ತಹಸೀಲ್ದಾರರ ದುರಾಡಳಿತದಿಂದ ದಲಿತ ಜಮೀನು ಬ್ಯಾಂಕಿಗೆ ಬಲಿ.
ಸಿಂದಗಿ ಜು 20

ನನ್ನ ಯಾವುದೇ ಆಸ್ತಿಯನ್ನು ಆಡಮಾನವಾಗಿ ನೀಡದೇ ಇದ್ದರು ನನ್ನ ಆಸ್ತಿಯ ಮೇಲೆ ಭೋಜಾ ದಾಖಲಿಸಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ತಹಶಿಲ್ದಾರರಾದ ಪ್ರದೀಪಕುಮಾರ ಹಿರೇಮಠ ಇವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಸ್ತಿಯ ಮಾಲೀಕರಾದ ಸಿಂದಗಿ ಪಟ್ಟಣದ ನಿವಾಸಿ ಪ್ರವೀಣ ಹಾಲಹಳ್ಳಿ ಇವರ ಪತ್ರಿಕಾ ಹೇಳಿಕೆ ಪಟ್ಟಣದ ವ್ಯಾಪ್ತಿಯ ಆಸ್ತಿಯ ಸರ್ವೆ ನಂಬರ 993/4 ಕ್ಷೇತ್ರ 2೦ ಗುಂಟೆ, 993/5 ಕ್ಷೇತ್ರ 11 ಗುಂಟೆ ಈ ಆಸ್ತಿಯ ಮೇಲೆ ಸಿಂದಗಿ ತಹಶಿಲ್ದಾರ ಪ್ರದೀಪಕುಮಾರ ಹಿರೇಮಠ ಅವರು ದಲಿತರಿಗೆ ಸೇರಿದ ಆಸ್ತಿಯ ಮೇಲೆ ತಮ್ಮ ಅಧಿಕಾರ ದುರುಪಯೋಗ ಮಾಡಿ ಕೊಂಡಿದ್ದು.1,84 ಕೋಟಿ ರೂಪಾಯಿಗಳಷ್ಟು ಆಸ್ತಿ ಮೇಲೆ ಭೋಜನವನ್ನು ಬಾಗಲಕೋಟೆ ಬಸವೇಶ್ವರ ಸಹಕಾರ ಬ್ಯಾಂಕಿನ ಹೆಸರಿನಲ್ಲಿ ದಾಖಲಿಸಿ ಬೋಜಾ ಕುಡ್ರಿಸಿದ್ದಾರೆ ನಾನಾಗಲಿ ಹಾಗೂ ಕುಟುಂಬದ ಯಾವೊಬ್ಬ ಸದಸ್ಯರು ಈ ಬ್ಯಾಂಕಿನಿಂದ ಯಾವುದೇ ಸಾಲ ಪಡೆದಿರುವುದಿಲ್ಲ, ಯಾವುದೇ ಸಾಲಗಾರರಿಗೆ ಜಾಮೀನಿ ಕೂಡಾ ಆಗಿರುವುದಿಲ್ಲ ಆದರೂ ನಮ್ಮ ಆಸ್ತಿಯ ಮೇಲೆ ಸದರಿ ಬ್ಯಾಂಕಿನ ಹೆಸರಿನಲ್ಲಿ ಭೋಜಾ ದಾಖಲಿಸಿದ್ದಾರೆ. ಇದರ ಬಗ್ಗೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಸ್ತಿಯ ಮೇಲಿನ ಭೋಜಾವನ್ನು ಕಡಿಮೆ ಮಾಡಲು ಪತ್ರದ ಮುಖಾಂತರ ಕೇಳಿ ಕೊಂಡಿದ್ದೇವೆ ಪತ್ರಕ್ಕೆ ಜಿಲ್ಲಾಧಿಕಾರಿಗಳು ಅರ್ಜಿಯನ್ನು ನಿಯಮಾನುಸಾರ ಕ್ರಮ ಕೈಗೊಂಡು ಮುಂದಿನ ಕ್ರಮದ ಬಗ್ಗೆ ಅರ್ಜಿದಾರರಿಗೆ ಹಿಂಬರಹ ನೀಡಿ ಎಂದು ಇಂಡಿ ಉಪ ವಿಭಾಗಾಧಿಕಾರಿಗಳಿಗೆ ಹಾಗೂ ಸಿಂದಗಿ ತಹಶಿಲ್ದಾರರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರೆ.

ಆದರೂ ತಾಲೂಕಿನ ತಹಶಿಲ್ದಾರರು ಜಿಲ್ಲಾಧಿಕಾರಿಗಳ ಪತ್ರಕ್ಕೆ ಯಾವುದೇ ಬೆಲೆ ಕೊಡದೆ ಅರ್ಜಿದಾರರಿಗೆ ಯಾವುದೇ ಹಿಂಬರಹ ನೀಡದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಈ ಕುರಿತು ತನಿಖೆ ಮಾಡಬೇಕು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ದಲಿತ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕೆಂದು ದಲಿತ ಮುಖಂಡರಾದ ವೈ.ಸಿ ಮಯೂರ ಹಾಗೂ ಸಂತೋಷ ಮಣಗಿರಿ ಇವರುಗಳು ಗ್ರೇಡ್ ೨ ತಹಶಿಲ್ದಾರರಾದ ಇಂದಿರಾಬಾಯಿ ಬಳಗಾನೂರ ಇವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರವೀಣ ಹಾಲಹಳ್ಳಿ ಶರಣು ಚಲವಾದಿ ಮಹೇಶ ಜಾಬಣಗಣವರು ರವಿ ಹೋಳ್ ಮುಂತಾದವರು ಇದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ