ವೀರಶೈವ ಉಪ ಪಂಗಡಗಳು ಒಗ್ಗಟ್ಟಿನ ಮಂತ್ರ ಕುರಿತು ಸೂಚಿಸಿದ – ಕುಮಾರೇಶ್ವರ ಮಹಾ ಸ್ವಾಮಿಜಿಗಳು.

ಕೂಡ್ಲಿಗಿ ಆ.05

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಾಪೂಜಿ ನಗರದ 2 ನೇ. ವಾರ್ಡನಲ್ಲಿರುವ ಪಪ್ಪಿ ಎನ್‌ಕ್ಲೇವ್ ನಿವೇಶನದಲ್ಲಿ ಸಸಿ ನಡೆಯುವ ಮೂಲಕ ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕಾಧ್ಯಕ್ಷರು ಜಿ. ಸುನೀಲ್‌ಗೌಡ್ರು ಮಾತನಾಡಿದರು. ವೀರಶೈವ ಸಮುದಾಯ ಬೃಹತ್ ಆಲದಮರದಂತೆ.ವೀರಶೈವ ಉಪ ಪಂಗಡಗಳು ಒಗ್ಗಟ್ಟಿಗೆ ಶ್ರಮಿಸ ಬೇಕಾಗಿದೆ, ಪರಮ ಪೂಜ್ಯ ಹಾನಗಲ್ಲು ಕುಮಾರೇಶ್ವರ ಮಹಾ ಸ್ವಾಮಿಗಳು ವೀರಶೈವ ಸಮುದಾಯದ ಒಗ್ಗಟ್ಟಿಗಾಗಿ ಶ್ರಮಿಸಿದರು. ಉಪ ಪಂಗಡಗಳು ಮೂಲ ವೀರಶೈವ ಸಮುದಾಯವನ್ನು ಮರೆತಿದ್ದಾರೆ. ರಾಜಕೀಯ ದುರುದ್ಧೇಶಗಳಿಂದ ಇಂದು ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾಗುತ್ತಿರುವುದು ನುಂಗಲಾರದ ತುತ್ತಾಗಿದೆ ಎಂದರು. ಪಂಚಾಚಾರ್ಯರು ಶೃಂಗ ಸಭೆಯನ್ನು ನಡೆಸುವ ಮೂಲಕ ವೀರಶೈವ ಸಂಘಟನೆಯನ್ನು ಪುನಶ್ಚೇತನ ಗೊಳಿಸುವುದರ ಮೂಲಕ ಇತ್ತೀಚಿನ ಬೆಳವಣಿಗೆಯೂ ಕೂಡಾ ಸಹಕಾರಿ ಯಾಗಿದೆ. ಪಟ್ಟಣದಲ್ಲಿ ವೀರಶೈವರು ಅಧಿಕ ಸಂಖ್ಯೆಯಲ್ಲಿದ್ದರೂ, ಇದೂವರೆಗೂ ಒಂದು ಸಮುದಾಯ ಭವನ ನಿರ್ಮಾಣ ಮಾಡಲು ಸಾಧ್ಯವಾಗಿರಲಿಲ್ಲ. ಕುಮಾರೇಶ್ವರ ಕೃಪೆಯಿಂದ ಇಂದು ತಾಲೂಕಿನ ಎಲ್ಲಾ ವೀರಶೈವ ಲಿಂಗಾಯತ ಮುಖಂಡರು ಒಗ್ಗಟ್ಟಾಗಿ ಸಹಾಯಧನವನ್ನು ನೀಡುವುದರ ಮೂಲಕ ಪಪ್ಪಿ ಎನ್‌ಕ್ಲೇವ್‌ನಲ್ಲಿ ೬೦#೮೦ರ ಎನ್.ಎ. ಸೈಟ್ ನ್ನು ಜಿಲ್ಲಾಧಿಕಾರಿಗಳು ಆಡಳಿತಾತ್ಮಕ ಮಂಜೂರಾತಿಯನ್ನು ನೀಡಿದ್ದಾರೆ. ಸಧ್ಯದಲ್ಲಿ ನೋಂದಣಿ ಮಾಡಿಸುವ ಮೂಲಕ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದರು. ಇದರಿಂದ ವೀರಶೈವ ಧಾರ್ಮಿಕ ಕಾರ್ಯಗಳು ನಡೆಯಲು ಅನುಕೂಲವಾಗಿದೆ ಎಂದು ತಿಳಿಸಿದರು. ಮಾಜಿ ಜಿ.ಪಂ ಸದಸ್ಯ ಜಿ.ಉಮೇಶ ಮಾತನಾಡಿ, ಉಪ ಪಂಗಡಗಳು ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹೋರಾಟ ಮಾಡಬಹುದು, ಆದರೆ ನಾವು ಎಂದೂ ವೀರಶೈವ ಸಮುದಾಯಕ್ಕೆ ಸೇರಿದವರು ಎಂದರು. ಸೌಲಭ್ಯಗಳನ್ನು ಪಡೆಯಲು ಇನ್ನಿತರ ವೀರಶೈವ ಉಪ ಪಂಗಡಗಳ ಮುಖಂಡರು ಕೂಡಾ ಸಹಕಾರ ನೀಡುವುದರನ್ನು ಸ್ಮರಿಸಿದರು. ವೇದಿಕೆಯಲ್ಲಿ ಅ.ಭಾ.ವೀ.ಲಿಂ. ಮಹಾಸಭಾದ ಗೌರವಾಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಜಿಲ್ಲಾ ಜಂಗಮ ಸಮಾಜದ ಕಾಶೀನಾಥಯ್ಯ, ಎಂ.ಗುರುಸಿದ್ಧನಗೌಡ್ರು, ಜಿ.ಎಸ್ ಗಿರೀಶ್, ನಂದಿ ಬಸವರಾಜ, ಟಿ.ಜಿ. ನಾಗರಾಜಗೌಡ್ರು, ಲಕ್ಷ್ಮಿ ದೇವಿ, ಪಾಲ್ತೂರ್ ಶಿವರಾಜ ಸೇರಿದಂತೆ ಇತರರಿದ್ದರು.

ಜಿಲ್ಲಾ ವರದಿಗಾರರು, ಸಿಹಿಕಹಿ ಕನ್ನಡ ದಿನಪತ್ರಿಕೆ ಹಾಗೂ ಎಸ್ ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button