ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ – ಪಠ್ಯ ಪುಸ್ತಕ ವಿತರಣಾ ಸಮಾರಂಭ ಜರುಗಿತು.
ಕಲಕೇರಿ ಜು.25

ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಇಂದು ಎಲ್ಲಾ ಸರ್ಕಾರಿ ಶಾಲೆಗಳಿಗೆ ಕಲಕೇರಿಯಲ್ಲಿ ಕೇಂದ್ರ ಸರಕಾರದ ರಾಷ್ಟ್ರೀಯ ಸಾಕ್ಷಾರತ ಮಿಷನ್ ಸದಸ್ಯರಾದ ಶ್ರೀ ಡಾ, ನಾಗರಾಜ್ ಗೌರಿ ಬಿದನೂರು ಇವರ ಸಾರತ್ಯದಲ್ಲಿ ಕಲಕೇರಿ ಗ್ರಾಮದ ಭಗೀರಥ ಸಮಾಜದ ಮುಖಂಡರಾದ ಭಾಗ್ಯವಂತ ಮೊಪಗಾರ ಇವರು ಕಲಕೇರಿ ಜಿಲ್ಲಾ ಪಂಚಾಯತ ವ್ಯಾಪ್ತಿಗೆ ಸಂಭಂದಿಸಿದ ಶಾಲೆಗಳ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಣಾ ಸಮಾರಂಭ ಏರ್ಪಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ನಮ್ಮ ತಾಲೂಕಿನ ಹೆಮ್ಮೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದ ಶ್ರೀ ಎಂ.ಬಿ ಯಡ್ರಾಮಿ, ಶಾಲೆಗೆ ಭೂದಾನಿಗಳಾದ ಶ್ರೀ ವಿ.ಕೆ ಜಾಲಹಳ್ಳಿಮಠ, ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ರಾಜಹ್ಮದ ಸಿರಸಗಿ, ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ ಬೇಡರ, ವಿಶ್ವನಾಥ್ ರಾಠೋಡ್. ಸ್ಥಳೀಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ನಂದಿಮಠ.

ಆನಂದ ಅಡಕಿ, ಲಾಳೆಮಶ್ಯಾಕ ವಲ್ಲಿಭಾವಿ, ಭವಾನಿ ಕಂಪ್ಯೂಟರ್ ಅಧ್ಯಕ್ಷರು ಹನಮಂತ ವಡ್ಡರ, ಮಲ್ಲು ನಾವಿ, ಸಿ.ಆರ್.ಪಿ ಯವರಾದ. ಎಸ್ ಎಲ್.ನಾಯ್ಕೋಡಿ, ಸ್ಥಳೀಯ ಶಾಲೆಗಳ ಮುಖ್ಯ ಗುರುಗಳಾದ. ಜೆ.ಬಿ ಕುಲಕರ್ಣಿ, ಡಿ.ಬಿ ಅಡಕಿ, ಎಸ್.ಬಿ ಪಡಶೆಟ್ಟಿ, ಹಾಗೂ ಎಲ್ಲಾ ಶಾಲೆಯ ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು, ಮುದ್ದು ಮಕ್ಕಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ

