ವಿಜಯಪುರ ಜುಲೈ 7 ರಂದು – ಧಾರ್ಮಿಕ ಕಾರ್ಯಕ್ರಮಗಳು.
ವಿಜಯಪುರ ಆ.06

ನಗರದ ಜಮಖಂಡಿ ಬೈಪಾಸ್ ನಲ್ಲಿರುವ ಜ್ಯೊತಿರ್ವಿದ್ವಾನರಾದ ಲಿಂ.ಸಂಗಯ್ಯ ಮುತ್ಯಾ ರವರ ಆಶ್ರಮದಲ್ಲಿ ಶ್ರಾವಣ ಮಾಸದ ನಿಮಿತ್ಯ ಜುಲೈ 7 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಅಂದು ಬೆಳಗ್ಗೆ 6 ಗಂಟೆಗೆ ಸಂಗಯ ಮುತ್ಯಾ ಅವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಜನೆ, ಸಹಸ್ರ ಶಿವನಾಮಸ್ಮರಣೆ, ಮಹಾ ಮಂಗಳಾರುತಿ ನಡೆಯುವುದು. ಮಧ್ಯಾಹ್ನ 1:00 ಗೆ ಧರ್ಮ ಸಭೆ ಸಾನಿಧ್ಯ ಪರಮ ಪೂಜ್ಯ ಸಿದ್ದಲಿಂಗ ದೇವರು ಖಾಸ್ಗತೇಶ್ವರ ಮಠ ತಾಳಿಕೋಟೆ ಪರಮ ಪೂಜ್ಯ ಜ್ಞಾನಾನಂದ ಸ್ವಾಮಿಗಳು ಜ್ಞಾನಯೋಗ ಆಶ್ರಮ ವಿಜಯಪುರ ವಹಿಸುವರು.

ಅಧ್ಯಕ್ಷತೆಯನ್ನು ಆಶ್ರಮದ ಗುರುಗಳಾದ ದೈವಜ್ಞ ಗಂಗಾಧರ ಸ್ವಾಮಿಗಳು ವಹಿಸುವರು, ನಿವೃತ್ತ ಉಪನ್ಯಾಸಕ ಶಿವಾನಂದ ನುಚ್ಚಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, ಅಂಧ ಅನಾಥ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಿಹಿ ವಿತರಣೆ ನಡೆಯುವದು. ನಂತರ ಮಹಾ ಪ್ರಸಾದ ವಿತರಣೆ ಜರಗುವುದು. ಇದೇ ಸಂದರ್ಭದಲ್ಲಿ ನಾಡಿನ ಖ್ಯಾತ ಸಂಗೀತಗಾರರಿಂದ ಸಂಗೀತ ಕಾರ್ಯಕ್ರಮ ಜರಗುವುದು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ