ವಾರ್ಡ್ ನಂ 35. ರ ಆದರ್ಶ ನಗರದಲ್ಲಿ – ಚರಂಡಿ ಒಡೆದು ಗಬ್ಬೆದ್ದಿರುವ ನಗರ.
ಗದಗ ಆ.09

ಗದಗ ಬೆಟಗೇರಿ ನಗರ ಸಭೆಯ ವ್ಯಾಪ್ತಿಗೊಳ ಪಡುವ ವಾರ್ಡ್ ನಂ 35 1 ನೇ. ಮುಖ್ಯ ರಸ್ತೆ 2 ನೇ. ಅಡ್ಡ ರಸ್ತೆ ಆದರ್ಶ ನಗರದಲ್ಲಿ ಚರಂಡಿ ಒಡೆದು ನಗರವೆಲ್ಲ ಗಬ್ಬೆದ್ದು ನಾರುತ್ತಿದ್ದರೂ ಕ್ಯಾರೆ ಎನ್ನದ ಒಳ ಚರಂಡಿ ಮಂಡಳಿಯ ಅಧಿಕಾರಿಗಳು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ ತಿಂಗಳ ಹಿಂದೆಯೇ ಚರಂಡಿ ಒಡೆದು ನಗರದ ತುಂಬೆಲ್ಲಾ ಗಬ್ಬು ವಾಸನೆ ಪಸರಿಸಿದೆ ಇದರಿಂದಾಗಿ ನಗರದ ಸುಸಜ್ಜಿತ ವಾತಾವರಣ ಹದಗೆಟ್ಟಿರುವುದಲ್ಲದೇ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ ಆದರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ನಮ್ಮ ಒಳ ಚರಂಡಿ ಮಂಡಳಿಯಲ್ಲಿ ಅನುದಾನ ಲಭ್ಯವಿರುವುದಿಲ್ಲ ತಾವು ನಗರ ಸಭೆಗೆ ಭೇಟಿ ನೀಡಿ ವಿಚಾರಿಸಿ ಎಂದು ಬೇಜವಾಬ್ದಾರಿ ಉತ್ತರವನ್ನು ನೀಡುತ್ತಾರೆ. ನಗರ ಸಭೆ ಅಧಿಕಾರಿಗೆ ಭೇಟಿ ನೀಡಿದರೆ ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಒಳ ಚರಂಡಿ ಮಂಡಳಿಯ ಅಧಿಕಾರಿಗೆ ಸಂಪರ್ಕಿಸಿರಿ ಎಂದು ಹೇಳುತ್ತಾರೆ. ಇವರಿಬ್ಬರ ಬೇಜವಾಬ್ದಾರಿ ಬೇಸತ್ತ್ ಸ್ಥಳೀಯ ಮುಖಂಡರು ಜನೇವರಿಯಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರೂ ಸಹಿತ ಯಾವುದೇ ಪ್ರಯೋಜನೆ ಯಾಗಿರುವದಿಲ್ಲ. ಹೀಗಿರುವಾಗ ಈ ಸಮಸ್ಯೆಯನ್ನ ಬಗೆ ಹರಿಸುವವರಾದರು ಯಾರು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಮಾನ್ಯ ಜಿಲ್ಲಾಧಿಕಾರಿಗಳು ಅವರ ಮೇಲೆ ಇವರು ಇವರ ಮೇಲೆ ಅವರು ಕೈ ತೋರಿಸಿ ಸಾರ್ವಜನಿಕರ ಭಾವನೆಗಳ ಜೊತೆಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಮೇಲೆ ಶಸ್ತು ಬದ್ದ ಕ್ರಮ ಜರುಗಿಸಬೇಕು. ಹಾಗೂ ಕೂಡಲೇ ಕಾಮಗಾರಿ ಪೂರ್ಣ ಗೊಳಿಸಿ ಸಾರ್ವಜನಿಕರು ಈ ದುರ್ವಾಸನೆ ಯಿಂದ ಮುಕ್ತರಾಗ ಬೇಕು. ಇಲ್ಲದೇ ಹೋದರೆ ಸಂಬಂಧ ಪಟ್ಟ ಇಲಾಖೆಗೆ ಸಾರ್ವಜನಿಕರು ಮುತ್ತಿಗೆ ಹಾಕಿ ಸಂಬಂಧ ಪಟ್ಟ ಅಧಿಕಾರಗಳನ್ನ ಸೇವೆಯಿಂದ ವಜಾ ಗೊಳಿಸ ಬೇಕೆಂದು ಬ್ರಹತ್ ಪ್ರತಿಭಟನೆ ಮಾಡಲಾಗುವದೆಂದು ಹೇಳಿದರು. ಈ ಸಂದರ್ಭದಲ್ಲಿ ಯುವ ಮುಖಂಡರು ಹಾಗೂ ಉದ್ಯಮಿದಾರರಾದ ವಿನೋದ ಹಡಗಲಿ. ಐ.ವಿ ಪೂಜಾರ ವೀರೇಶ ಸಿನ್ನೂರ. ಪ್ರದೀಪ ಹುಡೇದ. ಗುಡ್ಡಿಮಠ.ಸುರೇಶ ಹರ್ಲಾಪೂರ ಇನ್ನಿತರರು ಉಪಸ್ಥಿತರಿದ್ದರು.
ವರದಿ.ಅಂದಪ್ಪ.ಮಾದರ.ಗದಗ