ಹೊಸ ವರ್ಷಕ್ಕೆ ಕ್ಯಾಲೆಂಡರ ಬಿಡುಗಡೆ – ಬಸನಗೌಡ ಯಡೇಪುರ.
ವಂದಾಲ ಜ.01

ದೇವರ ಹಿಪ್ಪರಗಿ ತಾಲೂಕಿನ ವಂದಾಲ ಗ್ರಾಮದಲ್ಲಿ ಹೊಸ ವರ್ಷದ ಅಂಗವಾಗಿ ರಸ ಮಂಜರಿ ಕಾರ್ಯಕ್ರಮ ಉದ್ಘಾಟನೆ ಹಾಗೂ ಕ್ಯಾಲೆಂಡರ ಬಿಡುಗಡೆ ಮಾಡಿದ ಯಾದಗಿರಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರು ಹಾಗೂ ದೇವರ ಹಿಪ್ಪರಗಿ ಮತ ಕ್ಷೇತ್ರದ ಮುಂದಿನ ೨೦೨೮ ರಂದು ಎಮ್.ಎಲ್.ಎ ಚುನಾವಣೆಯ ಬಿಜೆಪಿ ಪಕ್ಷದಿಂದ ಪ್ರಬಲ ಆಕಾಂಕ್ಷೆಗಳಾದ ಬಸನಗೌಡ ಪಾಟೀಲ ಯಡೇಪುರ ಅವರು ರಸ ಮಂಜರಿವನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ಬಸನಗೌಡ ಪಾಟೀಲ ಯಡೇಪುರ ಅವರು ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿದ್ದವರು ನಮ್ಮ ದೇವರ ಹಿಪ್ಪರಗಿ ಮತ ಕ್ಷೇತ್ರದ ಎಲ್ಲಾ ಜನರು ನಮ್ಮವರು ಎಂಬ ಭಾವನೆಗಳ ಉಳವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನರಿಗೆ ಸಹಾಯ ಸಹಕಾರ ನೀಡುತ್ತಾ ಬಂದವರು ಯಾವುದೇ ಜಾತಿ ಭೇದ ಭಾವನೆ ಇಲ್ಲದೆ ಎಲ್ಲರೂ ನಮ್ಮವರು ಎನ್ನುವ ಭಾವನೆ ಇಂದ ಬಂದವರು, ನಮ್ಮ ದೇವರ ಹಿಪ್ಪರಗಿ ಮತ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸೇವೆ ಮಾಡುತ್ತಾರೆ ಎಂದು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುತ್ತಿಗೆದಾರರಾದ ಚಂದ್ರಶೇಖರ ಆಸ್ಕಿಯವರು ಹೇಳಿದರು.

ಹಾಗೂ ಮುಖ್ಯ ಅಥಿತಿಗಳಾದ ಕೆ ಎಸ್ ಶ್ರೀನಿವಾಸರಾವ್ ಹಾಗೂ ಮಂಜು ವಂದಾಲ,ಭೀಮನಗೌಡ ಪಾಟೀಲ ಹಾಗೂ ಈ ಕಾರ್ಯಕ್ರಮವನ್ನು ಸ್ವಾಗತ ಹಾಗೂ ನಿರೂಪಣೆ ಮಾಡಿದರು ಪಿಕೆಪಿಎಸ್ ಮಾಜಿ ಅಧ್ಯಕ್ಷರಾದ ಬಸವರಾಜ ಅಸ್ಕಿ ಯವರು ನಡೆಸಿ ಕೊಟ್ಟರು. ಗ್ರಾಮ ಎಲ್ಲಾ ಸಾರ್ವಜನಿಕರು ಈ ಸರ ಮಂಜರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲ್ಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

