ಪಿ.ಎಸ್ ಸಜ್ಜನ ಕಾಲೇಜು ವಿದ್ಯಾರ್ಥಿಗಳು – ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ.

ಬೇವೂರ ಜ.01

ಜ್ಯೋತಿಬಾ.ಜಾಂಬ್ರೆ.ಬೇವೂರ

ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಬಾಗಲಕೋಟ ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆ ಯಾಗಿದ್ದಾರೆ. ಇತ್ತೀಚಿಗೆ ಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಜರುಗಿದ ಪುರುಷರ ಕುಸ್ತಿ ಸ್ಪರ್ಧೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿ ಕುಮಾರ ಜ್ಯೋತಿಬಾ ಜಾಂಬ್ರೆ ಭಾಗವಹಿಸಿ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ ಯಾಗಿದ್ದಾನೆ. ದಿನಾಂಕ ೫-೧-೨೦೨೬ ರಿಂದ ಛಂಡಿಗಡ ವಿಶ್ವವಿದ್ಯಾಲಯದಲ್ಲಿ ಜರುಗುವ ಕುಸ್ತಿ ಸ್ಫರ್ಧೆಯಲ್ಲಿ ಭಾಗವಹಿಸುತ್ತಿದ್ದಾನೆ.

ಸಿದ್ದಪ್ಪ.ಗೊಲ್ಲರ.ಬೇವೂರು

ಅದೇ ರೀತಿ ಪುರುಷರ ಹಾಕಿ ಸ್ಪರ್ಧೆಯಲ್ಲಿ ಕುಮಾರ ಸಿದ್ದಪ್ಪ ಗೊಲ್ಲರ ಭಾಗವಹಿಸಿ ಈತನೂ ಯೂನಿವರ್ಸಿಟಿ ಬ್ಲೂ ಆಗಿ ಆಯ್ಕೆ ಯಾಗಿದ್ದಾನೆ.೧೩-೧-೨೬ ರಿಂದ ಸತ್ಯಭಾಮಾ ವಿಶ್ವವಿದ್ಯಾಲಯ ಚನ್ನೈನಲ್ಲಿ ಜರುಗುವ ಹಾಕಿ ಸ್ಪರ್ಧೆಯಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯದ ತಂಡ ದಿಂದ ಆಟವಾಡಲಿದ್ದಾನೆ. ಇರ್ವರೂ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಜಿ. ಮಾಗನೂರ ವಕೀಲರು ಸರ್ವ ಸದಸ್ಯರು ಹಾಗೂ ಪ್ರಾಚಾರ್ಯರಾದ ಡಾ, ಜ.ಗು ಭೈರಮಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಶುಭ ಹಾರೈಸಿ ಅಭಿನಂಧನೆ ಸಲ್ಲಿಸಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button