ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು – ಡಾ, ಕೆ.ಜೆ ಕಾಂತರಾಜ್.
ತರೀಕೆರೆ ಜು .24

ಕರ್ತವ್ಯದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ, ಸಾರ್ವಜನಿಕರು,ಸಿಬ್ಬಂದಿ ವರ್ಗದವರು ಪ್ರೀತಿ ವಿಶ್ವಾಸಗಳಿಸಲು ಸಾಧ್ಯವಾಯಿತು ಅವರ ಪ್ರೋತ್ಸಾಹದಿಂದ ಉತ್ತಮ ಸೇವೆ ಮಾಡಲು ಅವಕಾಶವಾಯಿತು ಎಂದು ಉಪ ವಿಭಾಗಾಧಿಕಾರಿ ಡಾ, ಕೆ.ಜೆ ಕಾಂತರಾಜ್ ಹೇಳಿದರು. ಅವರು ಬುಧವಾರ ಸಂಜೆ ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ತರೀಕೆರೆ ಕಂದಾಯ ಉಪ ವಿಭಾಗದ ವತಿಯಿಂದ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಉಪ ವಿಗಾಧಿಕಾರಿ ಎನ್.ವಿ ನಟೇಶ್ ರವರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರ್ಥಿಕವಾಗಿ ದುರ್ಬಲರಾಗಿರುವ ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು ಈ ಕುರಿತು ಮುರಾರ್ಜಿ ಶಾಲೆಗಳಲ್ಲಿ ಅಂತಹ ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಹೇಳಿದರು.
ಸಂಘ ಸಂಸ್ಥೆಯವರು ಸಾರ್ವಜನಿಕರು ಸಿಬ್ಬಂದಿ ವರ್ಗದವರು ನಾನು ಉತ್ತಮ ಸೇವೆ ಮಾಡಲು ಪ್ರೋತ್ಸಾಹಿಸಿದ್ದಾರೆ. ಅದೇ ರೀತಿ ನೂತನವಾಗಿ ಉಪ ವಿಭಾಗಾಧಿಕಾರಿಯಾಗಿ ಬಂದಿರುವ ಎನ್.ವಿ ನಟೇಶ್ ರವರಿಗೆ ಪ್ರೋತ್ಸಾಹ ನೀಡಿರಿ ಎಂದು ಹೇಳಿದರು. ಅಜ್ಜಂಪುರ ತಹಶೀಲ್ದಾರ್ ವಿನಯ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತರೀಕೆರೆ ತಹಶೀಲ್ದಾರ್ ವಿಶ್ವಜಿತ್ ಮಹೇತ, ಎನ್.ಆರ್ ಪುರ ತಹಶೀಲ್ದಾರ್ ತನುಜಾ ಸವದತ್ತಿ, ಕಡೂರು ತಹಶೀಲ್ದಾರ್ ಪೂರ್ಣಿಮಾ ಗ್ರೇಡ್ 2 ತಹಶೀಲ್ದಾರ್ ಡಾ, ನೂರುಲ್ಲಾ ಹುದಾ, ನಿಕಟ ಪೂರ್ವ ತಹಶೀಲ್ದಾರ್ ರಾಜೀವ್, ನವೀನ್, ಕೃಷ್ಣಮೂರ್ತಿ, ಉಪ ತಹಶೀಲ್ದಾರ್ ಗೌತಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಅನಂತಪ್ಪ, ಯಶವಂತ್, ಮಂಜುನಾಥ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಾದ ಕಡೂರು ಹನುಮಂತಪ್ಪ ತರೀಕೆರೆ ವೀಣಾ ಶಿಕ್ಷಕರಾದ ಶೇಖರಪ್ಪ ಡಾ, ದೇವರಾಜ್ ಮತ್ತು ನೂತನ ಉಪ ವಿಭಾಗ ಅಧಿಕಾರಿ ಎನ್.ವಿ ನಟೇಶ್ ಮಾತನಾಡಿದರು ಕಚೇರಿ ಮಹಿಳಾ ಸಿಬ್ಬಂದಿಗಳು ಡಾ, ಕೆ.ಜೆ ಕಾಂತರಾಜ್ ರವರ ಕುರಿತು ರಚಿಸಿದ ಗೀತೆಯನ್ನು ಹಾಡಿ ಕಣ್ಣೀರು ಕಂಬನಿ ಸುರಿಸಿದರು ಭಾವ ಪೂರ್ಣ ಬೀಳ್ಕೊಡುಗೆ ಸಮಾರಂಭವಾಗಿತ್ತು ಈ ಒಂದು ಕಾರ್ಯಕ್ರಮ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ.ಚಿಕ್ಕಮಗಳೂರು