ಜಿಲ್ಲೆ ಮತ್ತು ತಾಲೂಕು ಆಡಳಿತ ನಡೆಸ ಬೇಕಾದರೆ ಎಂ.ಪಿ ಮತ್ತು ಎಂ.ಎಲ್.ಎ ಜೊತೆಯಾಗಿದ್ದರೆ ಅಭಿವೃದ್ಧಿ – ಯಶಸ್ಸು ಕಾಣಬಹುದು ಎಂದ ಶಾಸಕರು.
ರಾಜಪುರ ನ.11

ಸಂಡೂರುವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಇಂದು ರಾಜಪುರದಲ್ಲಿ ಚಿತ್ರದುರ್ಗ ಶಾಸಕರಾದ ಕೆ.ಸಿ ವೀರೇಂದ್ರ ಪಪ್ಪಿ ಅವರ ಜೊತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶ್ರೀಮತಿ ಅನ್ನಪೂರ್ಣ ತುಕಾರಾಂ ಅವರ ಪರವಾಗಿ ಪ್ರಚಾರ ಕೈಗೊಂಡರು ನಮ್ಮ ಸರ್ಕಾರದ ಪ್ರತಿಷ್ಠೆ ನಾವು ಉಳಿಸಿ ಕೊಳ್ಳಬೇಕು ಬಳ್ಳಾರಿ ಲೋಕಸಭಾ ಸದಸ್ಯರು ಹಾಗೂ ಸಂಡೂರು ಕ್ಷೇತ್ರದ ಶಾಸಕರು ಇದ್ದರೆ ಪರಮೇಶ್ವರ ಪಾರ್ವತಿ ಇವರಿಬ್ಬರು ಇದ್ದರೆ ಎಲ್ಲಾ ಕೆಲಸಗಳು ಸಲೀಸಾಗಿ ಸಾಗುತ್ತವೆ ಎಂದು ಅಭಿವೃದ್ಧಿ ಮಾಡಲಿಕ್ಕೆ ಅನುಕೂಲವಾಗುತ್ತಿದೆ ಎಂದು ಶಾಸಕರು ಮತದಾರರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಪಕ್ಷದ ಕಾರ್ಯಕರ್ತರು ಮತದಾರರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು