ಸಜ್ಜನ ವಿಧ್ಯಾ ವರ್ಧಕದಲ್ಲಿ – ಕೆಂಪು ದಿನ ಆಚರಣೆ.
ಇಳಕಲ್ಲ ಜು.20

ಇಲ್ಲಿನ ಸಜ್ಜನ ವಿಧ್ಯಾವರ್ಧಕ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸಜ್ಜನ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ರೆಡ್ ಡೇ ದಿವಸವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು, ಪುಟ್ಟ ಮಕ್ಕಳು, ವಿಧ್ಯಾರ್ಥಿಗಳು ಮತ್ತು ಶಾಲಾ ಶಿಕ್ಷಕರು ಸಂಪೂರ್ಣವಾಗಿ ಕೆಂಪುಡುಗೆಯಲ್ಲಿ ಕಂಗೊಳಿಸಿದರು, ಮತ್ತು ಶಾಲಾ ಮಕ್ಕಳು ಉಪಹಾರದ ರೂಪದಲ್ಲಿ ಕೆಂಪು ಬಣ್ಣದ ವಿವಿಧ ಫಲಗಳನ್ನು ತಂದು “ಕೆಂಪು ದಿನ” ವನ್ನು ವ್ಯೆವಿಧ್ಯಮಯ ರೀತಿಯಲ್ಲಿ ಆಚರಿಸಿದರು.

ಇಡೀ ಶಾಲಾ ಆವರಣ ಕೆಂಪು ಹೂವು ಮತ್ತು ಕೆಂಪು ಬಲೂನುಗಳಿಂದ ಸಿಂಗರಿಸಲಾಗಿತ್ತು, ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ಕೆ.ಡಿ ವಂದಕುದರಿ, ಮುಖ್ಯ ಗುರುಮಾತೆ ಆರ್.ಆರ್ ಕುಲಕರ್ಣಿ, ಮೇಘಾ ಗಡೇದಗೌಡರ, ರಜೀಯಾ ಕೊಡಕೇರಿ, ಪಿ ಗುಡಿಯಾಳ, ಆರ್ ನಾಗೂರ, ಜಿ ಕಲ್ಗುಡಿ, ಸ್ವಾತಿ ಚಲವಾದಿ, ಮುಂತಾದವರು ಪಾಲ್ಗೊಂಡಿದ್ದರು, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಂಸ್ಥೆಯ ಅಧ್ಯಕ್ಷರಾದ ಸಂಜಯ ಕಂಪ್ಲಿ ಸಿಬ್ಬಂದಿ ವರ್ಗವನ್ನು ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಅಬ್ದುಲ್.ಗಫಾರ್.ತಹಶೀಲ್ದಾರ್.ಇಲಕಲ್ಲ.ಬಾಗಲಕೋಟ