ವೇಮನ ಮೂರ್ತಿ ಪ್ರಾಣ ಪ್ರತಿಷ್ಠಾಪನ ಮಾಡಿದ – ಡಾ, ಚೆನ್ನಬಸವ ಶಿವಾಚಾರ್ಯರು.
ಇಲಕಲ್ಲ ಜು.04

ಇಲ್ಲಿನ ಎ.ಪಿ.ಎಂ.ಸಿ ಸಮೀಪದ ಪಂಚಲಿಂಗೇಶ್ವರ ಗುಡಿಯ ಆವರಣದ ಮಲ್ಲಮ್ಮನ ದೇವಸ್ಥಾನದಲ್ಲಿ ಮಹಾಯೋಗಿ ವೇಮನ ಮೂರ್ತಿಯನ್ನು ನಂದವಾಡಗಿಯ ಡಾ, ಚನ್ನಬಸವ ಶಿವಾಚಾರ್ಯರು ಪ್ರಾಣ ಪ್ರತಿಷ್ಠಾನ ಮಾಡಿದರು.

ಪ್ರತಿಷ್ಠಾಪನದ ನಂತರ ಭಕ್ತರ ಕುರಿತು ಆಶೀರ್ವಚನ ನೀಡಿದ ಪೂಜ್ಯರು ಮಹಾ ಯೋಗಿ ವೇಮನ ಒಬ್ಬ ಸಾಮಾನ್ಯ ಮನುಷ್ಯನಾಗಿ ವ್ಯಸನಿ ಆಗಿದ್ದನು ಸಂದರ್ಭಾನು ಸಾರವಾಗಿ ಮಹಾಮಾತೆ ಮಲ್ಲಮ್ಮನ ತತ್ವಾದರ್ಶಗಳನ್ನು ಪಾಲನೆ ಮಾಡಿ ಒಬ್ಬ ಮಹಾ ವ್ಯಸನಿ ಮಹಾಯೋಗಿ ಯಾಗಿ ಪರಿವರ್ತನೆ ಮಾಡಿದ್ದರ ಫಲವಾಗಿ ಸಾಕಷ್ಟು ವಚನಗಳನ್ನು ಬರೆಯುವುದರ ಮೂಲಕ ಸಮಾಜ ಪರಿವರ್ತನೆ ಮಾಡುವ ಕೆಲಸವನ್ನು ಮಹಾಯೋಗಿ ವೇಮನ ಮಾಡಿದ್ದನು ಅಂತಹ ಮಹಾ ಯೋಗಿಯ ಮೂರ್ತಿಯ ಪ್ರತಿಷ್ಠಾಪನೆ ಮಾಡುವುದರ ಮೂಲಕ ಇಲಕಲ್ಲಿನ ಶ್ರೀ ಪಂಚಲಿಂಗೇಶ್ವರ ಹಾಗೂ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿಯವರು ಪುಣ್ಯ ಕಟ್ಟಿ ಕೊಂಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಮಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

