ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಗೆ – ಭೀರಪ್ಪ ಹೊಸೂರ ಆಯ್ಕೆ.
ಇಂಡಿ ಆ.11

ಕಲರ್ ಪುಲ್ ಸುದ್ದಿ ಕನ್ನಡ ಮಾಸ ಪತ್ರಿಕೆ ಹಾಗೂ ಕನ್ನಡ ಫಿಲಂ ಚೇಂಬರ್ ವತಿಯಿಂದ ನೀಡಲಾಗುವ 2025 ನೇ. ಸಾಲಿನ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಗೆ ರವಿವಾಣಿ ದಿನ ಪತ್ರಿಕೆಯ ಇಂಡಿ ತಾಲೂಕಾ ವರದಿಗಾರರಾದ ಭೀರಪ್ಪ ಎಸ್.ಹೊಸೂರ ಆಯ್ಕೆ ಯಾಗಿದ್ದಾರೆ. 17 ನೇ. ಅಗಸ್ಟ್ 2025 ರವಿವಾರ ಬೆಂಗಳೂರಿನ ರವಿಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸಮಾರಂಭದಲ್ಲಿ ರಾಜ್ಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿಯನ್ನು ಭೀರಪ್ಪ.ಎಸ್ ಹೊಸೂರ ಅವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಪಾದಕರು/ಅಧ್ಯಕ್ಷರು ರವೀಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

