ವಿಜಯ ಮಹಾಂತೇಶ ಕರ್ತೃ ಗದ್ದಿಗೆಗೆ ಭೇಟಿ ನೀಡಿ ಆಶೀರ್ವಾದ ಪಡೆದ – ಡಾ, ಚನ್ನಬಸವ ಶಿವಾಚಾರ್ಯರು.
ಇಲಕಲ್ಲ ಆ.05

ಇಲ್ಲಿನ ಹೊರ ಹೊರವಲಯದ ಪರಮ ಪೂಜ್ಯ ಲಿಂಗೈಕ ಶ್ರೀ ವಿಜಯ ಮಹಾಂತ ಕರ್ತೃ ಗದ್ದಿಗೆಗೆ ನಂದವಾಡಗಿ ಮಠದ ಪೂಜ್ಯರಾದ ಡಾ, ಚನ್ನಬಸವ ಶಿವಾಚಾರ್ಯರು ಶ್ರಾವಣ ಮಾಸದ ಸೋಮವಾರ ಪ್ರಯುಕ್ತ ಶ್ರೀ ವಿಜಯ ಮಹಾಂತ ಕರ್ತೃ ಗದ್ದಿಗೆ ತೆರಳಿ ಗದ್ದುಗೆ ಆಶೀರ್ವಾದ ಪಡೆದರು ನಂತರ ಕರ್ತೃ ಗದ್ದಿಗೆ ಆಗಮಿಸಿದ ಭಕ್ತರಿಗೆ ಆಶೀರ್ವದಿಸಿ.

ಭಕ್ತರು ಉದ್ದೇಶಿಸಿ ಈ ಭಾಗದಲ್ಲಿ ಚಿತ್ತರಗಿ ಇಳಕಲ್ ಮಠದ ಶ್ರೀ ವಿಜಯ ಮಾಹಾಂತರು ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯ ಶ್ರೀಗಳು ಸಮಕಾಲಿನರು ಎರಡು ಮಠಗಳು ಜಾತಿ ಭೇದ ಭಾವ ಮಾಡದೆ ಸರ್ವ ಜನಾಂಗದವರಿಗೆ ಧಾರ್ಮಿಕ ಬೋಧನೆ ನೀಡಿ ಎಲ್ಲರೂ ದೇವರನ್ನು ಪೂಜಿಸುವುದರ ಮೂಲಕ ಭಕ್ತಿಯನ್ನು ವೃದ್ಧಿಸಿ ಕೊಳ್ಳಬೇಕು ಎಂದು ಹೇಳಿ ಈ ಎರಡು ಮಠಗಳು ಭಕ್ತರನ್ನು ಸೆಳೆಯುತ್ತಾ ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿದ ಕೀರ್ತಿ ಶ್ರೀ ವಿಜಯ ಮಹಾಂತೇಶ್ವರರಿಗೆ ಹಾಗೂ ಶ್ರೀ ಮಹಾಂತ ಶಿವಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.

ಇಂಥಹ ಪುಣ್ಯಾತ್ಮರು ಈ ನಾಡಿನಲ್ಲಿ ಜನಿಸಿದ್ದಕ್ಕಾಗಿ ನಮ್ಮ ರೈತರು ಸಮೃದ್ಧಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.ನಂತರ ಕರ್ತು ಗದ್ದಿಗೆ ಬಂದಿದ್ದ ಅನೇಕ ಭಕ್ತರಿಗೆ ಆಶೀರ್ವಾದ ನೀಡಿದರು.ಹವ್ಯಾಸಿ
ಬರಹಗಾರರು:ಜಗದೀಶ್.ಗಿರಡ್ಡಿ.ಇಲಕಲ್ಲ

