ರಾಜ್ಯ ಮಟ್ಟದ ಖೋ ಖೋ – ರೆಫರಿ ಪರೀಕ್ಷೆ.
ಕೊಟ್ಟೂರು ಆ.09





ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲೆಯಲ್ಲಿ ರಾಜ್ಯ ಮಟ್ಟದ ಖೋ ಖೋ ರೆಫರಿ ಪರೀಕ್ಷೆ ದಿನಾಂಕ 9 ಆಗಸ್ಟ್ 25 ರಿಂದ 10 ಆಗಸ್ಟ್ 25 ರ ವರೆಗೆ ನಡೆಸಲು ಕಾರ್ಯಕ್ರಮವನ್ನು ವಿಜಯನಗರ ಜಿಲ್ಲಾ ಖೋ ಖೋ ಸಂಸ್ಥೆ ಅಧ್ಯಕ್ಷರಾದ ಡಾ, ರವೀಂದ್ರಗೌಡ ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಬಿ ಶಿವಾನಂದ ಇವರು ಉದ್ಘಾಟನೆ ಮಾಡಲಾಯಿತು. ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ ಬೆಂಗಳೂರು, ವಿಜಯನಗರ ಜಿಲ್ಲಾ ಖೋ ಖೋ ಸಂಸ್ಥೆ ವಿಜಯನಗರ, ಶ್ರೀ ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ಕೊಟ್ಟೂರು ವತಿಯಿಂದ ರಾಜ್ಯ ಮಟ್ಟದ ಖೋ ಖೋ ರೆಫೆರಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿಮುಖ್ಯ ಅಥಿತಿಗಳಾಗಿ ಡಾ, ಚಂದ್ರಶೇಖರ್ ಅಂತರಾಷ್ಟೀಯ ಕ್ರೀಡಾ ಪಟುಗಳು ಹಾಗೂ ರೆಫರಿ ಬೋರ್ಡ್ ಮುಖ್ಯಸ್ಥರು ಇದ್ದರು. ಹಾಗೂ ಅತಿಥಿಗಳಾಗಿ ದೈಹಿಕ ಶಿಕ್ಷಣ ಪರಿ ವೀಕ್ಷಕರಾದ ಶ್ರೀಯುತ ಶಶಿಧರ್ ಮೈದೂರು, ಮುಖ್ಯ ಗುರುಗಳಾದ ಮಾಲಿನಿ ಮೇಡಂ, ಎಸ್.ಡಿ.ಎಂ.ಸಿ ತಾಲೂಕ ಅಧ್ಯಕ್ಷರಾದ ಹರೀಶ್, ನಂದಿನಿ ಒಡೆಯರ್, ಶಂಕರ್, ಲಿಂಗಾನಾಯ್ಕ ಇತರರು ಉಪಸ್ಥಿತರಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು