ಬಸವಾದಿ ಶರಣರಿಂದ ಜಗಜ್ಯೋತಿ ಬಸವೇಶ್ವರರ – ಭಾವ ಚಿತ್ರ ಮೆರವಣಿಗೆ.
ತಾವರಖೇಡ ಆ.23




ಆಲಮೇಲ ತಾಲೂಕಿನ ಹೊಸ ತಾವರೆಖೇಡ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಬಸ್ವಾದಿ ಶರಣರಿಂದ ವಿವಿಧ ರೀತಿಯಿಂದ ಭಕ್ತಿ ಸೇವೆ. ಹೊಸ ತಾವರೆಖೇಡ ಗ್ರಾಮದ ಬಸವ ದಳದ 16 ಜನ ಬಸವ ಶರಣರಿಂದ ಶ್ರಾವಣ ಮಾಸದ ಮೊದಲನೆಯ ದಿನ ದಿಂದ ಶ್ರಾವಣ ಮಾಸದ ಕೊನೆಯ ದಿನದ ವರೆಗೆ 30 ದಿನಗಳ ಕಾಲ ಮಡಿಯಿಂದ ಬಿಳಿ ಬಟ್ಟೆ ಧರಿಸಿ ಶಿವ ಶರಣರ ತತ್ವಗಳನ್ನು ಶಿವ ನಾಮಸ್ಕಾರಣೆಯನ್ನು ಭಕ್ತಿ ಯಿಂದ ಮಾಡುತ್ತಾ ಪ್ರತಿ ದಿನ ಭಜನೆ ಪ್ರಾರ್ಥನೆ ಯೊಂದಿಗೆ ಸೇವೆ ಮಾಡಿ 30 ದಿನಗಳ ಬಳಿಕ ಹೊಸ ತಾವರಖೇಡ ಗ್ರಾಮದ ಲಕ್ಷ್ಮಿ ದೇವಸ್ಥಾನ ದಿಂದ ಲಕ್ಷ್ಮಿ ದೇವಿಯ ಮೂರ್ತಿ ಮತ್ತು ಗ್ರಾಮ ದೇವರಾದ ಶ್ರೀ ಹಿರಗಲಿಂಗೇಶ್ವರ ಪಲ್ಲಕ್ಕಿ ಹಾಗೂ ಜಗಜ್ಯೋತಿ ಬಸವೇಶ್ವರರ ಎಡೆ ಪೂಜಿಯೊಂದಿಗೆ ಭಾವ ಚಿತ್ರ ಮೆರವಣಿಗೆ ಮಾಡುತ್ತಾ ಗ್ರಾಮದ ಹನುಮಾನ ಮಂದಿರಕ್ಕೆ ಪೂಜೆ ಸಲ್ಲಿಸಿ, ಹಾದಿ ಬಸವಣ್ಣನ ಗದ್ದಿಗೆಯ ವರೆಗೆ ಸುಮಂಗಲಿಯರು ಕುಂಬ ಹೊತ್ತು ಆರುತಿ ಹಿಡಿದು ಸಕಲ ವಾದ್ಯ ವೃಂದದೊಂದಿಗೆ ಭಜನೆ ಮಾಡುತ್ತಾ ವೈಭವ ದಿಂದ ಮೆರವಣಿಗೆ ಮಾಡುತ್ತಾ ಹಾದಿ ಬಸವಣ್ಣನ ಗದ್ದುಗೆ ಅಭಿಷೇಕ ಕಾಯಿ ಕರುಪುರ ಹೋಮಾಲೆ ಹಾಕಿ ನೈವೈದ್ಯೆ ಮಾಡಿ ಭಕ್ತಿಯಿಂದ ಸಕಲ ಹೊಸ ತಾವರಖೇಡ ಗ್ರಾಮದ ಸರ್ವ ಜನಾಂಗದ ಭಕ್ತರು ಮತ್ತು ಶ್ರೀ ಹಿರಗಲಿಂಗೇಶ್ವರ ಭಕ್ತಾದಿಗಳು ಹಾಗೂ ಜಗಜ್ಯೋತಿ ಬಸವೇಶ್ವರರ ಭಕ್ತರು ಅದ್ದೂರಿಯಿಂದ ಶ್ರಾವಣ ಮಾಸ ಕೊನೆಯ ದಿನ ಪೂಜೆ ಸಲ್ಲಿಸಿ ಬಸವಾದಿ ಶರಣರು ಅನ್ನ ಪ್ರಸಾದ ಮಾಡಿ ಇಂದು ರಾತ್ರಿ ಭಜನೆ ಮಾಡುತ್ತಾ ಜಾಗರಣೆ ಮಾಡಿ ಶ್ರಾವಣ ಮಾಸಕ್ಕೆ ಮಂಗಲ ಕೋರುವರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

