ಆದರ್ಶಗಳ ಕಥಾನಕ ಶ್ರೀಮದ್ ರಾಮಾಯಣ – ಪೂಜ್ಯ ವೈ.ರಾಜಾರಾಮ್ ಗುರುಗಳು.
ಚಳ್ಳಕೆರೆ ನ.11

ಮಹರ್ಷಿ ವಾಲ್ಮೀಕಿ ವಿರಚಿತ ಶ್ರೀಮದ್ ರಾಮಾಯಣ ಮಹಾಕಾವ್ಯವು ಆದರ್ಶಗಳ ಕಥಾನಕವಾಗಿದೆ ಎಂದು ಚಳ್ಳಕೆರೆಯ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮಪೂಜ್ಯ ವೈ ರಾಜಾರಾಮ್ ಗುರುಗಳು ತಿಳಿಸಿದರು.
ಗಾಂಧಿ ನಗರದ ಸದ್ಭಕ್ತರಾದ ಶ್ರೀಮತಿ ಅನುರಾಧ ಅವರ ನಿವಾಸದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮದ್ ರಾಮಾಯಣ ಮಹಾಕಾವ್ಯ”ದ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀನರಹರಿ ಮಹಿಳಾ ಸಂಘದ ಸದಸ್ಯರಿಂದ ಭಜನೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಅನುರಾಧ, ಸರಸ್ವತಿ ಗೋವಿಂದರಾಜು, ಗೀತಾ ಭಕ್ತವತ್ಸಲ, ಸರಸ್ವತಿ ಮಾಕಂ ಶ್ರೀನಿವಾಸಲು, ಸರಸ್ವತಿ ಪಾಂಡುರಂಗಶೆಟ್ಟಿ, ಪ್ರೇಮಲೀಲಾ, ಶಕುಂತಲಾ, ಎಸ್.ಉಮಾ, ಕೃಷ್ಣಮೂರ್ತಿ, ಸುಶೀಲಮ್ಮ ಅಯ್ಯಪ್ಪ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

