ಕ್ರಿಸ್ತನ ಸಭೆ ಸೇವೆಗಳ ಟ್ರಸ್ಟ್ (ರಿ) ಎರಡನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ – ಸಸಿಗಳ ವಿತರಣೆ ಹಾಗೂ ಸೇವಕರಿಗೆ ದವಸ ಧಾನ್ಯಗಳ ವಿತರಣಾ ಕಾರ್ಯಕ್ರಮ ಜರುಗಿತು.
ಉಮ್ಮಳಿ ಹೊಸೂರ್ ಜು.26

ಉಮಳಿ ಹೊಸೂರು ಕ್ರಿಸ್ತನ ಸಭೆ ಕೂಡುವ ಭವನದ ಎರಡನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸಸಿಗಳ ವಿತರಣೆ ಹಾಗೂ ಸೇವಕರಿಗೆ ದವಸ ಧಾನ್ಯಗಳ ವಿತರಣೆ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ರಿಸ್ತನ ಸಭೆಗಳು ಮತ್ತು ಸೇವೆಗಳ ಟ್ರಸ್ಟ್ (ರಿ) ಅಧ್ಯಕ್ಷರಾದ ದೇವರಾಜ್ ಅವರು ಮಾತನಾಡಿ ಮನುಷ್ಯರಿಗೆ ಬದುಕುವುದಕ್ಕೆ ಗಾಳಿ ಅತಿ ಪ್ರಾಮುಖ್ಯ ಗಾಳಿ ಇಲ್ಲದೆ ಮನುಷ್ಯನ ಬದುಕು ಇಲ್ಲಾ ಆ ಗಾಳಿ ಬೇಕಾದರೆ ಮರಗಳು ಬೇಕು ಆದರೆ ಈ ದಿನಗಳಲ್ಲಿ ಮನುಷ್ಯರು ಸ್ವಾರ್ಥಕ್ಕಾಗಿ ಮರಗಳನ್ನ ನಾಶ ಮಾಡುತ್ತ ಇದ್ದಾರೆ ಈ ರೀತಿಯಲ್ಲಿ ಮರಗಳನ್ನು ನಾಶ ಮಾಡಿದರೆ ನಾವು ನಾಶ ತಂದುಕೊಂಡ ಹಾಗೆ ಎಂದು ಸತ್ಯವೇದ ನಮಗೆ ತಿಳಿಸುತ್ತದೆ.

ಧರ್ಮೋಪದೇಶಕಾಂಡ 20:19: “ನೀನು ಒಂದು ಪಟ್ಟಣಕ್ಕೆ ವಿರೋಧವಾಗಿ ಯುದ್ಧ ಮಾಡಿ ಅದನ್ನು ಹಿಡಿಯುವ ಹಾಗೆ ಬಹಳ ದಿವಸ ಮುತ್ತಿಗೆ ಹಾಕಿದರೆ ಮರಗಳನ್ನು ಕೊಡಲಿ ತಾಗಿಸಿ ಕೆಡಿಸ ಬೇಡ. ಯಾಕೆಂದರೆ ಅವುಗಳ ಹಣ್ಣನ್ನು ನೀನು ತಿನ್ನಬಹುದು. ಅವುಗಳನ್ನು ಮುತ್ತಿಗೆಯಲ್ಲಿ ನಿನಗೆ ಸಹಾಯವಾಗುವುದು ಕ್ಕೋಸ್ಕರ ಕಡಿದು ಹಾಕಬಾರದು. ಹೊಲದ ಮರಗಳು ಮನುಷ್ಯರ ಜೀವಕ್ಕಾಗಿವೆ.”ಪ್ರಸಂಗಿ 10:9: “ಮರವನ್ನು ಕಡಿಯುವವನಿಗೆ ಅಪಾಯವಿದೆ ಎಂದು ಹೇಳುತ್ತದೆ ಅದಕ್ಕಾಗಿ ನಾವು ಮರವನ್ನು ನೆಟ್ಟು ಕಾಡು ಬೆಳೆಸಿ ನಾಡನ್ನ ಉಳಿಸೋಣ ಇವತ್ತಿನ ದಿನದಲ್ಲಿ ನಮ್ಮ ರಾಯಚೂರು ಭಾಗದಲ್ಲಿ ಮಳೆಯ ಅಭಾವ ಇದೆ ಅದಕ್ಕೆ ಕಾರಣ ಮರಗಳು ಕಡಿಮೆ ಇವೆ ಯಾರು ಕೂಡ ಬೆಳೆಸುತ್ತಾ ಇಲ್ಲ ಅದರ ಬದಲಾಗಿ ಹಿರಿಯರು ಬೆಳೆಸಿದ ಮರಗಳನ್ನು ಕಡಿಯುತ್ತಾ ನಾಶದ ಅಂಚಿನಲ್ಲಿದ್ದೇವೆ ಅದಕ್ಕೆ ನಾವು ದೇವರು ಕೊಟ್ಟಂತಹ ಈ ಒಂದು ಸುಂದರವಾದ ಪರಿಸರವನ್ನ ಕಾಪಾಡುತ್ತ ಹಸಿರು ಉಸಿರು ಎಂಬುದಾಗಿ ನಾನ್ನುಡಿ ಇದೆ ಅದಕ್ಕಾಗಿ ನಮ್ಮ ನಾಡನ್ನು ಅಚ್ಚು ಅಸರಾಗಿಸೋಣ.

ಎಲ್ಲರೂ ಕೂಡ ಸಸಿಗಳನ್ನು ನೆಟ್ಟು ಕಾಡನ್ನ ಬೆಳೆಸುವ ಕಾರ್ಯದಲ್ಲಿ ತೊಡಗೋಣ ಎಂಬುದಾಗಿ ಮನವರಿಕೆ ಮಾಡುತ್ತಾ ಎಲ್ಲರಿಗೂ ಕೂಡ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿ ನಾವು ಮುಂದೆ ಸಾಗೋಣ ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊರತೆಯಿಂದ ಎಷ್ಟೋ ಜನರು ನಮ್ಮ ಕಣ್ಣಮುಂದೆ ಪ್ರಾಣ ಬಿಟ್ಟಿದ್ದಾರೆ ಅದಕ್ಕಾಗಿ ನಮ್ಮ ಪ್ರಾಣ ಉಳಿಯ ಬೇಕಾದರೆ ನಮಗೆ ಗಾಳಿ ಬೇಕೆಂದರೆ ಪ್ರತಿಯೊಬ್ಬರೂ ಮರವನ್ನ ಬೆಳೆಸಬೇಕು ಎಂಬುದಾಗಿ ತಿಳಿಸಿದರು. ಈ ಒಂದು ಅದ್ಭುತವಾದಂತಹ ಈ ಕಾರ್ಯಕ್ರಮದಲ್ಲಿ K.S.P.M ಡೈರೆಕ್ಟರ್ ನವೀನ್ ರೇ ಬೆಂಗಳೂರು ಜ್ಞಾನ ನಂದನ್ ಸುವಾರ್ತಿಕರು ಸಂಡೂರು ಪ್ರಕಾಶ್ ಕೊಪ್ಪಳ ಚಂದ್ರಯ್ಯ ಸ್ವಾಮಿ ಹಿರೇಮಠ ವಿಜಯ್ ಕುಮಾರ್ ಮಾನ್ವಿ ಪೀಟರ್ ಕುಡಿತಿನಿ ಕುಮಾರ ದೇವಣ್ಣ ಸರ್ವ ಧರ್ಮ ಸಮಾಜ ಸೇವಕ ಹನುಮಂತ ಕೋಟೆ ಹಾಗೂ ಇತರರು ಭಾಗಿಯಾಗಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ