ಶಾಲಾ ಮಕ್ಕಳಿಗೆ ಉತ್ತಮ ಶೂ ಮತ್ತು ಸಾಕ್ಸ್ ಒದಗಿಸಿಲಿಕ್ಕೆ – ಕರ್ನಾಟಕ ದಲಿತ ರಕ್ಷಣಾ ವೇದಿಕೆ ಆಗ್ರಹ.
ಬಳ್ಳಾರಿ ಆ.05





ಕರ್ನಾಟಕ ದಲಿತ ರಕ್ಷಣಾ ವೇದಿಕೆ(ರಿ) ಜಿಲ್ಲಾ ಸಮಿತಿ ಬಳ್ಳಾರಿ ಈ ಮೂಲಕ ತಮ್ಮಲ್ಲಿ ವಿನಂತಿ ಏನೆಂದರೆ.ಶಾಲಾ ಮಕ್ಕಳಲ್ಲಿ ಶಿಸ್ತು ಪಾಲನೆ ಮಾಡಲೆಂದು ಪ್ರತಿ ವರ್ಷ ಸರ್ಕಾರವು ಸರ್ಕಾರಿ ಶಾಲೆಯಲ್ಲಿ 1 ನೇ. ತರಗತಿ ಯಿಂದ 10 ನೇ. ತರಗವತಿ ವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಗಳನ್ನು ಖರೀದಿ ಮಾಡಲು ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರುಗಳಿಗೆ ಅಧಿಕಾರ ನೀಡಿ ಅನುದಾನ ಮಂಜೂರು ಮಾಡುತ್ತಿದೆ. ಆದರೆ ಕೆಲವು ಶಾಲೆಗಳಲ್ಲಿ ತೀರಾ ಕಳಪೆ ಮಟ್ಟದ ಶೂ ಮತ್ತು ಸಾಕ್ಸ್ ಗಳನ್ನು ಖರೀದಿ ಮಾಡಿ ಸರ್ಕಾರದ ಹಣವನ್ನು ಪೋಲು ಮಾಡುತ್ತಿದ್ದಾರೆ. ಸದರಿ ಕಳಪೆ ಮಟ್ಟದ ಶೂ ಮತ್ತು ಸಾಕ್ಸ್ ಗಳು ಕೆಲವೇ ತಿಂಗಳಲ್ಲಿ ಹರಿದು ಹೋಗಿ ಮಕ್ಕಳು ಶಾಲೆಗೆ ಬರಿಗಾಲಿನಲ್ಲಿ ಬರುವಂತಾದ ಉದಾಹರಣೆಗಳು ಈ ಹಿಂದೆ ಕಳಪೆ ಮಟ್ಟದ ಶೂ ಸಾಕ್ಸ್ ಕರಗಿಸಿದ ನಂತರ ಎರಡು ಮೂರು ತಿಂಗಳಲ್ಲಿ ಹರಿದು ಹೋಗಿದ್ದು ಉಂಟುಕಾರಣ ದಯಾಳುಗಳಾದ ತಾವುಗಳು ಪ್ರಸ್ತುತ 2025-26 ನೇ. ಸಾಲಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾನ್ವಿ ಮತ್ತು ಸಿರವಾರ ತಾಲೂಕಿನಲ್ಲಿ ಬರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸರ್ಕಾರದ ಸುತ್ತೋಲೆ ಪ್ರಕಾರ ಒಳ್ಳೆಯ ಗುಣಮಟ್ಟದ ಮತ್ತು ಐ.ಎಸ್.ಐ.ಎಸ್ ಮಾರ್ಕಿನ ಶೂ ಮತ್ತು ಸಾಕ್ಸ್ ಗಳನ್ನು ಖರೀದಿಸಲು ತಾವುಗಳು ಎಲ್ಲಾ ಶಾಲೆಯ ಮುಖ್ಯೋಪಾಧ್ಯಾರು ಮತ್ತು ಎಸ್.ಡಿ.ಎಂ.ಸಿ ಸದಸ್ಯರಿಗೆ ಖರೀದಿ ಮಾಡಲು ತಾವುಗಳು ಸೂಕ್ತ ಆದೇಶ ಮಾಡಬೇಕೆಂದು ನಮ್ಮ ಸಂಘಟನೆಯು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತದೆ.

ಒಂದು ವೇಳೆ ಶಾಲೆಗಳಲ್ಲಿ ತೀರಾ ಕಳಪೆ ಮಟ್ಟದ ಶೂ ಮತ್ತು ಸಾಕ್ಸ್ ಗಳನ್ನು ಖರೀದಿ ಮಾಡಿದ್ದು ಕಂಡು ಬಂದಲ್ಲಿ ಅದಕ್ಕೆ ತಾವೇ ನೇರ ಹೊಣೆಗಾರರು ಆಗುತ್ತೀರೆಂದು ತಮ್ಮ ವಿರುದ್ಧ ದೂರು ಸಲ್ಲಿಸಲಾಗುವದೆಂದು ತಮ್ಮ ಗಮನಕ್ಕೆ ತರಬಯಸುತ್ತೇವೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೂ ವರದಿ ನೀಡಿರುವ ಸಂಘಟಕರು ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಿ.ಹನುಮೇಶ್ ಕಟ್ಟಿಮನಿ ಜಿಲ್ಲಾ ಕಾರ್ಯಾಧ್ಯಕ್ಷರು, ಡಿ.ರಾಮಕೃಷ್ಣ ದಲಿತ ಮುಖಂಡರು, ರಾಜಶೇಖರ ಛಲವಾದಿ ತಿಳಿಸಿದ್ದಾರೆ.