“ಭಾರತದ ಐತಿಹಾಸಿಕವುಕಾರ್ಗಿಲ್ ವಿಜಯ ದಿವಸ”…..

ಭಾರತ ರಕ್ಹಣಾ ಪಡೆಯ ವೀರ ಸೇನಾನಿಗಳ
ಹೋರಾಟವು ವಿಜಯವ ತಂದಿತು
ಕಾರ್ಗಿಲ್ ಯುದ್ಧಲಿ ವಿಜಯ ಕಹಳೆ
ಊದಿದರು ಶತ್ರುವಿರುದ್ಧ ಸಮರ
ಸಾರ್ಥಕವಾಯಿತು
“ಪರ್ವತ ಶಿಖರ”ನಮ್ಮದಾಗಿಸಿದ ಐತಿಹಾಸಿಕತೆ
ಕಾರ್ಗಿಲ್ ವಿಜಯ ದಿನವು
ಪಾಕಿಸ್ತಾನ ವಿರುದ್ಧ ಭಾರತದ ಗೆಲವು
ಸಂಭ್ರಮವು
ಭಾರತಾಂಬೆ ವರ ಪುತ್ರರು ಶೌರ್ಯ
ಪರಾಕ್ರಮದಿ
ಶತ್ರು ರಾಷ್ಟ್ರ ಸೋಲಿಸಿ ವಿಜಯವ ತಂದಿತ್ತರು
ಭಾರತ ಮಿಲಟರಿ ರಾಷ್ಟ್ರದ ಹೆಮ್ಮೆ
ಸ್ಯೆನಿಕರು ಪ್ರಾಣ ತ್ಯಾಗ ಮಾಡಿದರು
ಭಾರತ ಅಮರ ಜವಾನ ಜ್ಯೋತಿ ರಾಷ್ಟ್ರ
ಸಾರ್ವಭೌಮತ್ವ ವಿಶ್ವದೆಲ್ಲೆಡೆ ಸಾರಿದರು
ನಮ್ಮ ವೀರಯೋಧರು ನಮ್ಮೆಲ್ಲರ ಹೆಮ್ಮೆ
ಭಾರತ ವರ ಪುತ್ರರು ಅಮರರು
ಕದನ ಶೂರರ ಸದಾ ಸ್ಮರಿಸೋಣ
ಗೌರವಿಸೋಣ
ನಿತ್ಯ ನಿರಂತರ ನೆನೆಯುತ ಬಾಳೋಣ
ಭಾರತಾಂಬೆಯ ವಿಜಯ ಸಂಕೇತವು
ಕಾರ್ಗಿಲ್ ವಿಜಯವು ಮರೆಯದ ದಿನವು
ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರಿಗೆ
ಗೌರವದಿ ನಮಿಸಿ ಜ್ಯೋತಿ ಬೆಳಗೋಣ
ದೇಶ ವಾಸಿಗರು ಧೈರ್ಯ ಶೌರ್ಯದಿ ಘರ್ಜಿಸಿ
“ಜೈಜವಾನ ಜೈಕಿಸಾನ್” ಜೈಹಿಂದ್ ವಂದೇ
ಮಾತರಂ..
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ