ಮೂರನೇ ಬಾರಿಗೆ ವಕೀಲರ ಸಂಘಕ್ಕೆ – ಆಯ್ಕೆಯಾದ ಜಿ ಹೊನ್ನೂರಪ್ಪ.
ಕೂಡ್ಲಿಗಿ ಜು.21

ಪಟ್ಟಣದ ನ್ಯಾಯಲಯದ ವಕೀಲರ ಸಂಘಕ್ಕೆ ಚುನಾವಣೆ ನಡೆದ ಪ್ರಯುಕ್ತ ಈ ಬಾರಿಯ ಚುನಾವಣೆಯಲ್ಲಿ ಮೂರನೇ ಬಾರಿಗೆ ಜಿ.ಹೊನ್ನೂರಪ್ಪ ಅವರು ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದು ಉಳಿದ ಪದಾಧಿಕಾರಿಗಳ ಆಯ್ಕೆಯು ಸಹ ಚುನಾವಣೆ ಮೂಲಕ ಮಾಡಲಾಗಿ ವಿಜಯನಗರ ಜಿಲ್ಲೆಯ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಗೆ ಸಂಘದ ಬೈಲಾ ಸಂಖ್ಯೆ 19 ರೀತ್ಯಾ 5 ವರ್ಷಗಳ ಅವಧಿಗೆ ಈ ಕೆಳಕಂಡ ಅಭ್ಯರ್ಥಿಗಳು ಕ್ರಮಬದ್ಧವಾಗಿ ಚುನಾಯಿತರಾಗಿದ್ದಾರೆಂದು ಚುನಾವಣಾ ರಿಟರ್ನಿಂಗ್ ಆಫೀಸರ್ ಜೆ.ಎಂ ನಾಗರಾಜ ಅವರು ಗೆಲುವು ಪಡೆದವರ ಆಯ್ಕೆ ಪಟ್ಟಿ ಘೋಷಣೆ ಈ ರೀತಿಯಾಗಿದೆ ಜಿ.ಹೊನ್ನೂರಪ್ಪ (ಅಧ್ಯಕ್ಷ), ಮಲ್ಲಿಕಾಜುನ.ಟಿ (ಉಪಾಧ್ಯಕ್ಷ), ವಿರುಪಾಕ್ಷಪ್ಪ ಸಿ (ಪ್ರಧಾನ ಕಾರ್ಯದರ್ಶಿ), ಡಿ.ಹೆಚ್ ದುರುಗೇಶ.(ಸಹ ಕಾರ್ಯದರ್ಶಿ), ಕೆ.ಬಿ ಸಾವಿತ್ರಿಬಾಯಿ (ಖಜಾಂಚಿ) (ಮಹಿಳಾ ಮೀಸಲಾತಿ), ಲಕ್ಷ್ಮಿದೇವಿ.ಡಿ (ಸದಸ್ಯ) (ಮಹಿಳಾ ಮೀಸಲಾತಿ), ಎಂ.ರಾಮಪ್ಪ (ಸದಸ್ಯ) ಇವರುಗಳ ಆಯ್ಕೆಯಾಗಿದ್ದಾರೆ ಎಂದು ವಿಜಯನಗರ ಜಿಲ್ಲೆ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ, ಬಳ್ಳಾರಿ ಸ.ಸಂ.ಉ.ನಿ.ಕಛೇರಿ, ಬಳ್ಳಾರಿ ಹಾಗೂ ಕೂಡ್ಲಿಗಿ ವಕೀಲರ ಸಂಘದ ಚುನಾವಣಾ ರಿಟರ್ನಿಂಗ್ ಆಫೀಸರ್ ಜೆ.ಎಂ ನಾಗರಾಜ ರವರು ಗೆಲುವು ಪಡೆದವರ ಆಯ್ಕೆ ಘೋಷಣೆ ಮಾಡಿದ್ದಾರೆ. ಗೆಲುವು ಪಡೆದ ಪದಾಧಿಕಾರಿಗಳಿಗೆ ಸರ್ಕಾರಿ ವಕೀಲರಾದ ಶಿವಪ್ರಸಾದ್ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ