತಿಂಗಳು ಆದರೂ, ಅಲ್ಪಾ ಪ್ರಮಾಣ ಆಳ ತೆಗೆದ ರಸ್ತೆಯಲ್ಲಿ , ಬಹಳ ಭಾರವಾದ ಲೋಡನ್ನು ತುಂಬಿ ಕೊಂಡು, ವಾಹನ ಚಲಿಸಿದರೆ, ಪೈಪು ಅಪ್ಪಚ್ಚಿಯಾಗಿ ಹೋಗುತ್ತದೆ.

ಇದಕ್ಕೆ ಯಾರು ಹೊಣೆ? ಎಂದು ಅಲ್ಲಿನ ಸಾವ೯ಜನಿಕರಲ್ಲಿ ಅಲಬೂರು ಗುರುರಾಜ ರವರು ಕೇಳಿದರು.ಸಿಮೆಂಟ್ ರಸ್ತೆಯನ್ನು ಅಗೆದಾಗ ಬರುವ ತ್ಯಾಜ್ಯಗಳನ್ನು ಕೆಲವು ಕಡೆ ಹಾಗೆ ಬಿಟ್ಟಿರುವರಂತೆ, ಇದರ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ಸಲ್ಲಿಸಿದರೆ, ನಿಲ೯ಕ್ಷ್ಯೆ ಮತ್ತು ಜಾರಿಕೆಯ ಉತ್ತರ ನೀಡುವರಂತೆ. ಅವರಿಂದ ಬರುವ ಉತ್ತರ ಎಂದರೆ, ನೋಡುತ್ತೇವೆ, ಸಂಬಂಧಪಟ್ಟವರ ಮೇಲೆ ಸೂಕ್ತ ಕ್ರಮ ಜರುಗಿಸುತೇವೆ, ಎಂದು ಹೇಳಿರುವ ಅಧಿಕಾರಿಗಳು, ಇದುವರೆಗೂ, ಯಾವುದೇ ಕಾನೂನು ಕ್ರಮ ಜರುಗಿಸಿರುವುದಿಲ್ಲ, ಯಾರಿಗಾದರೂ ತೊಂದರೆಯಾದರೆ, ಅದಕ್ಕೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನೇರ ಹೊಣೆ ಎಂದು ಅಲ್ಲಿನ ಕೆಲವು ಸಾವ೯ಜನಿಕರ ತಮ್ಮ ಅಕ್ರೋಶ ವ್ಯಕ್ತಪಡಿಸಿದರು. ಈ ಕ್ಷೇತ್ರದ ಶಾಸಕರಾದ ಕೆ ನೇಮಿರಾಜ್ ನಾಯ್ಕ್ ರವರು ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳವರು ಎಂಬ ಆಶಯದೊಂದಿಗೆ. ಈ ಸಂದರ್ಭದಲ್ಲಿ ಓಣಿಯ ಮುಖಂಡರಾಜ ರಾಮಪ್ಪ, ಗುರುರಾಜ, ನಾಗಪ್ಪ, ಮುಖಂಡರು ಮತ್ತು ಯುವಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿಕೊಟ್ಟೂರು