ಅರಣ್ಯ ಭೂಮಿ ಪೀಡಿತರ, ಬಗರ್ ಹುಕುಂ ಸಾಗುವಳಿ, ನಿರಾಶ್ರಿತರ, ಸಂತ್ರಸ್ತರ ಬೃಹತ್ ಸಭೆ – ತರೀಕೆರೆ.ಎನ್ ವೆಂಕಟೇಶ್.
ತರೀಕೆರೆ ಆ .12





ರಾಜ್ಯದ ಮಲೆನಾಡು ಮತ್ತು ಕರಾವಳಿ ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಮಂಗಳೂರು, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹಲವಾರು ದಶಕಗಳಿಂದ ಭೂಮಿ ವಿಚಾರದಲ್ಲಿ ಹಲವಾರು ಸಮಸ್ಯೆಗಳು ಇದ್ದರೂ ಆ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿರುವುದಿಲ್ಲ ಎಂದು ಅಹಿಂದ ಚಳುವಳಿಯ ರಾಜ್ಯ ಸಂಘಟನಾ ಸಂಚಾಲಕರಾದ ತರೀಕೆರೆ ಎನ್ ವೆಂಕಟೇಶ್ ರವರು ಹೇಳಿದರು. ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮಾಜಿ ಮಂತ್ರಿಗಳು ಹಾಗೂ ಹೋರಾಟಗಾರರಾದ ಕಾಗೋಡು ತಿಮ್ಮಪ್ಪ ರವರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಅರಣ್ಯ ಸಚಿವರು, ಕೈಗಾರಿಕಾ ಸಚಿವರು,ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು, ಶಾಸಕರುಗಳನ್ನು ಒಳಗೊಂಡು, ದಲಿತರ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅರಣ್ಯ ಭೂಮಿ ಪೀಡಿತರ, ಭಾದಿತರ, ನಿರಾಶ್ರಿತರ, ಸಂತ್ರಸ್ಥರ ಬೃಹತ್ ಸಭೆ ನಡೆಸಲು ಅಹಿಂದ ಚಳುವಳಿ ಸಂಘಟನೆಯು ಆಗಸ್ಟ್ 23 ರಂದು ಬೆಳಿಗ್ಗೆ 10.30 ಕ್ಕೆ ಶಿವಮೊಗ್ಗದ ಆರ್ ಟಿ ಓ ರಸ್ತೆಯಲ್ಲಿ ಇರುವ ಸರ್ಕಾರಿ ನೌಕರರ ಕಟ್ಟಡದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ಈ ಸಭೆಗೆ ಅರಣ್ಯ ಇಲಾಖೆಯವ ರಿಂದ ತೊಂದರೆಗೊಳಗಾದವರು, ಅರಣ್ಯ ಭೂಮಿ ಪೀಡಿತರು, ಬಾದಿತರು, ನಿರಾಶ್ರಿತರು, ವಸತಿ ಹೀನರು, ಸಂತ್ರಸ್ಥರು ದಾಖಲೆಗಳೊಂದಿಗೆ ಈ ಸಭೆಗೆ ಆಗಮಿಸಿ ತಮ್ಮ ಅವಹಹಾಲುಗಳನ್ನು ದಾಖಲೆ ಸಮೇತ ಅಹಿಂದ ಚಳುವಳಿಯ ಮುಖ್ಯ ಸಂಚಾಲಕರೊಂದಿಗೆ ವಿಮರ್ಶಿಸಿ ಮನವಿ ನೀಡಲು ಕರೆ ನೀಡಿದರು, ಅಹಿಂದ ಚಳುವಳಿಯ ರಾಜ್ಯ ಸಂಚಾಲಕಿಯಾದ ಶ್ರೀಮತಿ ಎಂ ವಿ ಭವಾನಿ ರವರು ಮಾತನಾಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಾಶ್ರಿತರಿಗೆ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ರಾಜ್ಯ ಸರ್ಕಾರ ಅರಣ್ಯ ಭೂಮಿ ಮಂಜೂರು ಮಾಡಿವೆ, ಅರಣ್ಯ ಸಂರಕ್ಷಣೆ ಕಾಯ್ದೆ 1980 ರಲ್ಲಿ ಡಿ- ನೋಟಿಫಿಕೇಶನಗಳಿಗೆ ಕರ್ನಾಟಕ ಸರ್ಕಾರದ ಮೂಲಕ ಯೋಜನಾ ನಿರಾಶ್ರಿತರ ಎಲ್ಲಾ ಸಾಗುವಳಿ ಅರಣ್ಯ ಭೂಮಿಯನ್ನು ಕಾನೂನು ಬದ್ಧವಾಗಿ ಸಕ್ರಮಗೊಳಿಸಲು ಒತ್ತಾಯಿಸಲಾಗುವುದು. 1978ರ ಪೂರ್ವದಲ್ಲಿನ 14. 848 .83 ಎಕ್ಟರ್ ಅರಣ್ಯ ಒತ್ತುವರಿ ಭೂಮಿಯನ್ನು ಸಕ್ರಮಗೊಳಿಸಲು ಒತ್ತಾಯಿಸಲಾಗುವುದು, ಅರಣ್ಯ ಭೂಮಿ ಒಳಗೆ ವಾಸಿಸುತ್ತಿದ್ದವರು ಮನೆಗಳಿಗೆ ಕರ್ನಾಟಕ ಕಂದಾಯ ಕಾಯಿದೆಯ 94c ಹಕ್ಕುಪತ್ರ ನೀಡಲು ಒತ್ತಾಯಿಸುವುದು, ಅರಣ್ಯ ಭೂಮಿ ಸಕ್ರಮಗೊಳಿಸಲು ಅರಣ್ಯ ಹಕ್ಕು ಕಾಯ್ದೆ 2006ರ ಕಾನೂನಿನಡಿ ಮತ್ತು ಅರಣ್ಯ ನಿವಾಸಿಗಳಿಗೆ ಸಕ್ರಮಕ್ಕೆ ಒತ್ತಾಯಿಸುವುದು, ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಕಾರ್ಖಾನೆಗಳು ಮುಚ್ಚಲಾಗಿದ್ದು ಕಾರ್ಮಿಕರಿಗೆ ಉದ್ಯೋಗಗಳು ಅಥವಾ ಪರಿಹಾರಗಳನ್ನು ಒದಗಿಸಲು ಒತ್ತಾಯಿಸುವುದು ಹಲವಾರು ಬೇಡಿಕೆಗಳನ್ನು ಇಟ್ಟು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲು, ಅಹಿಂದ ಚಳುವಳಿಯೊಂದಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಸಂಚಾಲಕಿಯಾದ ವಸಂತ ಕುಮಾರಿ ಕಡೂರು ರವರು ಮಾತನಾಡಿ ದಲಿತರು ಸತ್ತರೆ ಶವಸಂಸ್ಕಾರಕ್ಕೆ ಸ್ಮಶಾನಗಳು ಇಲ್ಲದಂತಾಗಿದೆ ಈ ಕುರಿತು ಹೋರಾಟಗಳನ್ನ ಮಾಡಬೇಕು ಎಂದು ಹೇಳಿದರು. ಜೈನರ ಸಮಾಜದ ಜಿಲ್ಲಾ ಸಂಚಾಲಕರಾದ ಜಿತೇಂದ್ರಬಾಬು ಕಡೂರು ರವರು ಮಾತನಾಡಿ ಹಿಂದುಳಿದವರಲ್ಲಿ ತುಂಬಾ ಜನರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತಿಲ್ಲ ಈ ಕುರಿತು ಗಮನ ಸೆಳೆಯುವಂತ ಕಾರ್ಯಕ್ರಮಗಳನ್ನ ಮಾಡಬೇಕು ಎಂದು ಹೇಳಿದರು. ಬಂಜಾರ ಲಂಬಾಣಿ ಸಮಾಜದ ಜಿಲ್ಲಾ ಸಂಚಾಲಕರಾದ ಎಚ್ ಎಲ್ ಮಂಜುನಾಥ ನಾಯ್ಕ್ ಮಾತನಾಡಿ ಹೊಸಳ್ಳಿ ತಾಂಡ್ಯದ ಅರ್ಧ ಗ್ರಾಮ ನಿವಾಸಿಗಳು ಮನೆ ನಿವೇಶನಗಳಿಲ್ಲದೆ ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದು ಹಕ್ಕುಪತ್ರಗಳು ಇಲ್ಲದಂತಾಗಿದೆ ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಕ್ರೈಸ್ತ ಸಮುದಾಯದ ಜಿಲ್ಲಾ ಸಂಚಾಲಕರಾದ ರಾಮಾಂಜನಿ ಮಾತನಾಡಿ ದಲಿತರ ಜಮೀನುಗಳು ಉಳ್ಳವರ ಒಡತನದಲ್ಲಿದೆ ಪಹಣಿ, ಎಮ್ ಆರ್ ಮುಂತಾದ ದಾಖಲೆಗಳು ದಲಿತರ ಹೆಸರಿನಲ್ಲಿ ಇದ್ದರೂ ಶ್ರೀಮಂತರು ಭೂಮಿಯನ್ನು ದಲಿತರಿಗೆ ಬಿಡದೆ ದೌರ್ಜನ್ಯ ಮಾಡುತ್ತಿದ್ದಾರೆ ದಲಿತರ ಜಮೀನುಗಳನ್ನು ದಾಖಲೆಗಳ ಪ್ರಕಾರ ಬಿಡಿಸಿಕೊಡಬೇಕು ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕು ಎಂದು ತಿಳಿಸಿದರು. ಮಾದಿಗ ಸಮಾಜದ ಜಿಲ್ಲಾ ಸಂಚಾಲಕರಾದ ಓಂಕಾರಪ್ಪ ನೇರಳಿಕೆರೆ ರವರು ಮಾತನಾಡಿ ಜಿಲ್ಲೆಯಲ್ಲಿ ಭೂಮಿ ಸಮಸ್ಯೆಯ ಸುಳಿಯಲ್ಲಿ ದಲಿತರು ಹಿಂದುಳಿದವರು ಅಲ್ಪಸಂಖ್ಯಾತರು ತುಂಬಾ ಜನ ಭಾದಿತರಿದ್ದಾರೆ ಅರಣ್ಯ ಇಲಾಖೆಯವರು ಸುಮಾರು ಗ್ರಾಮಗಳನ್ನೇ ನಮ್ಮದು ಎಂದು ಹೇಳುತ್ತಿದ್ದಾರೆ ಈ ಕುರಿತು ಬಳ್ಳಾವರ, ತಳಗೆಬೈಲು, ಕೃಷ್ಣಾಪುರ, ನಂದಿಬಟ್ಟಲು ಕಾಲೋನಿ, ಜೈಪುರ ಗ್ರಾಮಗಳ ಜನರು ದಾಖಲೆಗಳ ಸಮೇತ ಆಗಸ್ಟ್ 23 ರಂದು ಶಿವಮೊಗ್ಗದ ಈ ಸಭೆಗೆ ಆಗಮಿಸಬೇಕು ಎಂದು ತಿಳಿಸಿದರು. ತಾಲೂಕು ಸಂಚಾಲಕಿಯಾದ ಪದ್ಮರವರು ಮಾತನಾಡಿ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನು ಜೀವಂತವಾಗಿದೆ ಬಗುರುಕುಂ ಸಾಗುವಳಿದಾರರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ ಬಡ ರೈತರ ಸಮಸ್ಯೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ಆಗಬೇಕು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಸ್ತುವಾರಿ ಸಂಚಾಲಕರಾದ ಆದಿಲ್ ಪಾಷಾ ಅವರು ತಾಲೂಕು ಸಂಘಟನಾ ಸಂಚಾಲಕರುಗಳಾದ ವಾಣಿ, ಮಂಜುಳಾ, ವೇದಾವತಿ, ಚುಡಾಮಣಿ, ರಮ್ಯಾ, ಆಶಾ, ಬಂಜಾರ ಸಮಾಜದ ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್.ಇ ಪ್ರದೀಪ್, ಬಿ.ಕೃಷ್ಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್ ತರೀಕೆರೆ.ಚಿಕ್ಕಮಗಳೂರು