ಆಯತಪ್ಪಿ ತಪ್ಪಿ ಬಿದ್ದ ಮಹಿಳೆಯ – ಶವ ಚರಂಡಿಯಲ್ಲಿ ಪತ್ತೆ.
ಜಕ್ಕಲಿ ಜು.20

ರೋಣ ತಾಲೂಕಿನ ನರೇಗಲ್ ಸಮೀಪದ ಜಕ್ಕಲಿ ಗ್ರಾಮದಲ್ಲಿ ಜುಲೈ 18 ಸೋಮವಾರ ರಂದು ರಾತ್ರಿ 11 ಗಂಟೆಗೆ ಬಯಲು ಶೌಚಾಲಯಕ್ಕೆಂದು ಹೋದ ಗ್ರಾಮದ ವಯೋ ವೃದ್ಯೆ ಮುಖ್ಯ ಚರಂಡಿಗೆ ಆಯತಪ್ಪಿ ಬಿದ್ದು ಚರಂಡಿ ನೀರಿಗೆ ಸಿಲುಕಿ 75 ವರ್ಷದ ಗೌರಮ್ಮ ನೀಲಪ್ಪ ಕೋರಿ ಸಾವನ್ನಪ್ಪಿದ ಘಟನೆ ಜನರಲ್ಲಿ ಮನ ಮುಟ್ಟುವಂತೆ ಮಾಡಿದ್ದು ಕಳೆದ ಎರಡು ದಿನಗಳಿಂದ ಜಕ್ಕಲಿಯಲ್ಲಿ ಸುರಿದ ಭಾರಿ ಮಳೆಗೆ ಜುಲೈ 18 ರಂದು ರಾತ್ರಿ 11 ಗಂಟೆಗೆ ಶೌಚಾಲಯಕ್ಕೆ ತೆರಳಿದ ವೃದ್ದೆ ಮಹಿಳೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಆಘಾತ ಗೊಂಡು ಎರಡು ದಿನಗಳ ಕಾಲ ಹುಡುಕಿದರೂ ಸಿಗದ ವೃದ್ದೆ ಗ್ರಾಮದ ಸಮೀಪ ಅಗಸರ ಹಳ್ಳದಲ್ಲಿ ಇಂದು ನಸುಕಿನ ಜಾವ ಶವವಾಗಿ ಪತ್ತೆಯಾಗಿದ್ದಾಳೆ ಈ ಸಮಯದಲ್ಲಿ ನರೇಗಲ್ ಪೊಲೀಸ್ ಠಾಣಾ ಪಿ ಎಸ್ ಐ ಐಶ್ವರ್ಯ ನಾಗರಾಳ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಶವವನ್ನು ರೋಣ ತಾಲೂಕು ಆಸ್ಪತ್ರೆಗೆ ರವಾನೆಯ ಕಾರ್ಯವನ್ನು ಕೈ ಕೊಂಡರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ