ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ – ಸಾಮೂಹಿಕ ಕವನ ವಾಚನ.

ಬೆಂಗಳೂರು ಆ.07

ನಗರದ ಅಸೆಂಟ್ ಪಿ.ಯು ಕಾಲೇಜಿನಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ, ಚಿತ್ರದುರ್ಗ (ರಿ) ರವರು ಆಯೋಜಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಕವಿ ಗೋಷ್ಠಿಯಲ್ಲಿ ಭಾಗವಹಿಸಿದ ಕವಿಗಳಿಗೆ ದಾಖಲೆ ಪ್ರಮಾಣ ಪತ್ರ ವಿತರಿಸಲಾಯಿತು. ಈ ದಾಖಲೆಯ ಕವಿ ಗೋಷ್ಠಿಯಲ್ಲಿ ಭಾಗಿಯಾದ ಚಳ್ಳಕೆರೆಯ ವಿಜಯ ಕಲಾ ರವರ ಹೆಸರು “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆಯಾಗಿದೆ. ಕವಿ ಗೋಷ್ಠಿಯ ಪ್ರಾತಿನಿಧಿಕ ಕವನ ಸಂಕಲನ “ಕಾವ್ಯೋತ್ಸವ” ವನ್ನು ನಿಕಟ ಪೂರ್ವ ಕ.ಸಾ.ಪ ರಾಜ್ಯಾಧ್ಯಕ್ಷರಾದ ಮನು ಬಳಿಗಾರ್ ರವರು ಲೋಕಾರ್ಪಣೆ ಗೊಳಿಸಿದರು.

ವಿಶ್ವ ಕನ್ನಡ ಕಲಾ ಸಂಸ್ಥೆಯ ಅಧ್ಯಕ್ಷರಾದ ಈ ರವೀಶ್ (ಅಕ್ಕರ), ವೈ.ಬಿ ಎಚ್ ಜಯದೇವ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಕೆ.ಎಂ ವೀರೇಶ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ್ ಮತ್ತು ಚಲನ ಚಿತ್ರ ನಟಿ ಅಮೃತರಾಜ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಇದೇ ಸ್ಥಳದಲ್ಲಿ ಫೆಬ್ರವರಿ 23, 2025 ರಂದು ಬೆಂಗಳೂರು ಹೆಸರಘಟ್ಟ ರಸ್ತೆಯಲ್ಲಿರುವ ಅಸೆಂಟ್ ಪಿ.ಯು ಕಾಲೇಜಿನಲ್ಲಿ ವಿಶ್ವ ಕನ್ನಡ ಕಲಾ ಸಂಸ್ಥೆ, ಚಿತ್ರದುರ್ಗ (ರಿ) ರವರು ಆಯೋಜಿಸಿದ ಕವಿ ಗೋಷ್ಠಿಯಲ್ಲಿ 323 ಜನ ಕವಿಗಳಿಂದ ಏಕಕಾಲದಲ್ಲಿ ಕವನ ವಾಚಿಸುವ ಮೂಲಕ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ ಯಾಗಿತ್ತು. ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷರಾದ ವೈ.ಬಿ ಹೆಚ್ ಜಯದೇವ್ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿ ಗಣ್ಯ ಮಹನೀಯರ ಸಾಧನೆಗಳನ್ನು ಮೆಲುಕು ಹಾಕಿದರು.

ಮತ್ತು ಅಲ್ಲಿಗೆ ಆಗಮಿಸಿದಂತಹ ಕವಿ ಮಹನೀಯರಿಗೆ ಗೌರವದ ಮಾತುಗಳನ್ನಾಡುವ ಮೂಲಕ “ಸಾಹಿತ್ಯದ ಶಕ್ತಿ” ಎಂತದ್ದು ಎನ್ನುವುದನ್ನು ಅವರ ಮಾತುಗಳಿಂದ ತಿಳಿಸಿದರು. ಹಾಗೂ ರವೀಶ್ ರವರ ಸಾಹಿತ್ಯ ಪ್ರೇಮ, ಸಾಹಿತ್ಯದ ಬಗ್ಗೆಗಿನ “ಒಲವು ನಿಲುವು” ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕವಿ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿದ್ದ ಚಳ್ಳಕೆರೆ ಮೂಲದವರಾದ ಲೇಖಕಿ ಪಿ.ಚಂದ್ರಿಕಾ ರವರು ಮಾತನಾಡಿ “ಕವಿಗೆ ವಿವೇಕ ಬಹು ಮುಖ್ಯ, ಇನ್ನೊಬ್ಬರಿಗೆ ನೋವಾಗದಂತೆ ಬದುಕುವುದು ಮಾನವೀಯ ಮೌಲ್ಯಗಳ ಅನುಸರಣೆಯೇ, ಅದೇ ಅಂತಿಮ ಏಕಾಂತದಲ್ಲಿ ನಮ್ಮ ಲೋಭ ಮೋಹಗಳು ಏರು ಸ್ಥಿತಿಯಲ್ಲಿ ಇರುತ್ತವೆ. ಅದೇ ಕಾವ್ಯಕ್ಕೆ ಬರುವಾಗ ಲೋಕ ಸಂಗತಿಗಳ ಒಳಿತನ್ನು ಬಯಸುತ್ತದೆ. ಇದು ಕಾವ್ಯದ ಅಥವಾ ಕಲೆಗಳ ಜೊತೆಗಿನ ಅಚ್ಚರಿ” ಎಂದು ತಿಳಿಸಿದರು.

ಭಾವಕ್ಕೆ ಮಾತು ಸಿಗುವುದು ಅಷ್ಟು ಸುಲಭದ ಮಾತಲ್ಲ. ಅದು ಕವಿಯೊಬ್ಬನ ಸೌಭಾಗ್ಯ ಅದಕ್ಕಾಗಿ ಕವಿ ಹಂಬಲಿಸುತ್ತಾನೆ ಅದು ಪರಂಪರೆ ಯಿಂದ ದತ್ತವಾಗಿರುತ್ತದೆ. ಅಕ್ಕಮಹಾದೇವಿಯ ಬಯಲಾಗುವ ಪ್ರಕ್ರಿಯೆಗೂ. ಅಲ್ಲಮನ ಬಯಲಿನ ಪ್ರಕ್ರಿಯೆಗೂ. ಇವತ್ತಿನ ಬಯಲಿನ ಕಲ್ಪನೆಗೂ. ಅನುಚಾನ ವಾದ ಸಂಬಂಧವಿರುತ್ತದೆ. ನಾವು ಅದನ್ನು ಅರ್ಥ ಮಾಡಿ ಕೊಳ್ಳದೆ ಹೋದರೆ ಕವಿತೆ ದಕ್ಕುವುದು ಕಷ್ಟ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಮನು ಬಳಿಗಾರ್ ರವರು ಮಾತನಾಡಿ “ಒಂದೇ ಜಾತಿ ಒಂದೇ ಮತ” ಎನ್ನುವಂತಹ ತತ್ವ ಆದರ್ಶಗಳನ್ನು ಒಳ ಗೊಂಡಂತಹ ಸಾಹಿತ್ಯ ನಮ್ಮದಾಗಬೇಕು. ಆಗ ಸಮಾಜದಲ್ಲಿನ ಕಲುಷಿತ ವಾತಾವರಣ ಕಡಿಮೆ ಯಾಗುತ್ತದೆ. ವಚನ ಮತ್ತು ದಾಸ ಸಾಹಿತ್ಯದ ತತ್ವ ಆದರ್ಶಗಳನ್ನು ಪಾಲಿಸಿ ಕೊಂಡು ಹೋಗೋಣ, ಅದೇ ನಮಗೆ ಕನ್ನಡ ಸಾಹಿತ್ಯದ ಸಿರಿವಂತಿಕೆ” ಎಂದರು. ವಿಶ್ವ ಕನ್ನಡ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಈ ರವೀಶ್ ಅಕ್ಕರ ಮಾತನಾಡಿ ಈ ದಿನ ಸ್ನೇಹಿತರ ದಿನಾಚರಣೆ ಯಾಗಿದ್ದು “ಸ್ನೇಹ” ನಮ್ಮ ಬಹುದೊಡ್ಡ ಆಸ್ತಿ, ಶತ್ರುತ್ವವನ್ನು ತ್ಯಜಿಸಿ ಪ್ರೀತಿ, ಪ್ರೇಮ, ಸಂಬಂಧ, ಸ್ನೇಹವನ್ನು ಇನ್ನು ಮುಂದಾದರೂ ಮಿತೃತ್ವ ದಿಂದ ಬದುಕೋಣ ಎಂದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಚಿತ್ರದುರ್ಗದ ಜಿಲ್ಲಾ ಘಟಕ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ ವೀರೇಶ್ ಅವರು ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆಯ ಮಾತುಗಳನ್ನು ಆಡಿದರು. ನಿರೂಪಣೆಯನ್ನು ರಾಘವೇಂದ್ರ ಮಸ್ಕಲ್ ರವರು ತುಂಬಾ ಅಚ್ಚು ಕಟ್ಟಾಗಿ ನಡೆಸಿ ಕೊಟ್ಟರು. ಡಾ, ನವೀನ್ ಸಜ್ಜನ್ ರವರು ಆಗಮಿಸಿದ ಅತಿಥಿಗಳಿಗೆ ಗೌರವ ಪೂರ್ವಕವಾಗಿ ಸ್ವಾಗತವನ್ನು ಕೋರಿದರು.ಕವಿ ಗೋಷ್ಠಿಯಲ್ಲಿ ವಾಚನ ಮಾಡಿದ ಕವಿಗಳಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿ ಮಹೋದಯರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ,ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button