ಶ್ರೀಶಾರದಾದೇವೀ ಜೀವನಗಂಗಾ ಗ್ರಂಥ ಪಾರಾಯಣ ಬದುಕಿಗೆ ನಿತ್ಯ ಸ್ಪೂರ್ತಿ – ಶ್ರೀಮತಿ ಜಿ.ಯಶೋಧಾ ಪ್ರಕಾಶ್ ಅಭಿಮತ.
ಚಳ್ಳಕೆರೆ ಆ.07

ಸ್ವಾಮಿ ಪುರುಷೋತ್ತಮಾನಂದರು ಕನ್ನಡದಲ್ಲಿ ಬರೆದಿರುವ “ಶ್ರೀಶಾರದಾದೇವೀ ಜೀವನಗಂಗಾ” ಗ್ರಂಥ ಪಾರಾಯಣ ಬದುಕಿಗೆ ನಿತ್ಯ ಸ್ಪೂರ್ತಿ ನೀಡುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್ ತಿಳಿಸಿದರು. ಶಿವ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರೀಶಾರದಾದೇವೀ ಜೀವನಗಂಗಾ ಗ್ರಂಥ ಪಾರಾಯಣ ದಿಂದ ನಮಗೆ ಮನಃ ಶಾಂತಿ ಸಿಗುತ್ತದೆ. ಅಲ್ಲದೆ ನಿತ್ಯ ಬದುಕಿನ ಅನೇಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಸುವ ದಾರಿ ದೀಪವಾಗಿದ್ದು ಕನ್ನಡದ ಅತ್ಯಂತ ಮಹತ್ವದ ಸದ್ಗ್ರಂಥವಿದು ಎಂದು ಪುಸ್ತಕದ ವಿಶೇಷತೆಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ “ಶ್ರೀದೇವಿಸ್ತುತಿ” ಪಠಣ ಮತ್ತು ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಸತ್ಸಂಗದಲ್ಲಿ ಶ್ರೀಮತಿ ತಳುಕಿನ ತೊಯಜಾಕ್ಷಿ, ಶಾಂತಮ್ಮ ಶಾಂತವೀರಪ್ಪ, ಶಾರದಾಮ್ಮ, ಜಯಮ್ಮ, ಭ್ರಮರಂಭಾ ಮಂಜುನಾಥ, ಸೌಮ್ಯ ಪ್ರಸಾದ್, ಯತೀಶ್ ಎಂ ಸಿದ್ದಾಪುರ, ಉಷಾ ಶ್ರೀನಿವಾಸ್, ಸಂಗೀತ ವಸಂತಕುಮಾರ್, ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ರಶ್ಮಿ ವಸಂತ, ರಶ್ಮಿ ರಮೇಶ್, ವಿಜಯಲಕ್ಷ್ಮೀ, ವೀರಮ್ಮ ಬಸವರಾಜ, ದ್ರಾಕ್ಷಾಯಣಿ, ಗೀತಾಲಕ್ಷ್ಮೀ ಉಪಸ್ಥಿತರಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.