ಪತ್ರಕರ್ತರಿಗೆ ಸರ್ಕಾರದ ಮೂಲ ಸೌಲಭ್ಯ ನೀಡಲಿ – ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ.

ಕೂಡ್ಲಿಗಿ ಜು.21

ಕರ್ನಾಟಕ ನಿರತ ಪತ್ರಕರ್ತರ ಧ್ವನಿ ತಾಲೂಕ ಘಟಕದ ವತಿಯಿಂದ ಹಾಗೂ ಎಸ್.ಎಸ್ ನಾರಾಯಣ ಸೂಪರ್ ಸ್ಪೆಷಲಿಸ್ಟ್ ಸೆಂಟರ್ ದಾವಣಗೆರೆ ಸಾರ್ವಜನಿಕ ಆಸ್ಪತ್ರೆ ಕೂಡ್ಲಿಗಿ ಇವರ ಜಂಟಿ ಸಹ ಭಾಗಿತ್ವದಲ್ಲಿ ಕೂಡ್ಲಿಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಪತ್ರಿಕೆ ಮತ್ತು ಪತ್ರಕರ್ತರ ಸಂಕಷ್ಟವನ್ನು ಸರ್ಕಾರ ಅರಿಯಬೇಕು. ಪತ್ರಕರ್ತರಿಗೆ ಸರ್ಕಾರವು ಕನಿಷ್ಠ ಮೂಲಭೂತ ಸೌಲಭ್ಯಗಳನ್ನು ಪತ್ರಕರ್ತರಿಗೆ ನೀಡಿಲ್ಲ. ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡ ಬೇಕಾಗಿದೆ. ಪತ್ರಕರ್ತರು ಸಾರ್ವಜನಿಕ ವರದಿ ಮಾಡಲು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಕಲ್ಪಿಸ ಬೇಕಿತ್ತು. ಸರ್ಕಾರ ಹಾಗೂ ರಾಜಕಾರಣಿಗಳು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದು ಸಲ್ಲದು ಪತ್ರಕರ್ತರಿಗೆ ಎಷ್ಟೊಂದು ನೋವುಗಳಿದ್ದರೂ ವರದಿ ಮಾಡಲು ಹಿಂಜರಿಯುವುದಿಲ್ಲ. ಹಿಂಗಾದಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡ ಬೇಕಾಗುತ್ತದೆ ಎಂದು ಕಾ.ನಿ.ಪ ಧ್ವನಿ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಕಾವಲಿ ಶಿವಪ್ಪ ನಾಯಕ ಮಾತನಾಡಿ ಪತ್ರಕರ್ತರು ಸುದ್ದಿಗಳನ್ನು ಪ್ರಸಾರ ಮಾಡುವುದರ ಜೊತೆಗೆ ಪತ್ರಿಕಾ ದಿನಾಚರಣೆಯ ಮೂಲಕ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜನೆ ಮಾಡಿರುವುದು ಸಾರ್ವಜನಿಕರಿಗೆ ಉಪಯುಕ್ತವಾಗಿದೆ ಎಂದರು. ಡಿ.ವೈ.ಎಸ್.ಪಿ ಮಲ್ಲೇಶ್ ದೊಡ್ಮನಿ ಮಾತನಾಡಿ ಪತ್ರಕರ್ತರು ಅತ್ಯಂತ ಒತ್ತಡದ ಬದುಕಿನಲ್ಲಿ ಸಾಗುತ್ತಿದ್ದು. ಸಾರ್ವಜನಿಕರಿಗೆ ಉಪಯುಕ್ತವಾಗುವ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು.

ಡಿ.ಹೆಚ್.ಓ ಡಾ, ಶಂಕರ್.ನಾಯ್ಕ್ ಮಾತನಾಡಿ ಸಾರ್ವಜನಿಕರು ತಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಹಣ್ಣುಗಳು ಹಸಿ ತರಕಾರಿ ಬಳಸುವುದರಿಂದ ಉತ್ತಮ ಆರೋಗ್ಯ ಇರುತ್ತದೆ. ತಮ್ಮ ಆರೋಗ್ಯದಲ್ಲಿ ಖರೀದ ಪದಾರ್ಥಗಳು ಬೇಕರಿ ದಿನಸುಗಳು ಹೆಚ್ಚು ಬಳಸ ಬಾರದೆಂದು ಸಲಹೆ ನೀಡಿದರು. ಆರೋಗ್ಯ ಶಿಬಿರದಲ್ಲಿ 250 ಹೆಚ್ಚು ಜನ ತಪಾಸಣೆ ಮಾಡಿಸಿ ಕೊಂಡರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ತಾಲೂಕ ಘಟಕದ ಅಧ್ಯಕ್ಷ ಬಾಣದ ಶಿವಮೂರ್ತಿ, ಶಾಸಕರ ಆಪ್ತ ಸಹಾಯಕರಾದ ಮರುಳು ಸಿದ್ದಪ್ಪ, ದಿನಕರ, ತಾಲೂಕ ಆರೋಗ್ಯ ಅಧಿಕಾರಿ ಡಾ, ಪ್ರದೀಪ್.ಎಸ್ ಪಿ, ಸೈಯದ್ ಶಕುರ್ ಪಂಚಾಯಿತಿ ಸದಸ್ಯರು ಸ್ಥಾಯಿ ಸಮಿತಿ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಸಾಲುಮನೆ ರಾಘವೇಂದ್ರ, ಊರಮ್ಮ, ಸರಸ್ವತಿ ರಾಘವೇಂದ್ರ ಪಟ್ಟಣ ಪಂಚಾಯತಿ ಸದಸ್ಯರು, ಸುನಿಲ್ ಗೌಡ ತಾಲೂಕು ಅಧ್ಯಕ್ಷರು ವೀರಶೈವ ಮಹಾಸಭಾ ಕೂಡ್ಲಿಗಿ ಘಟಕ, ರೆಹಮಾನ್ ಖಾನ್ ಸಮಾಜ ಸೇವಕರು, ಡಾ. ರಾಕೇಶ್, ಎಸ್ಎಸ್ ನಾರಾಯಣ ಹೆಲ್ತ್ ಸೂಪರ್ ಸ್ಪೆಷಲಿಸ್ಟ್ ಆಸ್ಪತ್ರೆ ದಾವಣಗೆರೆ ಸಿಬ್ಬಂದಿಗಳಾದ ಗುಡ್ಡಪ್ಪ, ಕಾರ್ತಿಕ್, ಅಂಜಿನಪ್ಪ, ಸೃಷ್ಟಿ, ಲಾವಣ್ಯ, ವಾತ್ಸಲ್ಯ, ಕಾ.ನಿ.ಪ ಧ್ವನಿ ಪದಾಧಿಕಾರಿಗಳಾದ ಬಿ.ರಾಘವೇಂದ್ರ, ಮಂಜುನಾಥ, ಅನಿಲ್ ಕುಮಾರ್, ನಾರಾಯಣ, ಬಣಕಾರ್ ಮೂಗಪ್ಪ, ರಮೇಶ್, ವಸಂತ, ತಿಪ್ಪೇಸ್ವಾಮಿ, ಕೆ.ಎಸ್ ವೀರೇಶ್, ವಾಗೀಶ್ ಮೂರ್ತಿ, ಸೇರಿದಂತೆ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು ಎಂದು ವರದಿಯಾಗಿದೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button