ಅರ್ಥಶಾಸ್ತ್ರದಲ್ಲಿ 100 ಕ್ಕೆ 100 ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದ – ವಿಜಯಲಕ್ಷ್ಮೀ ಬಂಡಿವಡ್ಡರ.
ಬೇವೂರು ಆ.09





ಆದರ್ಶ ವಿದ್ಯಾವರ್ಧಕ ಸಂಘದ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ 4 ನೇ. ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮೀ.ಯಮನಪ್ಪ. ಬಂಡಿವಡ್ಡರ. ಬಾಗಲಕೋಟೆ ವಿಶ್ವ ವಿದ್ಯಾಲಯದ 4 ನೇ. ಸೆಮಿಸ್ಟರನಲ್ಲಿ ಅರ್ಥಶಾಸ್ತ್ರ ವಿಭಾಗದ ಅರ್ಥಶಾಸ್ತ್ರಕ್ಕೆ ಸಂಖ್ಯಾಶಾಸ್ತ್ರ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆದಿದ್ದಾರೆ. ಈ ವಿದ್ಯಾರ್ಥಿನಿಯ ವಿಶೇಷ ಸಾಧನೆಗೆ ಬೇವೂರಿನ ಆದಶ೯ ವಿದ್ಯಾ ವರ್ಧಕ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ.ಜಿ ಮಾಗನೂರ ವಕೀಲರು ಸರ್ವ ಸದಸ್ಯರು. ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಗದೀಶ ಗು.ಭೈರಮಟ್ಟಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಎಸ್.ಎಸ್ ಆದಾಪೂರ ಮಹಾವಿದ್ಯಾಲಯದ ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.