ವಿಶೇಷ ಮತ್ತು ವಿಜೃಂಭಣೆಯ ಹಬ್ಬ ಉಜ್ಜಯಿನಿ – ಭರತ ಹುಣ್ಣಿಮೆ.
ಕೊಟ್ಟೂರು ಫೆ.12

ಕೊಟ್ಟೂರು ತಾಲೂಕ ಉಜ್ಜಯಿನಿ ಗ್ರಾಮದಲ್ಲಿ ಪಂಚ ಪೀಠಗಳಲ್ಲಿ ಒಂದಾದ ಉಜ್ಜನಿಯ ಸದ್ಧರ್ಮ ಪೀಠವು ಅನೇಕ ಧಾರ್ಮಿಕ ಆಚರಣೆಗಳಲ್ಲಿ ಭರತ ಹುಣ್ಣಿಮೆ ಹಬ್ಬವನ್ನು ಪ್ರತಿ ವರ್ಷ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಭರತ ಹುಣ್ಣಿಮೆಗೆ 9 ದಿನಗಳ ಮುಂಚಿತವಾಗಿ ಸಪ್ತಮಿ ದಿನವಾದ ಫೆಬ್ರವರಿ 11 ರಂದು ಉಜ್ಜಯಿನಿ ಪಾದದಿಂದ ಹೊರಡುವ ಉತ್ಸವ ಮೂರ್ತಿಯು ಭುಜಂಗ ಪಾದದ ವರೆಗೆ 9 ಪಾದಗಳನ್ನು ಮೂರ್ತಿ ಸುತ್ತಿ ಮಧ್ಯೆ ಮಧ್ಯೆ ನಿರ್ದಿಷ್ಟ ಕ್ಷೇತ್ರಗಳಲ್ಲಿ ಮೆರವಣಿಗೆ ಮುಖಾಂತರ ವಾತ್ಸವ್ಯ ಮಾಡುತ್ತದೆ.

ಕ್ಷೇತ್ರದ ಪ್ರದಕ್ಷಿಣೆ ಯಾತ್ರೆಯಲ್ಲಿ ಭಕ್ತರು ಸೈನಿಕರಂತೆ ಕೈಯಲ್ಲಿ ಗಗ್ಗರಣೆ ಹಿಡಿದು ಶ್ರೀ ಮರಳುಸಿದ್ದೇಶ್ವರ ಸ್ವಾಮಿಯ ಘೋಷಣೆ ಯೊಂದಿಗೆ ಸಾಗುತ್ತಾರೆ. ವಾತ್ಸವ್ಯ ಮಾಡುವ ಗ್ರಾಮಗಳ ಭಕ್ತರು ತಳಿರು ತೋರಣ ಗಳೊಂದಿಗೆ ಸ್ವಾಗತಿಸಲು ಸಿದ್ದ ಮಾಡಿ ಕೊಂಡಿರುತ್ತಾರೆ.

9 ಪಾದ ಗಟ್ಟೆಗಳಲ್ಲಿ ಹಾರಕನಾಳು ಗ್ರಾಮದಲ್ಲಿ ಕಡುಬಿನ ಕಾಳಗ ನಡೆಯುವುದು ವಿಶಿಷ್ಟ ವಾಗಿರುತ್ತದೆ. ವಿಶೇಷ ವೇನೆಂದರೆ ಮೊದಲು ತಳವಾರು ಮತ್ತು ಹರಿಜನ ದವರು ಮೊದಲು ಆರತಿ ಬೆಳಗುತ್ತಾರೆ. ಹೀಗೆ ಅನೇಕ ವಿಶೇಷ ಕಾರ್ಯಕ್ರಮದೊಂದಿಗೆ ಉಜ್ಜಯಿನಿಯ ಭರತ ಹುಣ್ಣಿಮೆ ಹಬ್ಬವು ಆಚರಿಸುತ್ತಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು