“ಶ್ರೀರಾಮನಾಮದ ಹಿರಿಮೆ-ಗರಿಮೆ”…..

ಮೊದಲಿಗೆ ಜನ್ಮ ನೀಡಿದ ತಾಯಿ-ತಂದೆಯರಿಗೆ ಹಾಗೂ ಶ್ರೀಗುರುನಾಥರ ದಿವ್ಯ ಪಾದಪದ್ಮಗಳಿಗೆ ಭಕ್ತಿ ಪೂರ್ವಕವಾಗಿ ನಮಸ್ಕರಿಸುತ್ತ “ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್! ಆರುಹ್ಯ ಕವಿತಾ ಶಾಕಾಮ್ ವಂದೇ ವಾಲ್ಮೀಕಿ ಕೋಕಿಲಮ್!! ರಾಮಾಯಣ ಹಾಗೂ ಮಹಾಭಾರತ ನಮ್ಮ ಭಾರತ ದೇಶದ ಇತಿಹಾಸಗಳು ಇದಕ್ಕೆ ಅನೇಕ ಸಾಕ್ಷಿಗಳಿವೆ, ರಾಮಸೇತು, ಮಧ್ಯ ಪ್ರದೇಶದಲ್ಲಿರುವ ಚಿತ್ರಕೂಟ ಪ್ರದೇಶದಲ್ಲಿ ಸಾವಿರಾರು ಸಾಕ್ಷಿಗಳನ್ನು ನಾವು ಈಗಲೂ ಕಾಣಬಹುದು, ನಮ್ಮ ಭಾರತ ಸಂವಿಧಾನದ ಭಾಗ ಎರಡರಲ್ಲಿ ರಾಮ ರಾಜ್ಯದ ಉಲ್ಲೇಖವಿದೆ, ಭಾರತ ಸಂವಿಧಾನದ ಪುಸ್ತಕದ ಮೇಲೆ ಶ್ರೀಸೀತಾರಾಮ ಲಕ್ಷ್ಮಣರ ಮುಖ ಚಿತ್ರವಿದೆ. ಶ್ರೀರಾಮನ ಜೀವನ ಚರಿತ್ರೆ ಎಂದರೆ “ನಡೆದಾಡುವ ಭಗವದ್ಗೀತೆ” ಆಗಿದೆ. ಇದು ಮಾನವ ಜನ್ಮದ ಕರ್ತವ್ಯ ಬೋಧನೆಯನ್ನು ಮಾಡುತ್ತದೆ. ನಮ್ಮ ಶಾಸ್ತ್ರದಲ್ಲಿ ಹೇಳುವಂತೆ ನುಡಿಗಳಲ್ಲಿ ಪರಮ ಮಂಗಳ ಕರವಾದ ಶಬ್ದವೆಂದರೆ “ಶ್ರೀರಾಮ” ಎನ್ನುವ ಪದವಾಗಿದೆ, ಋಗ್ವೇದದಲ್ಲಿರುವ ಏಳು ಕೋಟಿ ಮಂತ್ರಗಳಲ್ಲಿ ರಾಮನಾಮ ತಾರಕ ಮಂತ್ರವಾಗಿದೆ. ರಾ ಎಂದರೆ “ಅಗ್ನಿಬೀಜ ಮಂತ್ರ” ಮಾ ಎಂದರೆ “ಅಮೃತ ಬೀಜ ಮಂತ್ರ”ವಾಗಿದೆ. ರಾಮನಾಮವನ್ನು ಮೂರು ಬಾರಿ ಹೇಳಿದರೆ ಸಾವಿರ ಬಾರಿ ಹೇಳಿದ ಫಲಿತ ಬರುತ್ತದೆ ಎಂದು ಸಾಕ್ಷಾತ್ ಶಿವನೇ ಪಾರ್ವತಿ ದೇವಿಯ ಹತ್ತಿರ ಹೇಳಿದ್ದಾರೆ. ಅದಕ್ಕಾಗಿ ನಮ್ಮ ಹಿರಿಯರು ನಾವು ಮಾತನಾಡುವ ನಿತ್ಯ ಆಡು ಭಾಷೆಯಲ್ಲಿ ರಾಮ ನಾಮವನ್ನು ಸೇರಿಸಿದ್ದಾರೆ. ಸಂತೋಷದಲ್ಲಾದರೂ ದುಃಖದಲ್ಲಾದರೂ, ರಾಮ ನಾಮವನ್ನು ಅಪ್ರಯತ್ನಿಕವಾಗಿ ಪ್ರತಿಯೊಬ್ಬ ಸನಾತನ ಭಾರತೀಯರು ಹೇಳೇ ಹೇಳುತ್ತಾರೆ, ಉದಾಹರಣೆಗೆ ಅಯ್ಯೋ ರಾಮ, ರಾಮ ರಾಮ, ಅಯ್ಯೋ ರಾಮ ಕರ್ಮ, ಇದು ಒಳ್ಳೆಯ ರಾಮಾಯಣವಾಯಿತು ಎಂದು ಮಾತುಗಳ ಮಧ್ಯದಲ್ಲಿ ಹೇಳುವುದನ್ನು ನಾವು ಪ್ರತಿ ದಿನವೂ ಕೇಳುತ್ತೇವೆ. ವಾಲ್ಮೀಕಿ ಮಹರ್ಷಿಗಳು ರಚಿಸಿರುವ 24 ಸಾವಿರ ಶ್ಲೋಕವಿರುವ ಶ್ರೀಮದ್ ರಾಮಾಯಣವು 24 ಬೀಜಾಕ್ಷರವಿರುವ ಮಂತ್ರ ರಾಜವಾಗಿರೋ ಗಾಯತ್ರಿ ಮಹಾ ಮಂತ್ರಕ್ಕೆ ಪೂರ್ಣ ವ್ಯಾಖ್ಯಾನವೆಂದು ಪಂಡಿತರು ಹೇಳುತ್ತಾರೆ, ಶ್ರೀರಾಮನಾಮ ಮಹಿಮೆಯನ್ನು ತಿಳಿಸುವ ಉಪನಿಷತ್ತು “ಶ್ರೀರಾಮ ರಹಸ್ಯೋಪ ನಿಷತ್” ಸದಾಶಿವನು ಧ್ಯಾನದಲ್ಲಿ ಜಪಿಸುವ ನಾಮ ಶ್ರೀರಾಮನ ನಾಮ. ಶೃಂಗೇರಿ ಶಾರದಾಂಬೆ ಕೈಯಲ್ಲಿ ಜಪಮಾಲೆಯನ್ನು ನಾವು ದರ್ಶಿಸುತ್ತೇವೆ. ಆ ಜಗನ್ಮಾತೆ ಜಪಿಸುವುದು ಶ್ರೀರಾಮನ ನಾಮ, ಗಣಪತಿ ಕೈಯಲ್ಲೂ ಸಹ ನಾವು ಜಪಮಾಲೆಯನ್ನು ದರ್ಶಿಸುತ್ತೇವೆ.ಗಣಪತಿ ಜಪಿಸುವುದು ಸಹ ಶ್ರೀರಾಮನ ನಾಮವಂತೆ, ವಾನರರಾಗಿ ಜನಿಸಿ ಭವಿಷ್ಯತ್ ಬ್ರಹ್ಮರಾಗಿ ಚಿರಂಜೀವಿಗಳಾದ ಹನುಮಂತರು ರೋಮರೋಮದಲ್ಲಿ ತುಂಬಿಕೊಂಡಿರುವುದು ಶ್ರೀರಾಮನ ನಾಮ, ಗುರು ಸಾರ್ವಭೌಮರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಜಪಿಸಿರುವ ನಾಮ ಶ್ರೀರಾಮನಾಮ, ರಾಘವೇಂದ್ರ ಸ್ವಾಮಿಗಳು ಅರ್ಚಿಸಿರುವುದು ಮೂಲರಾಮನನ್ನು, ಶ್ರೀರಾಮಕೃಷ್ಣ ಪರಮಹಂಸರು ಬಾಲ್ಯದಲ್ಲಿ ಜಪಿಸಿರುವ ನಾಮ “ರಘುವೀರ” ಎನ್ನುವ ಶ್ರೀರಾಮನ ನಾಮ, ಸನಾತನ ಹಿಂದೂ ಧರ್ಮದ ಖ್ಯಾತಿಯನ್ನು ಭೂಮಂಡಲದ ಎಲ್ಲಾ ದಿಕ್ಕಿಗೂ ಸಾರಿದ ವೀರ ಸನ್ಯಾಸಿಯಾದ ಸ್ವಾಮಿ ವಿವೇಕಾನಂದರಿಗೆ ಶ್ರೀರಾಮಕೃಷ್ಣ ಪರಮಹಂಸರು ರಾಮ ನಾಮವನ್ನು ಉಪದೇಶವಾಗಿ ನೀಡಿದ್ದಾರೆ.

ನಮ್ಮ ಪರಮಪೂಜ್ಯ ಗುರುನಾಥರು ಶ್ರೀ ಶ್ರೀ ಮಹಾರಣ್ಯಂ ಮುರಳೀಧರ ಸ್ವಾಮೀಜಿ ಅವರು ಮತ್ತೆ ಭೂಮಿ ಮೇಲೆ ಜನಿಸಿ ಬಂದ ಚೈತನ್ಯ ಮಹಾಪ್ರಭುಗಳ ಅವತಾರವೇ ಅದ ಅವರು ಚೈತನ್ಯ ಮಹಾಪ್ರಭುಗಳಂತೆ ನಮ್ಮ ಗುರುನಾಥರು ಸಹ ದೇಶ ವಿದೇಶಗಳಲ್ಲಿ ಮಹಾಮಂತ್ರವನ್ನು ಪ್ರಚಾರ ಮಾಡಿದ್ದಾರೆ. “ಹರೇ ರಾಮ ಹರೇ ರಾಮ! ರಾಮ ರಾಮ ಹರೇ ಹರೇ!! ಹರೇ ಕೃಷ್ಣ ಹರೇ ಕೃಷ್ಣ! ಕೃಷ್ಣ ಕೃಷ್ಣ ಹರೇ ಹರೇ!! ಎನ್ನುವ ಭಗವಂತನ ನಾಮವನ್ನು ಭಿಕ್ಷೆಯಾಗಿ ಪಡೆಯುತ್ತಿರುವ ಆದಿ ಬಿಕ್ಷು ಸ್ವರೂಪಿಗಳು. ಶ್ರೀರಾಮನ ನಾಮ ಜಪಿಸುವುದಕ್ಕೆ ಯಾವುದೇ ನಿಯಮವಿಲ್ಲ, ಕಲಿಯುಗದಲ್ಲಿ ಪಂಡಿತರಿಂದ ಪಾಮರರ ವರೆಗೂ ಸ್ತ್ರೀ ಪುರುಷರ ಭೇದವಿಲ್ಲದೆ ಭಗವಂತನ ನಾಮವನ್ನು ಜಪಿಸುವುದರಿಂದ ದುಃಖವನ್ನು ನೀಗಿಸಿ, ಮತ್ತೆ ಗರ್ಭವಾಸ ಬರದಂತೆ ಕಾಯ್ದು ಮುಕ್ತಿಯನ್ನು ಸಹ ನೀಡುತ್ತದೆ. ಅತ್ಯಂತ ಸುಲಭವಾಗಿರುವ ಶ್ರೀರಾಮನ ನಾಮ ಜಪಿಸುವುದರಿಂದ ಮಾನವರಲ್ಲಿ ಯೋಗಸಿದ್ಧಿ ಬೆಳೆಯುತ್ತದೆ. ಭಗವಂತನ ನಾಮದಲ್ಲಿ ಯೋಗ, ಯಜ್ಞ, ತೀರ್ಥ, ದೈವವು ಸಹ ನೆಲೆಸಿರುತ್ತದೆ. ಶ್ರೀರಾಮ ನಾಮಸ್ಮರಣೆಯ ಬಲದಿಂದಲೇ ಸ್ವಾಮಿ ಹನುಮಂತರು ಸಮುದ್ರ ಲಂಘನ ಮಾಡಿ ಸೀತಾ ಮಾತೆಯನ್ನು ದರ್ಶಿಸಿದ ನಂತರ ಲಂಕಾ ದಹನವನ್ನು ಮಾಡುವ ಶಕ್ತಿಯನ್ನು ನೀಡಿದ್ದು ಈ ರಾಮನಾಮವೇ. ಲಂಕಾ ಪಟ್ಟಣದಲ್ಲಿ ಜಗನ್ಮಾತೆಯಾದ ಸೀತೆಯು ಒಂಟಿಯಾಗಿದ್ದಾಗ ದಶಕಂಠ ರಾವಣನು ಸೀತಾ ಮಾತೆಯ ನೆರಳನ್ನು ಸಹ ತಾಕದೆ ರಕ್ಷಿಸಿದ್ದು ಈ ಶ್ರೀರಾಮನ ನಾಮವೇ, ಮಾತೆ ಶಬರಿಗೆ ಮುಕ್ತಿಯನ್ನು ನೀಡಿದ್ದು ಶ್ರೀರಾಮನ ನಾಮ, ದುಷ್ಟರಾದ ಕೌರವರಿಂದ ವಸ್ತ್ರಾಭ ಹರಣ ಸಂದರ್ಭದಲ್ಲಿ ಮಾತೆ ದ್ರೌಪದಿಯನ್ನು ರಕ್ಷಿಸಿದ್ದು ಭಗವಂತನ ನಾಮ ಸ್ಮರಣೆಯಾಗಿದೆ. ಪರಮ ಪೂಜ್ಯ ಗುರುಗಳು ಮುರಳೀಧರ ಸ್ವಾಮೀಜಿಯವರು ಹೇಳುತ್ತಾರೆ:- ಭಗವಂತನ ನಾಮ ಸ್ಮರಣೆಯಿಂದ ದೇವರು ಕಾಣುತ್ತಾನೆ ಹಾಗೂ ಭಗವಂತ ನಮ್ಮೊಂದಿಗೆ ಮಾತನಾಡುತ್ತಾನೆ ಎಂದು ಈ ವಾಕ್ಯಕ್ಕೆ ನಿದರ್ಶನವೆನ್ನುವಂತೆ ಮುರಳೀಧರ ಸ್ವಾಮೀಜಿಯವರ ಶಿಷ್ಯರಾದ ನಮ್ಮ ಗುರುಗಳು ಶ್ರೀನಾಮಶೇಖರ್ ಜೀ, ಅವರು ತಮ್ಮ ಗುರುಗಳ ಬೋಧನೆಯನ್ನು ತ್ರಿಕರಣ ಶುದ್ದಿಯಾಗಿ ನಂಬಿ, ಭಗವಂತನ ನಾಮವನ್ನು ಜಪಿಸುತ್ತಾ ಭಗವಂತನ ನಾಮ ಪ್ರಚಾರದಲ್ಲಿ ನಾಮ ಭಿಕ್ಷೆಯನ್ನು ಪಡೆಯುತ್ತಾ ಜೀವನವನ್ನು ಸಾಗಿಸುತ್ತಿರುವ ಈ ಮಹನೀಯರ ಜೀವನದಲ್ಲಿ ಕಳೆದ ವರ್ಷವೇ ವಿಸ್ಮಯವೆನ್ನುವಂತೆ ಪ್ರಸಿದ್ಧ ಹನುಮತ್ ಕ್ಷೇತ್ರದಿಂದ ಶ್ರೀಸೀತಾರಾಮ ಲಕ್ಷ್ಮಣ ಹನುಮಂತ ದೇವರ ಮೂರ್ತಿಗಳು ಹನುಮಂತನ ಅನುಗ್ರಹದಿಂದ ಈ ಮಹನೀಯರ ಕೈಯಲ್ಲಿ ಸೇವೆಯನ್ನು ಸ್ವೀಕರಿಸಲು ಸ್ವತಃ ಭಗವಂತನೇ ಇವರನ್ನು ಆಯ್ಕೆ ಮಾಡಿಕೊಂಡು ಈ ಮಹನೀಯರನ್ನು ಸೇರಿ ಕೊಂಡಿದ್ದಾರೆ. ಸಕಲ ವೇದಗಳ ಸಾರವಾಗಿರುವ ಸಕಲವನ್ನು ಮಾನವರಿಗೆ ದಯಪಾಲಿಸುವ ಜೀವ ಸಂಜೀವಿನಿ ಯಾಗಿರುವ ಅತ್ಯಂತ ಸುಲಭ ವಾಗಿರುವ ಭಗವಂತನ ನಾಮ ಸ್ಮರಣೆಯನ್ನು ಮಾಡಿ ಮಾನವ ಜನ್ಮವನ್ನು ಸಾರ್ಥಕ ಮಾಡಿಕೊಳ್ಳೂಣ ಅಲ್ಲವೇ….!

ಹರಿನಾಮ ಸಂಕೀರ್ತನ್ ಕೀ ಜೈ!! ಜೈ ಶ್ರೀರಾಮ್
– ಲೇಖನ:-ಶ್ರೀ ಜಿ.ಲತಾ ಗೋವಿಂದರಾಜು,
ಚಳ್ಳಕೆರೆ. ದೂರವಾಣಿ- 9148820569

