ಮೆಟ್ರೋ ಬೇಕರಿ ಮಾಲೀಕ ಗ್ರಾಹಕರ ಆರೋಗ್ಯ ಜೊತೆ ಚೆಲ್ಲಾಟವಾಡುತ್ತಿದ್ದಾರೆ – ಸಂತೋಷ ಕಡಿವಾಲರ ಆರೋಪ.
ರೋಣ ಜು.25

ಪಟ್ಟಣದ ಬಾದಾಮಿ ರಸ್ತೆಯ ಸೂಡಿ ಕ್ರಾಸ್ ಬಳಿ ಇರುವ ಮೆಟ್ರೋ ಬೇಕರಿ ಯೊಂದರಲ್ಲಿ ಅವಧಿ ಮೀರಿದ ಕ್ರೀಮ್ ಕೇಕ್ ಮಾರಾಟ ಮಾಡಿ ಯುವಕರ ಹಾಗೂ ಗ್ರಾಹಕರ ಪ್ರಾಣದ ಜೊತೆ ಬೇಕರಿ ಮಾಲೀಕ ಚೆಲ್ಲಾಟವಾಡುತ್ತಿದ್ದಾನೆ ಎಂದು ರೋಣ ಪಟ್ಟಣದ ಪುರಸಭೆ ಸದಸ್ಯ ಸಂತೋಷ ಕಡಿವಾಲ ಸಾಕ್ಷಿ ಸಮೇತ ನಮ್ಮ ಮಾಧ್ಯಮಕ್ಕೆ ಮಾಹಿತ ಒದಗಿಸಿದರು.ಇಲ್ಲಿಗೆ ಬರುವ ಪ್ರತಿಯೊಬ್ಬ ನಾಗರಿಕರು ರುಚಿಯ ಜೊತೆಗೆ ಶುಚಿಯಾದ ಬರ್ತ್ಡೇ ಕೇಕ್ ಮಕ್ಕಳಿಗೆ ಚಾಕ್ಲೆಟ್ ಮತ್ತು ಬಿಸ್ಕೆಟ್ ಗಳು ದೊರೆಯುವ ಸುಸಜ್ಜಿತ ಬೇಕರಿಗಳೆಂದು ತಿಳಿದು ಕೊಂಡಿರುತ್ತಾರೆ.ಅದರಂತೆ ಮೆಲ್ನೋಟಕ್ಕೆ ಸ್ವಚ್ಚವಾಗಿ ಸುಂದರವಾಗಿರುವ ರೋಣ ಸೂಡಿ ಕ್ರಾಸ್ ಬಳಿ ಇರುವ ಮೆಟ್ರೋ ಬೇಕರಿಗೆ ಜೂಲೈ 23 ರಂದು ರೋಣ ನಗರದ ಸಂತೋಷ ಕಡಿವಾಲ ಅವರ ಅಭಿಮಾನಿಗಳು ಹಾಗೂ ಸ್ನೇಹಿತರೊಂದಿಗೆ ಸಂತೋಷ ಅವರ ಹುಟ್ಟು ಹಬ್ಬದ ನಿಮಿತ್ಯ ಸಂತೋಷ ಅವರ ಅಭಿಮಾನಿಗಳು ಹುಟ್ಟು ಹಬ್ಬ ಆಚರಣೆ ಮಾಡಲು ಸೂಡಿ ಕ್ರಾಸ್ ಬಳಿ ಇರುವ ಮೆಟ್ರೋ ಬೇಕರಿಗೆ ಹೋಗಿ ಕೇಕ್ ತಗೆದುಕೊಂಡು ಬಂದಿದ್ದು ಹುಟ್ಟುಹಬ್ಬ ಆಚರಣೆ ಮಾಡುವ ವೇಳೆ ಖರೀದಿಸಿದ ಕೇಕ್ ಅನ್ನು ತಿನ್ನಲು ಕೊಡುವಾಗ ಅವುಗಳು ಅವಧಿ ಮೀರಿ ರುಚಿ ಸವೆಯಲು ಮುಂದಾದಾಗ ಕೊಳೆತ ವಾಸನೆ ಅಂತೇ ಕಹಿ ಯಾಗಿರುವುದು ಕಂಡು ಬರುತ್ತೆ ಸ್ನೇಹಿತರೇ ಇದನ್ನು ಗಮನಿಸಿ ಕೇಕ್ ಕಟ್ ಮಾಡಿ ನೋಡಿದಾಗ ಸಂಪೂರ್ಣ ಕೇಕ್ ಹಾಳಾಗಿ ಅವಧಿ ಮೀರಿರುವುದು ಕಂಡು ಬಂತು ಈ ಬೇಕರಿಯ ಕೇಕ್ ನ ಒಳಗೆ ಕೊಳೆತ ಸ್ಥಿತಿಯಲ್ಲಿದಿದ್ದನ್ನು ಗಮನಿಸಿ, ಬೇಕರಿ ಅವರಿಗೆ ಸಂತೋಷ ಕಡಿವಾಲ ಅವರು ತಿಳಿಸಿದರೇ ಮಾಲೀಕರು ಬೇಕರಿ ಪ್ರಾರಂಭ ಮಾಡುವ ಮುನ್ನ ಪುರಸಭೆಯ ಪರವಾಣಿಗೆಯೂ ಸಹ ಪಡೆಯದಿರುವುದು ಕಂಡು ಬರುತ್ತದೆ ಬಂಧುಗಳೇ ಇದನ್ನೆಲ್ಲಾ ಗಮನಿಸಿದ ಸಂತೋಷ ಅವರು ಕೂಡಲೇ ಪುರಸಭೆ ಸಿಬ್ಬಂದಿಗಳನ್ನ ಸ್ಥಳಕ್ಕೆ ಕರೆಸಿ ಬೇಕರಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ನಮ್ಮ ಸಿಹಿ ಕಹಿ ಮಾಧ್ಯಮಕ್ಕೆ ತಿಳಿಸಿದರು.ಇಂತಹ ದೊಡ್ಡ ಬೇಕರಿಗಳಲ್ಲಿ ಅವಧಿ ಮೀರಿದ ಐಸ್ ಕ್ರೀಮ್ ಮತ್ತು ಬರ್ತ್ಡೇ ಕೇಕ್ ಮಾತ್ರವಲ್ಲದೇ, ಆಹಾರ ಗುಣ ಮಟ್ಟವು ಇದೇ ರೀತಿಯಾಗಿದ್ದೀಯಾ ಎಂದು ಕೂಡಲೇ ಗದಗ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮೆಟ್ರೋ ಬೇಕರಿ ವಿರುದ್ದ ಸೂಕ್ತ ಕ್ರಮ ಜರುಗಿಸಲು ಮುಂದಾಗಬೇಕಿದೆ ಎಂದು ತಿಳಿಸಿದರು.

ಬೇಕರಿಗಳು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ಇನ್ನೀತರೇ ಆಹಾರ ಪದಾರ್ಥಗಳನ್ನು ನೀಡಬೇಕಾದ ಅಂಗಡಿ ಮಾಲೀಕರು ತಮಗೆ ಹೊರೆಯಾದ ಬಾಡಿಗೆ ಹಣವನ್ನು ತೆಗೆಯಲು ಇಂತಹ ನೂತನ ಮಾರ್ಗಗಳನ್ನು ಕಂಡುಕೊಂಡ ಅದೇಷ್ಟೋ ಇಂತಹ ಗದಗ ಜಿಲ್ಲಾ ಸೇರಿದಂತೆ ಇನ್ನೂ ಅನೇಕ ಭಾಗಗಳಲ್ಲಿ ಬೇಕರಿ ಮಾಲೀಕರು ಗ್ರಾಹಕರಿಂದ ಹಣ ಫೀಕಲು ಅವಧಿ ಮೀರಿದ ಕೇಕ್ ಹಾಗೂ ಇನ್ನೀತರೆ ವಸ್ತುಗಳನ್ನು ಗ್ರಾಹಕರಿಗೆ ನೀಡುತ್ತಿದ್ದು ಈ ಕೂಡಲೇ ಆಹಾರ ಇಲಾಖೆ ಎಚ್ಚೇತ್ತುಕೊಂಡು ಇಂತಹ ಬೇಕರಿ ವಿರುದ್ದ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಅಭಿಪ್ರಾಯದೊಂದಿಗೆ ನಮ್ಮ ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್ ಮೂಲಕ ಆಗ್ರಹವಾಗಿದೆ. ಗದಗ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳೇ ಎಲ್ಲಿದ್ದೀರಾ ನಿಮ್ಮ ಚಿತ್ತ ಗದಗ ಪಟ್ಟಣ ಮತ್ತು ರೋಣದಂತಹ ನಗರಗಳತ್ತ ಹರಿಸುವದರೊಂದಿಗೆ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಮೆಟ್ರೋ ಬೇಕರಿ ರೋಣ ಮಾಲೀಕನಿಗೆ ಕ್ರಮ ಜರುಗಿಸುವುದರೊಂದಿಗೆ ಆ ಬೇಕರಿಯನ್ನು ಸೀಜ್ ಮಾಡಬೇಕೆಂದು ನಮ್ಮ ಮಾಧ್ಯಮದ ಒತ್ತಾಯವಾಗಿದೆ.ಜೊತೆಗೆ ಮೆಟ್ರೋ ಬೇಕರಿ ರೋಣ ಮಾಲೀಕರಿಗೆ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪುರಸಭೆ ಇಲಾಖೆ ಮುಖ್ಯ ಅಧಿಕಾರಿಗಳು ಬೇಕರಿ ಪ್ರಾರಂಭ ಮಾಡುವ ಮುನ್ನ ಪುರಸಭೆ ಪರವಾನಿಗೆ ಪಡೆಯದೇ ಇರುವ ಮೆಟ್ರೋ ಬೇಕರಿ ಮಾಲೀಕರಿಗೆ ಯಾವ ಕ್ರಮ ತೆಗೆದು ಕೊಳ್ಳುವರು ಎಂದು ಕಾದು ನೋಡ ಬೇಕಿದೆ…..
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ