ಹಿರಗಲಿಂಗೇಶ್ವರ ದೇವರ ಶ್ರಾವಣ ಮಾಸದ ವಿಶೇಷ ಅಂಗವಾಗಿ – ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ನೇರವೇರಿತು.
ಹೊಸ ತಾವರಖೇಡ ಆ.11





ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸುಕ್ಷೇತ್ರ ಹೊಸ ತಾವರಖೇಡ ಗ್ರಾಮದಲ್ಲಿ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಹಿರಗಲಿಂಗೇಶ್ವರ ದೇವರ ಶ್ರಾವಣ ಮಾಸದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರಗಿತು.ಈ ಜಾತ್ರೆಯಲ್ಲಿ ಶ್ರೀ ಬ್ರಹ್ಮದೇವರ ಪಲ್ಲಕ್ಕಿ ತೊಂಟಾಪುರ, ಶ್ರೀ ಕೆಂಚರಾಯ ದೇವರ ಪಲ್ಲಕ್ಕಿ ಹಂಚಿನಾಳ, ಶ್ರೀ ಮಾರಾಯಸಿದ್ದ ದೇವರ ಪಲ್ಲಕ್ಕಿ ಮಂಗಳೂರು, ಶ್ರೀ ನಿಂಗರಾಯ ದೇವರ ಪಲ್ಲಕ್ಕಿ ದೇವಣಗಾವ್, ಶ್ರೀ ಲಕ್ಷ್ಮೀ ದೇವಿ ಪಲ್ಲಕ್ಕಿ ಮದರಿ, ಹಾಗೂ ಶ್ರೀ ರಬಕಮ್ಮ ದೇವಿ ಪಲ್ಲಕ್ಕಿ ಗುಂದಗಿ ಈ ಎಲ್ಲ ಪಲ್ಲಕ್ಕಿಗಳ ದೇವರುಗಳನ್ನು ಭೀಮಾ ನದಿಯಲ್ಲಿ ಬೆಳಿಗ್ಗೆ ಗಂಗಾ ಸ್ನಾನ ಮುಗಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ ವಾಲಗದೊಂದಿಗೆ ತರತರದ ಮದ್ದು ಸುಡುತ್ತಾ ಮೆರವಣಿಗೆ ಮಾಡಿ ನಂತರ ದೇವರ ಹೇಳಿಕೆ ನಡೆಯಿತು.ಮಳೆ ಬೆಳೆ ಊರಿಗೆ ಸುಖ ಸಂಪತ್ತು ದೊರಕ ಬೇಕಾದರೆ ಪ್ರತಿ ವರ್ಷವೂ ಶ್ರೀಹಿರಗಲಿಂಗೇಶ್ವರರ ಜಾತ್ರೆ ಶ್ರದ್ಧಾ ಭಕ್ತಿಯಿಂದ ಮಾಡ ಬೇಕು ಎಂದು ಹೇಳಲಾಯಿತು.

ತದನಂತರ ಶ್ರೀ ಮಾಳಿಂಗರಾಯ ಸಂಘ ಹಂಚಿನಾಳ ಇವರಿಂದ ದೈಗೊಂಡನ ಕರಿ ಕಟ್ಟುವ ಹಬ್ಬ ಜರುಗಿತು.ಇಂದು ರಾತ್ರಿ 10 ಗಂಟೆಗೆ ಹೊಸ ತಾವರಖೇಡ ಗ್ರಾಮದ ವರಿಂದ ಡೊಳ್ಳಿನ ಪದ ಹಾಗೂ ಬಜನಾ ಸಂಘದ ವರಿಂದ ಬೆಳಿಗಿನ ವರೆಗೆ ಜಾಗರಣೆ ಮಾಡಲಾಗುವುದು ಹೊಸ ತಾವರಖೇಡ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಭಕ್ತಾದಿಗಳು ಈ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿಯಿಂದ ಉರುಳು ಸೇವೆ ಸಲ್ಲಿಸಿದರು. ಜಾತ್ರೆಯು ಬಹಳ ವಿಶೇಷವಾಗಿ ಸಕಲ ಸದ್ಭಕ್ತಾದಿಗಳು ಸೇರಿ ಅದ್ದೂರಿಯಾಗಿ ಆಚರಣೆ ಮಾಡಿದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ