ಪ್ರಭಾರಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದರನ್ನ ಅಮಾನತು ಮಾಡುವಂತೆ ಆಗ್ರಹಿಸಿ – ಕರ್ನಾಟಕ ಭೀಮ್ ಸೇನೆ ತಾಲೂಕ ಸಮಿತಿಯಿಂದ ತೀವ್ರ ಪ್ರತಿಭಟನೆ.

ಮಾನ್ವಿ ಜೂ.27

ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರ ದುರಾಡಳಿತ ಮತ್ತೊಂದು ಬಯಲಾಗಿದ್ದು. 2024-25 ನೇ. ಸಾಲಿನ ಅನಿರ್ಬಂಧಿತ ಅನುದಾನ ದುರ್ಬಳಿಕೆ ಯಾಗಿದ್ದು ಸಮಗ್ರವಾಗಿ ತನಿಖೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಭೀಮ್ ಸೇನೆ ತಾಲೂಕ ಸಮಿತಿಯಿಂದ ಮಾನ್ವಿ ಪಟ್ಟಣದ ತಾಲೂಕ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕ ಪಂಚಾಯತಿ ಇ.ಓ ಖಾಲಿದ್ ಅಹ್ಮದ್ ಅವರು ಸರಕಾರದ ಅಧಿಕಾರಿ ಯಾಗಿದ್ದರು ಸಹ ಸರಕಾರದ ಅನುದಾನವನ್ನು ಪಾರದರ್ಶಕವಾಗಿ ಹಾಗೂ ಗುಣಮಟ್ಟದಲ್ಲಿ ಕೆಲಸ ಮಾಡದೆ ದುರ್ಬಳಿಕೆ ಮಾಡಿ ಕೊಳ್ಳಲಾಗಿದೆ. ಕೂಡಲೇ ಇ.ಓ ಖಾಲಿದ್ ಅಹ್ಮದ್ ಅವರನ್ನು ಅಮಾನತು ಮಾಡಬೇಕು ಎಂದು ಹೋರಾಟಗಾರ ಕಿರಣ್ ಕುಮಾರ್ ತಡಕಲ್ ಆಗ್ರಹಿಸಿದರು.

ಮಾನ್ವಿ ತಾಲೂಕಲ್ಲಿ ನಾನಾ ಇಲಾಖೆಯಲ್ಲಿ ಬ್ರಹ್ಮಾಂಡದ ಭ್ರಷ್ಟಾಚಾರ ಇದ್ದು. ನಮ್ಮ ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಬರಬೇಕು ನಮ್ಮ ಬೇಡಿಕೆ ಪೂರೈಸ ಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Check Also
Close
Back to top button