ಶ್ರೀಶಾರದಾಶ್ರಮದಲ್ಲಿ ಸ್ವಾತಂತ್ರ್ಯ – ದಿನಾಚರಣೆಯ ಸಂಭ್ರಮೋತ್ಸವ.
ಚಳ್ಳಕೆರೆ ಆ.11

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ಆವರಣದಲ್ಲಿ ಆಶ್ರಮದ ಯುವ ಸಂಘದ ವರಿಂದ ಆಗಸ್ಟ್ 15 ರ ಬೆಳಿಗ್ಗೆ 6.15 ರಿಂದ ಧ್ವಜಾರೋಹಣ, ಆಶ್ರಮದ ಯುವಕ-ಯುವತಿಯರು ಹಾಗೂ ಸದ್ಭಕ್ತರಿಂದ ದೇಶಗೀತೆ ಗಾಯನ, ಸ್ವಾತಂತ್ರ್ಯ ದಿನದ ಬಗ್ಗೆ ಭಾಷಣ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸಂಭಾಷಣೆಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

