ಗ್ರಾಮ ಪಂಚಾಯತ್‌ನಲ್ಲಿ ಲಕ್ಷ ಗಟ್ಟಲೆ – ಸಾರ್ವಜನಿಕ ಹಣ ಗೋಲ್ ಮಾಲ್.
ಹೊಂಬಾಡಿ ಮಂಡಾಡಿ ಜು.31

ನಿಯಮ ಬಾಹಿರವಾಗಿ ಪಿ.ಡಿ.ಓ ಹುದ್ದೆಯ ಪ್ರಭಾರ ಹಂಚಿಕೆ!!! ತಕ್ಷಣ ಉನ್ನತ ಮಟ್ಟದ ತನಿಖೆಗೆ ಆಗ್ರಹ!ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ನಲ್ಲಿ ನಡೆದಿರುವ ಗೋಲ್ ಮಾಲ್ ಮತ್ತು ಸಾರ್ವಜನಿಕ ಹಣದ ದುರುಪಯೋಗ ಪ್ರಕರಣಗಳು ಇದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಸರ್ಕಾರದ ಸುತ್ತೋಲೆ ಉಲ್ಲಂಘಿಸಿ ಅಕ್ರಮ ನೇಮಕಾತಿ ಅಕ್ರಮವಾಗಿ ಪಿ.ಡಿ.ಓ ಹುದ್ದೆಗೆ ಪ್ರಭಾರ ಆದೇಶ ಮಾಡಿ₹3 ಲಕ್ಷಕ್ಕೂ ಅಧಿಕ ಪ್ರಭಾರ ಭತ್ಯೆ ಹಣ ದುರುಪಯೋಗ!ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್‌ನ ಗ್ರೇಡ್-2 ಕಾರ್ಯದರ್ಶಿ ಚಂದ್ರಕಾಂತ ಬಿಲ್ಲವ ಅವರನ್ನು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಹಣದ ಆಮಿಷಕ್ಕೆ ಒಳಗಾಗಿ ದುರುದ್ದೇಶದಿಂದ ಮತ್ತು ಸರ್ಕಾರದ ಆದೇಶಗಳಿಗೆ ವಿರುದ್ಧವಾಗಿ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ.ಸರ್ಕಾರಿ ಸುತ್ತೋಲೆಗಳ ಪ್ರಕಾರ, ಗ್ರೇಡ್-2 ಕಾರ್ಯದರ್ಶಿಗೆ ಪಿ.ಡಿ.ಓ ಪ್ರಭಾರ ಹುದ್ದೆ ನೀಡಲು ಯಾವುದೇ ಅವಕಾಶವಿಲ್ಲ. ಆದರೆ ಜಿಲ್ಲೆಯಲ್ಲಿ ಅರ್ಹ ಗ್ರೇಡ್-1 ಕಾರ್ಯದರ್ಶಿಗಳು ಹಲವರಿದ್ದರೂ ಅವರನ್ನು ಕಡೆಗಣಿಸಿ ನಿಯಮ ಬಾಹಿರವಾಗಿ ಗ್ರೇಡ್-2 ಕಾರ್ಯದರ್ಶಿ ಚಂದ್ರಕಾಂತ ಬಿಲ್ಲವ ಅವರಿಗೆ ಪಿ.ಡಿ.ಓ ಪ್ರಭಾರ ನೀಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.ಈ ಅಕ್ರಮ ನೇಮಕಾತಿಯ ಮೂಲಕ ಅವರಿಗೆ ನಿಯಮ ಬಾಹಿರವಾಗಿ ಸುಮಾರು ₹3,00,000/- ಮೂರು ಲಕ್ಷ ರೂಪಾಯಿ ಕ್ಕಿಂತ ಅಧಿಕ ಪ್ರಮಾಣದ ಪ್ರಭಾರ ಭತ್ಯೆಯನ್ನು ಮಂಜೂರು ಮಾಡಲಾಗಿದೆ. ಇದು ಸಾರ್ವಜನಿಕರ ತೆರಿಗೆ ಹಣದ ಸಂಪೂರ್ಣ ದುರುಪಯೋಗವಾಗಿದೆ.ಕಾನೂನು ಬಾಹಿರವಾಗಿ ಪಾವತಿ ಮಾಡಲಾಗಿರುವ ಈ ಹಣವನ್ನು ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಾತಿ ಮಾಡಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಒತ್ತಾಯಿಸಿವೆ.ಆಡಿಟ್ ವರದಿಯಲ್ಲಿ ಬಯಲಾದ ₹15.66 ಲಕ್ಷ ಗೋಲ್ ಮಾಲ್. 2022-23 ನೇ. ಸಾಲಿನ ಆಡಿಟ್ ವರದಿಯಲ್ಲಿ ಚಂದ್ರಕಾಂತ ಬಿಲ್ಲವ ಅವರ ವಿರುದ್ಧ ನಡೆದಿರುವ ಅಕ್ರಮಗಳು ಕಣ್ಣು ಕುಕ್ಕುವಂತಿವೆ. ವರದಿಯ ಪ್ರಕಾರ ಅವರು ₹2,34,035/- (ಎರಡು ಲಕ್ಷ ಮೂವತ್ನಾಲ್ಕು ಸಾವಿರ ಮೂವತ್ತೈದು ರೂಪಾಯಿ) ಮೊತ್ತವನ್ನು ತಮ್ಮ ಸ್ವಂತ ಚೆಕ್ ಮೂಲಕ ಡ್ರಾ ಮಾಡಿ ನಗದನ್ನು ತಮ್ಮ ಕೈಯಲ್ಲಿ ಇರಿಸಿ ಕೊಂಡಿದ್ದಾರೆ. ಇದು ಸರ್ಕಾರದ ಹಣಕಾಸು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಮೊತ್ತವನ್ನು ಸೇರಿ ಒಟ್ಟಾರೆಯಾಗಿ ₹15,66,313/- ಹದಿನೈದು ಲಕ್ಷ ಅರವತ್ತಾರು ಸಾವಿರದ ಮುನ್ನೂರ ಹದಿಮೂರು ರೂಪಾಯಿಗಳ ಅಗಾಧ ಮೊತ್ತದ ಸಾರ್ವಜನಿಕರ ಹಣ ದುರುಪಯೋಗ ವಾಗಿರುವುದು ಆಡಿಟ್ ವರದಿಯಿಂದ ಸ್ಪಷ್ಟವಾಗಿ ದೃಢಪಟ್ಟಿದೆ. ಇಷ್ಟೊಂದು ದೊಡ್ಡ ಮೊತ್ತದ ಸಾರ್ವಜನಿಕ ಹಣ ದುರುಪಯೋಗ ವಾಗಿರುವುದರಿಂದ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.ಹಣ ದುರುಪಯೋಗಕ್ಕೆ ಕಾರಣರಾದ ಚಂದ್ರಕಾಂತ ಬಿಲ್ಲವ ಇವರನ್ನು ಅಮಾನತ್ತು ಗೊಳಿಸಿ ಮತ್ತು ಅವರಿಗೆ ಸಹಕರಿಸಿದ ಎಲ್ಲಾ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಸ್ಥಳೀಯ ಸಂಘಟನೆಗಳು ಹಾಗೂ ಸಾಮಾಜಿಕ ಕಾರ್ಯಕರ್ತರು ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ. ಉಗ್ರ ಹೋರಾಟಕ್ಕೆ ಎಚ್ಚರಿಕೆ! ಈ ಪ್ರಕರಣವು ಕೇವಲ ಒಂದು ಗ್ರಾಮ ಪಂಚಾಯತ್ ಮಟ್ಟದ ಭ್ರಷ್ಟಾಚಾರವಲ್ಲ, ಬದಲಾಗಿ ಅಧಿಕಾರಿಗಳ ನಿರ್ಲಕ್ಷ್ಯ ಬೇಜವಾಬ್ದಾರಿತನ ಮತ್ತು ಅಕ್ರಮಕ್ಕೆ ಕುಮ್ಮಕ್ಕು ನೀಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸದಿದ್ದಲ್ಲಿ, ಹೊಂಬಾಡಿ ಬಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರು ಮತ್ತು ವಿವಿಧ ಸಂಘಟನೆಗಳು ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವ ಮೂಲಕ ಉಗ್ರ ಹೋರಾಟ ನಡೆಸಲಿವೆ ಎಂದು ಈ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅರ್ಹತೆ ಇಲ್ಲದ ಗ್ರೇಡ್-2 ಕಾರ್ಯದರ್ಶಿಗೆ ಪಿ.ಡಿ.ಓ ಪ್ರಭಾರ ನೀಡಿರುವ ಹಿಂದಿನ ದುರುದ್ದೇಶವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸ ಬೇಕಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಆರತಿ.ಗಿಳಿಯಾರು.ಉಡುಪಿ