ಗುರುಗಳಿಗೆ ನಮಿಸಿದ ಕರಡಿ ಪ್ರೌಢ ಶಾಲೆಯ – ಹಳೆ ವಿದ್ಯಾರ್ಥಿ ಬಳಗ.

ಇಲಕಲ್ಲ ಆ.05

ತಾಲೂಕಿನ ಕರಡಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಕರಡಿಯಲ್ಲಿ 2003/2004 ಸಾಲಿನ ಹತ್ತನೆಯ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಯಿತು.

ದಿವ್ಯ ಸಾನಿಧ್ಯ ಶ್ರೀ ಮ.ನಿ.ಪ್ರ ಗುರು ಮಹಾಂತ ಸ್ವಾಮಿಗಳು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಲಕಲ್ಲ ಪೂಜ್ಯರು ವಹಿಸಿದ್ದರು ಗುರು ಶಿಷ್ಯರ ಭಾಂದವ್ಯದ ಅನನ್ಯವಾದದ್ದು ಗುರು ಈ ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ನಿಜವಾದ ದೇವರ ಎಂದು ಆರ್ಶಿವಚನ ನೀಡಿ ಮಾತಾನಾಡಿದರು.ಈ ಕಾರ್ಯಕ್ರವನ್ನು ಉದ್ಘಾಟಿಸಿ ಮಾತಾನಾಡಿದ ಶ್ರೀ ಎಸ್.ವಿ ಕಾರ್ಜೋಳ (ನಿವೃತ್ತ ಶಿಕ್ಷಕರ) ಈ ಜಗತ್ತಿನಲ್ಲಿ ಅಮೂಲ್ಯವಾದ ಹುದ್ದೆ ಎಂದರೆ ಅದು ಶಿಕ್ಷಕರ ಹುದ್ದೆ ಅದು ಆ ಬ್ರಹ್ಮನ ಪ್ರತಿರೂಪ ಮಕ್ಕಳಲ್ಲಿ ದೇವರನ್ನು ಕಾಣುತಾ ತನ್ನ ಶಿಷ್ಯರನ್ನ ಒಬ್ಬ ಆದರ್ಶ ವ್ಯಕ್ತಿಯನ್ನಾಗಿ ಮಾಡುವ ಜವಾಬ್ದಾರಿ ಒಬ್ಬ ಶಿಕ್ಷಕರ ಮೇಲಿರುತ್ತದೆ ವಿದ್ಯಾರ್ಥಿಗಳು ತೋರಿಸುವ ಪ್ರೀತಿ, ಗೌರವ, ಅಭಿಮಾನ ನಾವು ಎಂದು ಮರೆಯಲು ಸಾಧ್ಯವಿಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಶ್ರೀ ಆರ್.ಎನ್ ಪೂಜಾರಿ ಮಾತಾನಾಡಿ ಈ ಶಾಲೆಯಲ್ಲಿ ಕಲಿಸುವುದರ ಜೊತೆಗೆ ಹಿರಿಯರಿಂದ ಪಡೆದ ಮಾರ್ಗದರ್ಶನ ಅಸ್ಮರಣೀಯ ಎಂದರು ಇನ್ನೋರ್ವ ಮುಖ್ಯ ಅತಿಥಿಗಳಾಗಿ ಶ್ರೀ ರಾಜಶೇಖರನ್ ಎಸ್.ಆರ್ ಮಾತಾನಾಡಿ ವಿದ್ಯಾರ್ಥಿಗಳ ಜೊತೆ ಕಾಲ ಕಳೆದಿರುವ ಹಳೆಯ ನೆನಪುಗಳ ಮೆಲುಕಿ ಹಾಕಿದರು. ವಿದ್ಯಾರ್ಥಿ ಜೀವನದಲ್ಲಿ ಸವಿ ಸವಿ ನೆನಪು ಸಾವಿರ ನೆನಪು ಎಂಬಂತೆ ವಿದ್ಯಾರ್ಥಿಗಳು ಕಲಿಸಿದ ಗುರುವಿಗೆ ನಮನ ಸಲ್ಲಿಸುವ ಪರಂಪರೆ ಇವತ್ತಿನ ದಿನದಲ್ಲಿ ಜಾಗೃತಿ ಮೂಡುತ್ತಿದ್ದು ಶಿಕ್ಷಕನ ಬದುಕು ಎನ್ನುವುದು ಬಂಗಾರವಾಗುತ್ತಿದೆ. ಬಂಗಾರದ ಬದುಕನ್ನು ನಿರ್ಮಿಸಿ ಕೊಳ್ಳಲು ವಿದ್ಯಾರ್ಥಿಗಳ ಸಹಾಯ ಸಹಕಾರ ಪ್ರೀತಿ ಮಮಕಾರ ವಿಶ್ವಾಸ ಇವೆಲ್ಲವೂ ಕಾರಣದಿಂದಲೇ ಶಿಕ್ಷಕರ ಬದುಕು ಪಾವನ ವಾಗುವುದು ಎಂದು ಹೇಳಿದರು. ಇನ್ನೂ ಹಲವಾರು ಶಿಕ್ಷಕರು ಮಾತನಾಡಿ ಒಬ್ಬ ಶಿಲ್ಪಕಾರ ಕಲ್ಲನ್ನು ಕೆತ್ತಿ ಮೂರ್ತಿ ಮಾಡುವ ಹಾಗೆ ಅಕ್ಷರದ ಗಂಧ ಗಾಳಿ ಗೊತ್ತಿಲ್ಲದ ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ ಸುಶಿಕ್ಷಿತರನ್ನಾಗಿ ಸಮಾಜದಲ್ಲಿ ನೀಡುವ ಮಾರ್ಗದರ್ಶನ ಮಾಡುವ ಭಾಗ್ಯ ಸಿಕ್ಕಿರುವುದು ಶಿಕ್ಷಕರಿಗೆ ಮಾತ್ರ ಹಾಗಾಗಿ ಶಿಕ್ಷಕರಾದವರು ವಿದ್ಯಾರ್ಥಿಗಳ ಪಾಲಿನ ಎರಡನೆಯ ದೇವರು ಎಂದು ಬಣ್ಣಿಸಲಾಗುತ್ತದೆ ಎಂದು ನಿವೃತ್ತಿ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹನುಮಪ್ಪ ಚಿತ್ತವಾಡಗಿ ಮಾತನಾಡಿ ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮಗೆ ಕಲಿಸಿದ ಶಿಕ್ಷಕರನ್ನು ಕರೆಯಿಸಿ ಗೌರವಿಸಿರುವುದು ಭಾರತೀಯ ಸಂಸ್ಕೃತಿಯ ಸಂಪ್ರದಾಯವನ್ನು ಎತ್ತಿ ತೋರಿಸುತ್ತಿದೆ ಎಂದರು.ಮಾಹಾಂತೇಶ ಬಿ.ಅಂಗಡಿ, ನಿರೂಪಣೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮಕ್ಕೆ ಶಾಲೆಯ ವಿದ್ಯಾರ್ಥಿನಿಯರಿಂದ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಚಿದಾನಂದ ಗೌಡರ ಸ್ವಾಗತಿಸಿದರು ಪ್ರಾಸ್ತಾವಿಕ ನುಡಿಯನ್ನು ಲಕ್ಷ್ಮೀಬಾಯಿ ಚಿತ್ತವಾಡಗಿ ಹೇಳಿದರು.ವಿದ್ಯಾರ್ಥಿಗಳ ಅನಿಸಿಕೆಯನ್ನು ದೀಪಿಕಾ ದೇವದುರ್ಗ, ದೀಪಾ ಜಾಲಿಹಾಳ, ಮಾಹಾಂತೇಶ ಗದ್ದಿ ಹಾಗೂ ಹಲವಾರು ವಿದ್ಯಾರ್ಥಿಗಳು ಮಾತನಾಡಿದರು ನಾಗಣ್ಣ ಆಮದಿಹಾಳ ವಂದನಾರ್ಪಣೆ ಮಾಡಿದರು.

ಹವ್ಯಾಸಿ ಬರಹಗಾರರು:ಜಗದೀಶ್.ಗಿರಡ್ಡಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button