“ಕಣ್ಣಿಗೆ ಕಾಣುವ ದೇವರು ಅಪ್ಪ”…..

ಅಪ್ಪ ಇಂದು ನೀನು ಹುಟ್ಟಿದ ದಿನತಿಳಿಸುವೆ ನಿನಗೆ ನನ್ನ ಕೋಟಿ ನಮನಕಾರಣ ನೀನು ನನಗೆ ದೇವರ ಸಮಾನಹುಟ್ಟು ಹಬ್ಬದ ಶುಭಾಶಯಗಳು ಅಪ್ಪ
ಮಕ್ಕಳ ಓದು ಬರಹಕ್ಕೆ ಮಹತ್ವ ನೀಡಿದವರುಸಂಸ್ಕಾರದ ದಾರಿ ತೋರಿಸಿದವರುಸೋಲಿನಲ್ಲಿ ಧೈರ್ಯ ತುಂಬಿದವರುಅಪ್ಪ ಕಣ್ಣಿಗೆ ಕಾಣುವ ದೇವರು
ಬದುಕಿನ ಉದ್ದಕ್ಕೂ ಭರವಸೆಯ ಬೆಳಕು ಅಪ್ಪ
ಜೊತೆಯಲ್ಲಿದ್ದರೆ ಹೇಳತೀರದ ಭದ್ರತೆಯ ಭಾವ ಅಪ್ಪ
ಅಮ್ಮ ಕಣ್ಣಾದರೆ ಕಣ್ಣನ್ನು ರಕ್ಷಿಸುವ ರೆಪ್ಪೆ ಅಪ್ಪ
ಎಲ್ಲವನ್ನು ಎದುರಿಸಿ ಮತ್ತೆ ನಿಲ್ಲಬಲ್ಲ ಪರ್ವತ ಅಪ್ಪ
ಎತ್ತಿ ಆಡಿಸಿ ಮುತ್ತು ಕೊಟ್ಟು ಸಾಕಿದೆ ನೀನು ಅಪ್ಪ
ಬದುಕೆಂಬ ಪಯಣದಲ್ಲಿ ದಾರಿ ದೀಪವಾದೆ ನೀನು ಅಪ್ಪ
ಪರಿವಾರದ ದೋಣಿಯನ್ನು ಸಾಗಿಸುವ ನಾವಿಕ ನೀನು ಅಪ್ಪ
ಜನ್ಮ ಜನ್ಮoತರಾ ಋಣ ತೀರಿಸಲಾಗದ ಭಗವಂತ ಅಪ್ಪ
ನನ್ನ ಬದುಕಿನ ಭರವಸೆಯ ದಿಕ್ಸೂಚಿ ಅಪ್ಪ
ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿದಾತ ಅಪ್ಪ
ಬದುಕೆಂದರೆ ಧೈರ್ಯ ಎಂದು ಅರ್ಥ ಮಾಡಿಸಿದ್ದು ಅಪ್ಪ
ಜಗತ್ತಿನಲ್ಲಿ ಎಂದೂ ಬದಲಾಗದ ವ್ಯಕ್ತಿತ್ವ ಅಪ್ಪ
ಇಂತಿ ನಿಮ್ಮ ಮಗಳು ಜ್ಯೋತಿ ✍️