ಒಳ ಮೀಸಲಾತಿ ಜಾರಿ ಮಾಡಿ ಇಲ್ಲಾ, ಕುರ್ಚಿ ಖಾಲಿ ಮಾಡಿ – ಮಲ್ಲು ಮಾದರ.
ರೋಣ ಆ.12

ಒಳ ಮೀಸಲಾತಿ ಜಾರಿ ಗೊಳಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ನೀಡಿದೆ ಅದರಂತೆ ಹರಿಯಾಣ ಪಂಜಾಬ್ ತೆಲಂಗಾಣ ಸೇರಿ ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಒಳ ಮೀಸಲಾತಿ ಜಾರಿಯಾಗಿದೆ. ಆದರೆ ಕರ್ನಾಟಕದಲ್ಲಿ ಇದು ವರೆಗೂ ಜಾರಿಗೆ ಬಂದಿಲ್ಲಾ ಮಾದಿಗ ಸಮುದಾಯಕ್ಕೆ ಶೇಕಡ 6% ಕಿಂತಲೂ ಹೆಚ್ಚು ಮೀಸಲಾತಿ ನೀಡಬೇಕು ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರ ಗೊಳಿಸಲಾಗುವುದೆಂದು ರೋಣ ತಾಲೂಕ ಮಾದಿಗ ಸಮಾಜದ ಯುವ ಮುಖಂಡ ಮಲ್ಲು ಮಾದರ, ಎಚ್ಚರಿಸಿದರು.ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಆದೇಶ ಮಾಡಿ ಒಂದು ವರ್ಷ ಕಳೆದಿದೆ ದೇಶದ ನಾಲ್ಕು ರಾಜ್ಯಗಳಲ್ಲಿ ಅದನ್ನು ಈಗಾಗಲೇ ಅನುಷ್ಠಾನ ಮಾಡಿ ಶೋಷಿತರ ಬೆಂಬಲಕ್ಕೆ ನಿಲ್ಲಲಾಗಿದೆ ರಾಜ್ಯ ಸರ್ಕಾರ ದತ್ತಾಂಶದ ನೆಪ ಇಟ್ಟುಕೊಂಡು ಇದು ವರೆಗೂ ಒಳ ಮೀಸಲಾತಿ ಜಾರಿ ಮಾಡಿಲ್ಲಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಶೋಷಿತರ ಪರ ಅಂತಾ ಭಾಷಣ ಮಾಡಿ ಈಗ ಅಧಿಕಾರ ಅನುಭವಿಸುತ್ತಿದ್ದಾರೆ ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾಯಿತಿ ಜಾರಿ ಮಾಡದೇ ಸಮುದಾಯ ಸಮುದಾಯಗಳ ನಡು ಮಧ್ಯೆ ಬೆಂಕಿ ಹಚ್ಚುವ ಆಡಳಿತ ಮಾಡಿದಂತೆ ಕಾಣ್ತಿದೆ ನೀವು ನಿಜವಾಗ್ಲೂ ಶೋಷಿತ ಪರ ನಾಯಕರದ್ರೆ ಆಗಸ್ಟ್ 16 ರಂದು ನಡೆಯಲಿರುವ ಅಧಿವೇಶನದಲ್ಲಿ ಒಳ ಮೀಸಲಾತಿ ಘೋಷಿಸಬೇಕು ಇಲ್ಲವಾದಲ್ಲಿ ಕುರ್ಚಿ ತ್ಯಜಿಸಬೇಕು ಎಂದು ಆಗ್ರಹಿಸಿದರು.